For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳ ದಿನಾಚರಣೆಗೆ ತೆರೆಮೇಲೆ ಅಪರೂಪದ ಪ್ರೇಮಕಾವ್ಯ

  By Pavithra
  |

  ನಾನು ಲವ್ವರ್ ಆಫ್ ಜಾನು, ಸುರೇಶ್ ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ. ಈಗಾಗಲೇ ಚಿತ್ರರಂಗದಲ್ಲಿ ಸಾಕಷ್ಟು ಲವ್ ಸ್ಟೋರಿ ಇರುವ ಸಿನಿಮಾಗಳು ತೆರೆಗೆ ಬಂದಿದೆ. ಆದರೆ ವಿಭಿನ್ನ ರೀತಿಯ ಮತ್ತು ಅಪರೂಪದ ಪ್ರೇಮಕತೆಯನ್ನ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ ಈ ಹೊಸ ತಂಡ.

  ಪ್ರೀತಿಯಲ್ಲಿ ಕ್ರಾಂತಿ ಇರುತ್ತೆ. ಇವೆರಡರ ಮಧ್ಯೆ ಯಾವುದಕ್ಕೆ ಜಯ ಸಿಗುತ್ತೇ ಎನ್ನುವ ಎಳೆಯನ್ನ ಇಟ್ಟುಕೊಂಡು ಸಿನಿಮಾದ ಕಥೆಯನ್ನ ಎಣೆಯಲಾಗಿದೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡುಗಳು ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ.

  ನಾನು ಲವ್ವರ್ ಆಫ್ ಜಾನು ಸಿನಿಮಾದ ಮೂಲಕ ನವ ನಟ ವಿಶಾಲ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಟಿ ಮಂಜುಳಾ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ರಾಕಲೈನ್ ಸುಧಾಕರ್, ಸುಚೇಂದ್ರ ಪ್ರಸಾದ್, ಕಡ್ಡಿಪುಡಿ ಚಂದ್ರು, ಸೇರಿದಂತೆ ಇನ್ನೂ ಅನೇಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  ಚಂದ್ರು ಕೆವಿ, ರಾಜು ಕುಲಕರ್ಣಿ, ವಿಷ್ಣು ಹಾಗು ರವಿಶಂಕರ್ ಸೇರಿ ನಾನು ಲವ್ವರ್ ಆಫ್ ಜಾನು ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಪ್ರೇಮ ಕಥೆ ಇರುವ ಸಿನಿಮಾ ಆಗಿರುವುದರಿಂದ ಪ್ರೇಮಿಗಳ ದಿನಾಚರಣೆಗೆ ಚಿತ್ರವನ್ನ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕರು.

  ಈಗಾಗಲೇ ಚಿತ್ರದ ಹಾಡುಗಳು ಮತ್ತು ಟೀಸರ್ ಬಿಡುಗಡೆ ಮಾಡಿದ್ದು ಟೀಸರ್ ಗೆ ನಿರ್ದೇಶಕ ಯೋಗರಾಜ್ ಭಟ್ ಹಿನ್ನಲೆ ಧ್ವನಿಯನ್ನ ನೀಡಿದ್ದಾರೆ. ಜಯಣ್ಣ-ಭೋಗೇಂದ್ರ ನಾನು ಲವ್ವರ್ ಆಪ್ ಜಾನು ಸಿನಿಮಾವನ್ನ ವಿತರಣೆ ಮಾಡಲಿದ್ದು ಪ್ರೇಮಿಗಳ ದಿನಕ್ಕೆ ಅಪರೂಪದ ಪ್ರೇಮಕಾವ್ಯ ತೆರೆ ಮೇಲೆ ಬರಲಿದೆ.

  English summary
  Naanu lover of Jaanu kannada movie releasing on feb 9th. actor Vishal plays the lead in the film. Suresh G directed the Naanu lover of Jaanu film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X