'ಬಸಣ್ಣಿ' ಹುಡುಗಿಯ ಮತ್ತೊಂದು ಸೂಪರ್ ಹಾಡು ಕೇಳಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಹಾಡುಗಳು ಸಖತ್ ಸದ್ದು ಮಾಡ್ತಿವೆ. ಮೂರು ಹಾಡು ರಿಲೀಸ್ ಆಗಿದ್ದು ಮೂರು ಹಾಡು ಸೂಪರ್ ಹಿಟ್ ಆಗಿವೆ. ಅದರಲ್ಲೂ ಇತ್ತೀಚಿಗಷ್ಟೆ ತೆರೆಕಂಡಿದ್ದ 'ಬಸಣ್ಣಿ' ಹಾಡು ಪಡ್ಡೆ ಹೈಕ್ಳ ಮನಗೆದ್ದಿದೆ.

ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಮತ್ತು ವರ್ಷ ಸುರೇಶ್ ಅವರ ಗಾಯನ ಸಖತ್ ಕಿಕ್ ನೀಡಿದೆ. ಈ ಹಾಡಿನ ಮೂಲಕ ವರ್ಷ ಸುರೇಶ್ ಗೆ ಬಹುದೊಡ್ಡ ಬ್ರೇಕ್ ಸಿಕ್ಕಿದೆ.

Naav manelirodilla female version by varsha suresh

ಹಲವು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವರ್ಷ ಹರಿಕೃಷ್ಣ ಅವರ ಬಳಿ ಟ್ರಾಕ್ ಸಿಂಗರ್ ಆಗಿದ್ದರು. ಜೊತೆಗೆ ಕೆಲವು ಚಿತ್ರಗೀತೆಗಳನ್ನ ಕೂಡ ಹಾಡಿದ್ದಾರೆ. ಆದ್ರೀಗ, 'ಬಸಣ್ಣಿ' ಹಾಡಿನ ಮೂಲಕ ಇಡೀ ಕರ್ನಾಟಕದ ಜನರ ಮನಸ್ಸು ಕದ್ದಿದ್ದಾರೆ.

ಇದೀಗ, ವರ್ಷ ಸುರೇಶ್ ಅವರ ಇನ್ನೊಂದು ಹಾಡು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. 'ವಿಕ್ಟರಿ-2' ಚಿತ್ರದ 'ನಾನು ಮನೆಗೋಗೋದಿಲ್ಲ' ಹಾಡಿನ ಫೀಮೇಲ್ ವರ್ಷನ್ ಗೆ ವರ್ಷ ಧ್ವನಿಯಾಗಿದ್ದು, ಈ ಹಾಡು ಕೂಡ ಮಸ್ತ್ ಆಗಿದೆ.

Naav manelirodilla female version by varsha suresh

'ನಾನು ಮನೆಗೋಗೋದಿಲ್ಲ' ಹಾಡಿನಲ್ಲಿ ಮಹಿಳೆಯರು ತಮ್ಮ ಪತಿಯರನ್ನ ಹೇಗೆಲ್ಲಾ ಪ್ರಶ್ನಿಸುತ್ತಾರೆ ಎಂದು ಹೇಳಲಾಗಿತ್ತು. ಫೀಮೇಲ್ ವರ್ಷನ್ ನಲ್ಲಿ ಮಹಿಳೆಯರ ಕಷ್ಟವನ್ನ ಯಾರೂ ಕೇಳೋರಿಲ್ಲ ಎಂದು ಹೇಳಲಾಗಿದೆ.

ಅಂದ್ಹಾಗೆ, 'ನಾವು ಮನೇಲಿರೋದಿಲ್ಲ' ಫೀಮೇಲ್ ವರ್ಷನ್ ಗೆ ಜೆ ಚಿತ್ರಕಲಾ ಅವರು ಸಾಹಿತ್ಯ ಬರೆದಿದ್ದು, ವರ್ಷ ಸುರೇಶ್ ಮತ್ತು ಚಿತ್ರಕಲಾ ಹಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಈ ಹಾಡು ಅಪ್ ಲೋಡ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

More from Filmibeat

English summary
Watch Full Video Song of Naav Manelirodilla Female Version. song written by j chitrakala and sing by varsha b suresh and jack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X