For Quick Alerts
  ALLOW NOTIFICATIONS  
  For Daily Alerts

  ಮಿರಾಕಿ ಕಿರುಚಿತ್ರೋತ್ಸವದಲ್ಲಿ 'ನಾವು(We)'ಗೆ ಪ್ರೇಕ್ಷಕರ ಆಯ್ಕೆಯ ಪ್ರಶಸ್ತಿ

  By Suneel
  |

  2017 ನೇ ಸಾಲಿನ 'ಮಿರಾಕಿ ಇಂಟರ್ ನ್ಯಾಷನಲ್ ಇಂಡಿಯನ್ ಶಾರ್ಟ್‌ ಫಿಲ್ಮ್ ಫೆಸ್ಟಿವಲ್'ನಲ್ಲಿ ಕನ್ನಡದ 'ನಾವು(We)' ಹೆಸರಿನ ಕಿರುಚಿತ್ರಕ್ಕೆ ಪ್ರೇಕ್ಷಕರ ಆಯ್ಕೆಯ ಉತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

  ಬೆಂಗಳೂರಿನಲ್ಲಿ ಇತ್ತೀಚೆಗಷ್ಟೆ ನಡೆದ ಮಿರಾಕಿ ಕಿರುಚಿತ್ರೋತ್ಸವಕ್ಕೆ ಪ್ರೇಕ್ಷಕರ ಆಯ್ಕೆಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿರುವ 'ನಾವು' ಚಿತ್ರವನ್ನು ಅಮೋಲ್ ಪಾಟೀಲ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ-ಸಂಭಾಷಣೆಯನ್ನು ಕುಮುದವಲ್ಲಿ ಅರುಣಮೂರ್ತಿ ರವರು ಬರೆದಿದ್ದು, ಸಾಯಿ ಕಿರಣ್ ರವರ ಸಂಗೀತ, ಜೆರೋಮ್ ಜಾಯ್ ಥೊಪ್ಪಿಲ್ ಎಂಬುವರ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ.

  ಚಿತ್ರಕ್ಕೆ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಚಿತ್ರಕಥೆ-ಸಂಭಾಷಣೆ ಬರೆದಿರುವ ಕುಮುದವಲ್ಲಿ ಅರುಣಮೂರ್ತಿ ರವರು ವೋಟ್ ಮಾಡಿದವರಿಗೆ ಫೇಸ್ ಬುಕ್ ನಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಚಿತ್ರ ನೋಡಿದವರು ಒಳ್ಳೆಯ ಸಂದೇಶವಿದೆ, ಇಂತಹ ಸಂದೇಶದ ಅವಶ್ಯಕತೆ ಸಮಾಜಕ್ಕಿದೆ ಎಂದು ತುಂಬು ಮನದಿಂದ ಹೇಳಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೆ ಪ್ರೇಕ್ಷಕರ ಆಯ್ಕೆಯ 'ನಾವು(We)' ಚಿತ್ರ ಹೇಗಿದೆ, ಯಾವ ಸಂದೇಶವನ್ನು ನೀಡಿದೆ ಎಂದು ನೀವು ಒಮ್ಮೆ ನೋಡಲು ಕ್ಲಿಕ್ ಮಾಡಿ

  English summary
  'Naavu'(We) Short film got Audience Choice Award in 'Meraki Short Film Festival'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X