ದುಬಾರಿ ಕಾರು ಖರೀದಿಸಿದ 'ಪಟಾಕ' ನಭಾ ನಟೇಶ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದಲ್ಲಿ ಪಟಪಟ ಅಂತ ಮಾತನಾಡುವ 'ಪಟಾಕ ಪಾರ್ವತಿ' ಪಾತ್ರದಲ್ಲಿ ನಟಿಸಿದ ಬೆಡಗಿ ನಭಾ ನಟೇಶ್. ಬಜಾರಿ ಪಾತ್ರದಲ್ಲಿ ಮಿಂಚಿ ಬೇಡಿಕೆ ಕಂಡುಕೊಂಡ ನಭಾ ನಟೇಶ್ 'ಸಾಹೇಬ', 'ಲೀ' ಚಿತ್ರಗಳ ನಂತರ ಟಾಲಿವುಡ್ ಕಡೆ ಮುಖ ಮಾಡಿದರು.
ಸದ್ಯ ಟಾಲಿವುಡ್ ನಲ್ಲಿ ಬಿಜಿಯಾಗಿರುವ ನಭಾ ನಟೇಶ್ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ. ನಟಿ ನಭಾ ನಟೇಶ್ ದುಬಾರಿ ಬೆಲೆಯ ಮರ್ಸಿಡೀಸ್ ಬೆಂಜ್ ಕಾರನ್ನು ಖರೀದಿ ಮಾಡಿದ್ದಾರೆ.
ಕೆಂಪು ಬಣ್ಣದ ಮರ್ಸಿಡೀಸ್ ಬೆಂಜ್ ನಭಾ ನಟೇಶ್ ಮನೆ ಸೇರಿದೆ. ತಂದೆ ನಟೇಶ್, ತಾಯಿ ಭಾಗ್ಯಲಕ್ಷ್ಮಿ ಜೊತೆಗೂಡಿ ಇಷ್ಟದ ಕಾರನ್ನು ನಭಾ ಕೊಂಡುಕೊಂಡಿದ್ದಾರೆ. ಅಂದ್ಹಾಗೆ, ಈ ಐಷಾರಾಮಿ ಕಾರಿನ ಬೆಲೆ ಅರ್ಧ ಕೋಟಿಗೂ ಹೆಚ್ಚು.

ಮರ್ಸಿಡೀಸ್ ಬೆಂಜ್ ತಮ್ಮ ಕೈ ಸೇರುತ್ತಿದ್ದಂತೆಯೇ ಒಂದು ಲಾಂಗ್ ಡ್ರೈವ್ ಹೋಗಿ ನಭಾ ನಟೇಶ್ ಮತ್ತು ಫ್ಯಾಮಿಲಿ ಖುಷಿ ಪಟ್ಟಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದ ನಭಾ ನಟೇಶ್ ಇದೀಗ ಲಕ್ಷುರಿ ಕಾರಿನ ಒಡತಿ ಆಗಿದ್ದಾರೆ.
ಸದ್ಯ ತೆಲುಗು ಸಿನಿ ಅಂಗಳದಲ್ಲೇ ನೆಲೆಯೂರಿರುವ ನಭಾ ನಟೇಶ್ 'ಡಿಸ್ಕೋ ರಾಜ' ಚಿತ್ರದಲ್ಲಿ ಬಿಜಿಯಾಗಿದ್ದಾರೆ.


Click it and Unblock the Notifications











