For Quick Alerts
  ALLOW NOTIFICATIONS  
  For Daily Alerts

  'ಜನುಮದ ಜೋಡಿ' ಖ್ಯಾತಿಯ ಹಿರಿಯ ನಟ ಏಣಗಿ ಬಾಳಪ್ಪ ವಿಧಿವಶ

  By Bharath Kumar
  |

  ಕನ್ನಡದ ಹಿರಿಯ ಕಲಾವಿದ ನಾಡೋಜ ಏಣಗಿ ಬಾಳಪ್ಪ (103) ಅವರು ಇಂದು (ಶುಕ್ರವಾರ) ಸವದತ್ತಿ ತಾಲೊಕಿನ ಏಣಗಿ ಗ್ರಾಮದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಳಪ್ಪ ಅವರು ನೂರಕ್ಕೂ ಹೆಚ್ಚು ನಾಟಕ, ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.

  ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಜನುಮದ ಜೋಡಿ', 'ಗಡಿಬಿಡಿ ಕೃಷ್ಣ', 'ಗಾನಯೋಗಿ ಪಂಚಾಕ್ಷರಿ ಗವಾಯಿ', 'ಪರೀಕ್ಷೆ', 'ಮಾಡಿ ಮಡಿದವರು' ಅಂತಹ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.

  ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ್ದ ಬಾಳಪ್ಪ ಅವರು ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಏಣಗಿ ಬಾಳಪ್ಪನವರ ಹಿನ್ನೆಲೆ

  ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ್ದ ಬಾಳಪ್ಪ ಅವರು ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಏಣಗಿ ಬಾಳಪ್ಪನವರ ರಂಗಸಾಧನೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ಬಿರುದು ಬಾವಲಿಗಳನ್ನಕೊಟ್ಟು ಗೌರವಿಸಿವೆ.

  English summary
  One of the famous theater artist and Film Actor Enagi Balappa (103) passed away in Enagi village, Belagavi district on August 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X