ಚಿತ್ರಗಳು: ಟಾಲಿವುಡ್ ಪ್ರೇಮಪಕ್ಷಿ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ
ಇಷ್ಟು ದಿನ ಕದ್ದು ಮುಚ್ಚಿ ಜೊತೆ ಜೊತೆಯಾಗಿ ಓಡಾಡುತ್ತಿದ್ದ ಟಾಲಿವುಡ್ ನ ಪ್ರೇಮಪಕ್ಷಿಗಳು ಈಗ ಅಧೀಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಹೌದು, ನಾಗಚೈತನ್ಯ ಹಾಗೂ ಸಮಂತಾ ಅವರ ನಿಶ್ಚಿತಾರ್ಥ ಹೈದರಾಬಾದ್ ನಲ್ಲಿ ನಿನ್ನೆ (ಜನವರಿ 29) ನೆರವೇರಿದೆ.
'ಹೇ ಮಾಯೆ ಚೇಸಾವೆ' ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆ ಹಂಚಿಕೊಂಡ 'ನಾಗ್ ಮತ್ತು ಸಮ್ಮು' ಈಗ ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು ಈಗ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನ ಮತ್ತಷ್ಟು ಗಟ್ಟಿಯಾಗಿಸಿದ್ದಾರೆ.[ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಧಾಂ-ಧೂಂ ಮದುವೆ]
ಹಾಗಾದ್ರೆ, ನಾಗಚೈತನ್ಯ ಹಾಗೂ ಸಮಂತಾ ಅವರ ಕಲರ್ ಫುಲ್ ನಿಶ್ಚಿತಾರ್ಥ ಕಾರ್ಯಕ್ರಮ ಹೇಗಿತ್ತು ಅಂತ ಇಲ್ಲಿದೆ ನೋಡಿ....

ನಾಗಚೈತನ್ಯ-ಸಮಂತಾ ನಿಶ್ಚಿತಾರ್ಥ!
ಟಾಲಿವುಡ್ ಮುದ್ದು ಜೋಡಿ ನಾಗಚೈತನ್ಯ ಮತ್ತು ಸಮಂತಾ ಅವರ ನಿಶ್ಚಿತಾರ್ಥ ಹೈದರಾಬಾದ್ ನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ (ಜನವರಿ 29) ನೆರೆವೇರಿತ್ತು.[ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?]

ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯ
ಬ್ಯೂಟಿಫುಲ್ ಜೋಡಿಗಳ ನಿಶ್ಚಿತಾರ್ಥ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯ ಪ್ರಕಾರ ಮಾಡಿಕೊಳ್ಳಲಾಯಿತು. ಈ ಸಂತಸದ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಭಾಗಿಯಾಗಿದ್ದರು.

ಬ್ಯೂಟಿಫುಲ್ ಸಮಂತಾ
ಕ್ರೇಶಾ ಬಜಾಜ್ ಅವರು ಡಿಸೈನ್ ಮಾಡಿರುವ ಬಿಳಿ ಹಾಗೂ ಚಿನ್ನದ ಬಣ್ಣ ಮಿಶ್ರಿತ ಸೀರೆಯಲ್ಲಿ ಸಮಂತಾ ಅವರು ದೇವಕನ್ಯೆಯಂತೆ ಕಂಗೊಳಿಸುತ್ತಿದ್ದರು.

ಅಕ್ಕಿನೇನಿ ಕುಟುಂಬ!
ನಾಗಚೈತನ್ಯ ಮತ್ತು ಸಮಂತಾ ನಿಶ್ಚಿತಾರ್ಥದಲ್ಲಿ ಅಕ್ಕಿನೇನಿ ಕುಟುಂಬ ಕಾಣಿಸಿಕೊಂಡಿದ್ದು ಹೀಗೆ. ಅಕ್ಕಿನೇನಿ ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿ, ನಾಗಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ಮತ್ತು ಅವರ ಭಾವಿ ಪತ್ನಿ ಶ್ರೇಯಾ ಭೂಪಾಲ್ ಭಾಗಿಯಾಗಿದ್ದರು.

ಸಮಂತಾ ಫ್ಯಾಮಿಲಿ
ನಾಗಚೈತನ್ಯ ಮತ್ತು ಸಮಂತಾ ನಿಶ್ಚಿತಾರ್ಥದಲ್ಲಿ ಸಮಂತಾ ಅವರ ತಂದೆ ಪ್ರಭು ಮತ್ತು ತಾಯಿ ನವವಧು ವರರಿಗೆ .

ನಾಗಾರ್ಜುನ ಟ್ವೀಟ್
ಅಕ್ಕಿನೇನಿ ನಾಗಾರ್ಜುನ ಅವರು, ತಮ್ಮ ಟ್ವೀಟರ್ ನಲ್ಲಿ ನಾಗಚೈತನ್ಯ ಹಾಗೂ ಸಮಂತಾ ಅವರ ನಿಶ್ಚಿತಾರ್ಥದ ಫೋಟೊಗಳನ್ನ ಪೋಸ್ಟ್ ಮಾಡಿ, ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಇಷ್ಟು ದಿನ ನಾಗಚೈತನ್ಯ-ಸಮಂತಾ ಇದ್ದ ಅಂತೆ-ಕಂತೆಗಳಿಗೆಲ್ಲಾ ಬ್ರೇಕ್ ಹಾಕಿದ್ದಾರೆ.

ಮದುವೆ ಯಾವಾಗ?
ಸದ್ಯ, ಸಂಪ್ರದಾಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಾಗಚೈತನ್ಯ ಮತ್ತು ಸಮಂತಾ ಅವರ ಮದುವೆ 2018 ರಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಸಿನಿಮಾಗಳು?
ಸದ್ಯ, ಕಲ್ಯಾಣ ಕೃಷ್ಣ ಕುರಸಾಲ ನಿರ್ದೇಶನ ಮಾಡುತ್ತಿರುವ ''NC13'' ಎಂಬ ಚಿತ್ರದಲ್ಲಿ ನಾಗಚೈತನ್ಯ ನಟಿಸುತ್ತಿದ್ದಾರೆ. ಇನ್ನೂ ಸಮಂತಾ ತಮಿಳಿನಲ್ಲಿ ವಿಶಾಲ್ ಅಭಿನಯದ 'ಇರುಂಬು ತಿರೈ' ಮತ್ತು ವಿಜಯ್ ಸೇತುಪತಿ ಅಭಿನಯದ 'ಅನೀತಿ ಕಥೈಗಳ್' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











