twitter
    For Quick Alerts
    ALLOW NOTIFICATIONS  
    For Daily Alerts

    ರಶ್ಮಿಕಾಗೆ ಹುಡುಕಿಕೊಂಡು ಬಂತು ಮತ್ತೊಂದು ಸ್ಟಾರ್ ನಟನ ಚಿತ್ರ.!

    |

    ದಕ್ಷಿಣ ಭಾರತದ ಸ್ಟಾರ್ ನಟರ ನೆಚ್ಚಿನ ಹೀರೋಯಿನ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣಗೆ ಒಂದರ ಮೇಲೊಂದು ಚಿತ್ರಗಳು ಹುಡುಕಿಕೊಂಡು ಬರುತ್ತಲೇ ಇದೆ. ಈಗಾಗಲೇ ತೆಲುಗು ಮತ್ತು ತಮಿಳಿನಲ್ಲಿ ದೊಡ್ಡ ನಟರ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಕೊಡಗಿನ ಕುವರಿ ಈಗ ಇನ್ನೊಬ್ಬ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ಪೊಗರು, ಮಹೇಶ್ ಬಾಬು ನಟನೆಯ ಸರಿಲೇರು ನೀಕೆವರು, ಅಲ್ಲು ಅರ್ಜುನ್ ಅವರ 20ನೇ ಚಿತ್ರ, ತಮಿಳು ನಟ ಕಾರ್ತಿ ಜೊತೆ ಸುಲ್ತಾನ್, ನಿತೀನ್ ಜೊತೆ ಭೀಷ್ಮ ಮಾಡುತ್ತಿದ್ದಾರೆ.

    ಬ್ಯಾಕ್ ಲೆಸ್ ಟಾಪ್ ನಲ್ಲಿ ರಶ್ಮಿಕಾ ಮಂದಣ್ಣ ಬೋಲ್ಡ್ ಫೋಟೋಶೂಟ್ಬ್ಯಾಕ್ ಲೆಸ್ ಟಾಪ್ ನಲ್ಲಿ ರಶ್ಮಿಕಾ ಮಂದಣ್ಣ ಬೋಲ್ಡ್ ಫೋಟೋಶೂಟ್

    ಇದರ ಜೊತೆಗೆ ಸೌತ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟನ ಮಗನ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ, ಆ ನಟ ಯಾರು? ಆ ಚಿತ್ರ ಯಾವುದು? ಮುಂದೆ ಓದಿ....

    ನಾಗಚೈತನ್ಯ ಚಿತ್ರಕ್ಕೆ ರಶ್ಮಿಕಾ ನಾಯಕಿ.!

    ನಾಗಚೈತನ್ಯ ಚಿತ್ರಕ್ಕೆ ರಶ್ಮಿಕಾ ನಾಯಕಿ.!

    ನಾಗಾರ್ಜುನ ಅವರ ಕಿರಿಯ ಪುತ್ರ ಅಕ್ಕಿನೇನಿ ಅಖಿಲ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿದ್ದಾಗಲೇ ಇನ್ನೊಂದು ಸುದ್ದಿ ಚರ್ಚೆಯಾಗುತ್ತಿತ್ತು. ಅಖಿಲ್ ಜೊತೆಯಲ್ಲ ನಾಗಚೈತನ್ಯ ಜೊತೆ ನಟಿಸಲಿದ್ದಾರೆ ಎನ್ನಲಾಯಿತು. ಆದರೆ, ಅದು ಪಕ್ಕಾ ಆಗಿರಲಿಲ್ಲ. ಇದೀಗ ಖಾಸಗಿ ಸುದ್ದಿ ವಾಹಿನಿಯೊಂದು ಈ ಸುದ್ದಿಯನ್ನ ಅಧಿಕೃತ ಮಾಡಿದೆ.

    ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ

    ಅದೇ ನುವ್ವು ಅದೇ ನೇನು

    ಅದೇ ನುವ್ವು ಅದೇ ನೇನು

    ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ 'ಬದಾಯಿ ಹೋ' ಚಿತ್ರವನ್ನ ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ಈ ಚಿತ್ರದಲ್ಲಿ ನಾಗಚೈತನ್ಯ ಮತ್ತು ರಶ್ಮಿಕಾ ನಟಿಸುವ ಸಾಧ್ಯತೆ ಇದೆ. ಈ ಚಿತ್ರಕ್ಕೆ 'ಅದೇ ನುವ್ವು ಅದೇ ನೇನು'' ಎಂದು ಹೆಸರಿಡಲಾಗಿದೆಯಂತೆ.

    ಟಿವಿ ಹಕ್ಕು ಸೇಲ್

    ಟಿವಿ ಹಕ್ಕು ಸೇಲ್

    ಅಂದ್ಹಾಗೆ, ಈ ಸುದ್ದಿ ಇಷ್ಟು ದಿನ ವದಂತಿಯಾಗಿತ್ತು. ಆದರೀಗ, ಜೆಮಿನಿ ಟಿವಿ ವಾಹಿನಿ ತಮ್ಮ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದೆ. ''ನಾಗಚೈತನ್ಯ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅದೇ ನುವ್ವು ಅದೇ ನೇನು ಚಿತ್ರದ ಪ್ರಸಾರ ಹಕ್ಕು ಜೆಮಿನಿ ಟಿವಿ ಖರೀದಿ ಮಾಡಿದೆ'' ಎಂದು ಅಫೀಶಿಯಲ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

    ಅಮ್ಮ ಸೆರೆಹಿಡಿದ ಅಪರೂಪದ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣಅಮ್ಮ ಸೆರೆಹಿಡಿದ ಅಪರೂಪದ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಸಿನಿಮಾನೇ ಆರಂಭವಾಗಿಲ್ಲ

    ಸಿನಿಮಾನೇ ಆರಂಭವಾಗಿಲ್ಲ

    'ಫಿದಾ' ಸಿನಿಮಾ ನಿರ್ದೇಶನ ಮಾಡಿದ್ದ ಶೇಖರ್ ಕುಮ್ಮುಲು ಜೊತೆ ಈಗಾಗಲೇ ನಾಗಚೈತನ್ಯ ಒಂದು 'ವೆಂಕಿಮಾಮ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಅದಾದ ಬಳಿಕ ಕೂಡ ಶೇಖರ್ ಕುಮ್ಮುಲು ಮತ್ತು ನಾಗಚೈತನ್ಯ ಕಾಂಬಿನೇಷನ್ನಲ್ಲಿ ಇನ್ನೊಂದು ಸಿನಿಮಾ ಬರಲಿದೆಯಂತೆ. ಆ ಚಿತ್ರವೇ 'ಅದೇ ನುವ್ವು ಅದೇ ನೇನು' ಎಂದು ಹೇಳಲಾಗಿದೆ.

    ರಶ್ಮಿಕಾಗೆ ಹೊಡಿತು ಲಾಟರಿ: ಶಾಹೀದ್ ಕಪೂರ್ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ!ರಶ್ಮಿಕಾಗೆ ಹೊಡಿತು ಲಾಟರಿ: ಶಾಹೀದ್ ಕಪೂರ್ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ!

    ಜೆಮಿನಿ ಟಿವಿ ಟ್ವೀಟ್ ಮೇಲೆ ಗೊಂದಲ

    ಜೆಮಿನಿ ಟಿವಿ ಟ್ವೀಟ್ ಮೇಲೆ ಗೊಂದಲ

    ನಾಗಚೈತನ್ಯ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಾರೆ ಎನ್ನಲಾಗುತ್ತಿರುವ ಅದೇ ನುವ್ವು ಅದೇ ನೇನು ಚಿತ್ರದ ಬಗ್ಗೆ ಚಿತ್ರತಂಡದ ಯಾರೊಬ್ಬರು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಜೆಮಿನಿ ಟಿವಿ ಈ ಬಗ್ಗೆ ಟ್ವೀಟ್ ಮಾಡಿದೆ. ಹಾಗಾಗಿ, ಇದು ಗೊಂದಲಕ್ಕೆ ಕಾರಣವಾಗಿದೆ. ಇದು ನಿಜಾನಾ ಅಥವಾ ಜೆಮಿನಿ ಟವಿಯವರು ಮಾಹಿತಿ ಇಲ್ಲದೇ ಕನ್ ಫ್ಯೂಸ್ ಆಗಿ ಟ್ವೀಟ್ ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆಲ್ಲಾ ಉತ್ತರವನ್ನ ಚಿತ್ರತಂಡವೇ ಕೊಡಬೇಕಿದೆ.

    English summary
    Kannada actress Rashmika Mandanna pair up with Naga chaitanya in her next movie. its titled as ade nuvvu ade nenu.
    Friday, September 13, 2019, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X