»   » ಕಾಳಹಸ್ತಿಯಲ್ಲಿ ನಾಗಚೈತನ್ಯ, ಅನುಷ್ಕಾ ನಾಗಪೂಜೆ

ಕಾಳಹಸ್ತಿಯಲ್ಲಿ ನಾಗಚೈತನ್ಯ, ಅನುಷ್ಕಾ ನಾಗಪೂಜೆ

By: ಅನಂತರಾಮು
Subscribe to Filmibeat Kannada

ಈ ಹಿಂದೆಮ್ಮೊ ಇವರಿಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಆದರಿದು ಕೇವಲ ವದಂತಿ ಅಷ್ಟೇ ಎಂಬುದು ಬಳಿಕ ಗೊತ್ತಾಗಿ ಎಲ್ಲವೂ ತಣ್ಣಗಾಗಿತ್ತು.

ಈಗ ಮತ್ತೊಮ್ಮೆ ಇಬ್ಬರೂ ಶ್ರೀಕಾಳಹಸ್ತಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಕಾಳಹಸ್ತಿಗೆ ಭೇಟಿ ನೀಡಿ ಪ್ರತ್ಯೇಕವಾಗಿ ಪೂಜೆ ಮಾಡಿಸಿಕೊಂಡಿದ್ದಾರೆ. ಆದರೆ ಇಬ್ಬರೂ ಒಂದೇ ದಿನ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಕೇವಲ ಕಾಕತಾಳೀಯವಷ್ಟೇ ಎನ್ನಲಾಗಿದೆ.


ಇಬ್ಬರೂ ಆಲಯದ ಸಹಸ್ರನಾಮ ಲಿಂಗದ ಬಳಿ ರಾಹುಕೇತು ಪೂಜೆಗಳನ್ನು ಮಾಡಿಸಿದ್ದಾರೆ. ತ್ರಿನೇತ್ರ ಅತಿಥಿ ಗೃಹದಿಂದ ಅನುಷ್ಕಾ ಶೆಟ್ಟಿ ಬಿಗಿ ಭದ್ರತೆಯಲ್ಲಿ ಆಲಯಕ್ಕೆ ಆಗಮಿಸಿ ಮುಕ್ಕಣ್ಣನ ದರ್ಶನ ಭಾಗ್ಯ ಪಡೆದರು. ಈ ಸಂದರ್ಭದಲ್ಲಿ ಆಕೆಯೊಂದಿಗಿದ್ದ ಭದ್ರತಾ ಸಿಬ್ಬಂದಿ ಮಾಧ್ಯಮಗಳ ಜೊತೆ ಅನುಚಿತವಾಗಿ ವರ್ತಿಸಿದರು.

ದೇವಸ್ಥಾನಕ್ಕೆ ಬಂದರೂ ಈ ಮಾಧ್ಯಮದವರಿಂದ ನೆಮ್ಮದಿ ಸಿಗದಂತಾಗಿದೆ ಎಂದು ಅನುಷ್ಕಾ ಕೋಪಿಸಿಕೊಂಡ ಘಟನೆಯೂ ನಡೆಯಿತು. ಏತನ್ಮಧ್ಯೆ ಅನುಷ್ಕಾ ಅಭಿಮಾನಿಗಳು ಆಕೆಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿತು. ಎಚ್ಚೆತ್ತುಕೊಂಡ ಆಲಯ ಸಿಬ್ಬಂದಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಯಿತು.

English summary
As per the reports, actress Anushka Shetty and Naga Chaityana visited the Sri Kalahasti Temple yesterday to perform the Rahu Ketu Sarpa Dosha Puja to ward off all the ill-effects mostly coming in her life due to due to Naga Dosham. After the worship, she was given Teertha and Prasada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada