ತೆಲುಗು ನಟ ನಾಗಶೌರ್ಯ ಕನ್ನಡದ ಈ ಸ್ಟಾರ್ ನಟರ ಚಿತ್ರಗಳನ್ನು ನೋಡ್ತಾರಂತೆ!

ತೆಲುಗು ನಟ ನಾಗಶೌರ್ಯ ಇತ್ತೀಚಿಗಷ್ಟೆ ಬೆಂಗಳೂರಿಗೆ ಆಗಮಿಸಿದ್ದರು. 'ಚಲೋ' ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಾಗಶೌರ್ಯ ಖ್ಯಾತಿ ಹೆಚ್ಚಿದ್ದು, ಇದೀಗ ತಮ್ಮ ಮುಂದಿನ ಚಿತ್ರದ ಪ್ರಚಾರಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದ್ದರು.

Recommended Video

Darshan's Robert movie shooting completed | DARSHAN | ROBERT | SANDALWOOD | FILMIBEAT KANNADA

'ಅಶ್ವತ್ಥಾಮ' ಸಿನಿಮಾ ಜನವರಿ 31 ರಂದು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ವಿತರಣೆಯನ್ನು ರಾಕ್ ಲೈನ್ ಪ್ರೊಡಕ್ಷನ್ ಖರೀದಿಸಿದೆ.

'ಅಶ್ವತ್ಥಾಮ' ಸಿನಿಮಾ ನೈಜ ಕಥೆಯಾಧರಿತ ಕಥೆಯಾಗಿದ್ದು, ಅದರಿಂದ ಸ್ಫೂರ್ತಿಯಾಗಿ ಚಿತ್ರಕತೆ ಮಾಡಲಾಗಿದೆ. ಸ್ವತಃ ಚಿತ್ರವನ್ನು ನಾಗ ಶೌರ್ಯ ಅವರೇ ನಿರ್ಮಿಸಿರುವುದು ವಿಶೇಷ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ನಾಗಶೌರ್ಯ 'ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿಯಬೇಕಿದೆ. ಭಾಷೆ ಮೇಲೆ ಹಿಡಿತ ಸಾಧಿಸಿದ ಬಳಿಕ ಕನ್ನಡ ಸಿನಿಮಾ ಮಾಡುತ್ತೇನೆ' ಎಂದರು.

Naga shourya Like To Watch This Kannada Stars Movie

ಇನ್ನು ಕನ್ನಡದಲ್ಲಿ ಯಾವ ಸಿನಿಮಾ ನೋಡಿದ್ದೀರಾ ಎಂದು ಕೇಳಿದ್ದಕ್ಕೆ ''ನಾನು ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ದರ್ಶನ್ ಸರ್, ಸುದೀಪ್ ಸರ್ ಹಾಗೂ ರಾಜ್ ಬಿ ಶೆಟ್ಟಿ ಅವರ ಚಿತ್ರಗಳನ್ನು ನೋಡಿದ್ದೇನೆ. ಕೆಜಿಎಫ್ ನನಗೆ ಫೇವರೆಟ್. ಅದು ಅದ್ಭುತ ಚಿತ್ರ'' ಎಂದು ಹೇಳಿಕೊಂಡರು.

2011ರಲ್ಲಿ ಚಿತ್ರರಂಗಕ್ಕೆ ಬಂದ ನಾಗಶೌರ್ಯ ಆರಂಭದ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ನಿರೀಕ್ಷೆ ಸಕ್ಸಸ್ ಸಿಕ್ಕಿರಲಿಲ್ಲ. 2018ರಲ್ಲಿ ಮೂಡಿಬಂದ ಚಲೋ ಸಿನಿಮಾ ದೊಡ್ಡ ಯಶಸ್ಸು ನೀಡಿತ್ತು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ರಶ್ಮಿಕಾಗೂ ಇದು ಮೊದಲ ತೆಲುಗು ಸಿನಿಮಾ ಆಗಿತ್ತು.

More from Filmibeat

English summary
Telugu actor Naga shourya like to watch darshan and sudeep movies in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X