'ಟಗರು ಪಲ್ಯ' ಸಿಗುತ್ತೋ ಇಲ್ವೋ.. ಮನರಂಜನೆಯಂತೂ ಸಿಗೋದು ಗ್ಯಾರಂಟಿ!

By ಫಿಲ್ಮಿಬೀಟ್ ಡೆಸ್ಕ್

'ಟಗರು ಪಲ್ಯ' ಡಾಲಿ ಧನಂಜಯ್ ನಿರ್ಮಿಸಿರೊ ಮೂರನೇ ಸಿನಿಮಾ. ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾ ಮೂಲಕ ನಾಗಭೂಷಣ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅದೇ ಅಮೃತಾ ಪ್ರೇಮ್ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ನಾಗಭೂಷಣ ಹಾಗೂ ಅಮೃತಾ ಜೊತೆ ಹಿರಿಯ ನಟಿ ತಾರಾ, ರಂಗಾಯಣ ರಘು, ಬಿರಾದರ್ ಸೇರಿದಂತೆ ಹಲವರು ನಟಿಸಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡೋದು ಗ್ಯಾರಂಟಿ. ಬಹಳ ದಿನಗಳಿಂದ ಮಂಡ್ಯ ಭಾಗದ ಕಥೆ ತೆರೆಮೇಲೆ ಬಂದಿರಲಿಲ್ಲ. ಈಗ ಮತ್ತೆ ಗ್ರಾಮೀಣ ಸೊಗಡಿನ ಕಥೆಯನ್ನು ಪಕ್ಕಾ ಹಾಸ್ಯದೊಂದಿಗೆ ನೋಡುವ ಅವಕಾಶ ಸಿಗುತ್ತಿದೆ.

nagabhushan-amrutha-prem-starrer-tagaru-palya

"ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ಟಗರು ಪಲ್ಯ. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರು ತೂಗಿಸಿಕೊಂಡು ಹೋಗುವ ನಟ. ಟಗರು ಪಲ್ಯದಲ್ಲಿ ನೀವು ಬೇರೆ ನಾಗಭೂಷಣ್ ನೋಡಬಹುದು. ಅಮೃತಾ ಲುಕ್ ಟೆಸ್ಟ್ ಮಾಡಿದಾಗ ಸ್ಯಾಂಡಲ್‌ವುಡ್ ಮಹಾಲಕ್ಷ್ಮೀ ತರ ಕಾಣಿಸಿದ್ರು. ಚಿತ್ರರಂಗದ ಮಹಾಲಕ್ಷ್ಮಿ ಆಗಿ ಬೆಳಗಲಿ " ಎಂದು ನಿರ್ಮಾಪಕ ಡಾಲಿ ಧನಂಜಯ್ ಹೇಳಿದ್ದಾರೆ.

"ನಾನು ಲೀಡ್ ಕ್ಯಾರೆಕ್ಟರ್ ಆಗಬೇಕು ಎಂದು ಇಂಡಸ್ಟ್ರೀಗೆ ಬಂದವನಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಬಂದವನು. ನನ್ನ ಪುಣ್ಯ. ಅಂದು ಇಕ್ಕಟ್ ಸಿನಿಮಾ. ಈಗ ಟಗರು ಪಲ್ಯ ಸಿಕ್ಕಿದೆ. ನಾನು ಒಬ್ಬ ಹಳ್ಳಿ ಹುಡುಗ. ನಾನು ಬೆಳೆದು ಬಂದ ಪರಿಸರವನ್ನು ಪ್ರತಿನಿಧಿಸುವುದು, ನಮ್ಮೂರು ಕಥೆ ಇರುವುದರಿಂದ ಈ ಸಿನಿಮಾ ಮತ್ತಷ್ಟು ಕನೆಕ್ಟ್ ಆಗಿದೆ. ಹಲವು ವರ್ಷಗಳಿಂದ ಒಂದು ಮಾತು ಹೇಳುತ್ತಿದ್ದೀರಾ.. ಬೇರೆ ಭಾಷೆಯಲ್ಲಿ ಕಡಿಮೆ ಬಜೆಟ್ ನಲ್ಲಿ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾ ಬರ್ತಿಲ್ಲ ಎನ್ನುತ್ತಿದ್ದರು. ಅದಕ್ಕೆಲ್ಲ ಉತ್ತರ ಟಗರು ಪಲ್ಯ" ಎಂದು ನಾಗಭೂಷಣ್ ಹೇಳಿದ್ದಾರೆ.

ನಟಿ ಅಮೃತಾ ಪ್ರೇಮ್ ಮಾತನಾಡಿ, "ದರ್ಶನ್ ಸರ್ ಕಡೆಯಿಂದ ನನ್ನ ಮೊದಲ ಸಿನಿಮಾ ಟ್ರೈಲರ್ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ನನಗೆ ಲೈಫ್ ಲಾಂಗ್ ನೆನಪು ಇರುತ್ತದೆ. ದರ್ಶನ್ ಸರ್ ನಮ್ಮ ಫ್ಯಾಮಿಲಿಗೆ ಹತ್ತಿರ ಆದವರು. ಅಪ್ಪನ ಸಿನಿಮಾ ಜರ್ನಿಯಿಂದ ಜೊತೆಯಲಿ ಇದ್ದಾರೆ. ನನಗೆ ಮೊದಲ ಸಿನಿಮಾದ ಟ್ರೈಲರ್ ಲಾಂಚ್ ಬಂದಿದ್ದಾರೆ." ಎಂದು ಅಮೃತಾ ಪ್ರೇಮ್ ಹೇಳಿದ್ದಾರೆ.

ಡಾಲಿ ಧನಂಜಯ್ ನಿರ್ಮಿಸುತ್ತಿರುವ 'ಟಗರು ಪಲ್ಯ'ಕ್ಕೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಇದೇ ಅಕ್ಟೋಬರ್ 27ಕ್ಕೆ 'ಟಗರು ಪಲ್ಯ' ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Nagabhushan Amrutha Prem starrer Tagaru palya movie trailer highlights
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X