Nagabhushan: "ನಾನು ಎಲ್ಲೂ ಓಡಿ ಹೋಗಿರ್ಲಿಲ್ಲ.. ಹಿಟ್ ಅಂಡ್ ರನ್ ಎನ್ನಬೇಡಿ": ನಾಗಭೂಷಣ್
ಹಾಸ್ಯನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆದು ಭಾರೀ ಸದ್ದು ಮಾಡ್ತಿದೆ. ಈ ಬಗ್ಗೆ ವಕೀಲರ ಸಮೇತ ಸುದ್ದಿಗೋಷ್ಠಿ ನಡೆಸಿ ನಾಗಭೂಷಣ್ ಮಾಹಿತಿ ನೀಡಿದ್ದಾರೆ. ಕಾರು ಅಪಘಾತ ಮಾಡಿ ಒಬ್ಬ ಮಹಿಳೆಯ ಸಾವಿಗೆ ಕಾರಣವಾಗಿ ಅವರು ಅರೆಸ್ಟ್ ಆಗಿ ಬಳಿಕ ಬೇಲ್ ಪಡೆದು ಹೊರ ಬಂದಿದ್ದರು.
ನಗರದ ರೇಣುಕಾಂಬ ಸ್ಟುಡಿಯೋದಲ್ಲಿ ನಾಗಭೂಷಣ್ ಸುದ್ದಿಗೋಷ್ಠಿ ನಡೆಸಿದರು. "ಅಂದು ಅಪಘಾತವಾಗಿತ್ತು. ಸ್ವಲ್ಪ ಸಮಯ ತೆಗೆದುಕೊಂಡು ನಾನು ನಿಮ್ಮ ಮುಂದೆ ಬಂದೆ. ನಾನು ಆ ಅಪಘಾತ ಘಟನೆಯಿಂದ ಬಹಳ ಡಿಸ್ಟರ್ಬ್ ಆಗಿದ್ದೆ. ಅದನ್ನು ಅರಗಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ" ಎಂದು ನಾಗಭೂಷಣ್ ಹೇಳಿದ್ದಾರೆ.

"ನಾನು ಆರ್ ಆರ್ ನಗರದಿಂದ ಕೋಣನಕುಂಟೆಗೆ ಹೋಗುವಾಗ ಈ ಅಪಘಾತವಾಯ್ತು. ಆದರೆ ಕೆಲವರು ಅದನ್ನು ಹಿಟ್ ಅಂಡ್ ರನ್ ಎಂದು ಹೇಳಿದರು. ನಾನು ಎಲ್ಲೂ ಓಡಿ ಹೋಗಿರ್ಲಿಲ್ಲ ಆ ಸಂದರ್ಭದಲ್ಲಿ ನಾನೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದೆ. ಇನ್ನು ಆಕ್ಸಿಡೆಂಟ್ ಬಳಿಕ ನಾನೆ ನನ್ನ ಕಾರಿನ ಬಂಪರ್ ಕಿತ್ತು ಬಿಸಾಕಿದೆ. ಅಪಘಾತದ ನಂತ್ರ ಆ ಮಹಿಳೆಯನ್ನು ನಾನೇ ಮಡಿಲಿನಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡಿದ್ದೆ"
"ಅಪಘಾತದ ಬಳಿಕ ನಾನೇ ಖುದ್ದು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದೆ. ಪೊಲೀಸರು ಬಂದು ಕುಡಿದಿದ್ಯಾ ಅಂತ ಕೇಳಿ ಚೆಕ್ ಮಾಡಿದ್ರು. ಆ ಅಪಘಾತ ಘಟನೆ ನಡೆದ ಬಳಿಕ ನಾನು ಮಾನಸಿಕವಾಗಿ ಕುಸಿದು ಬಿಟ್ಟಿದ್ದೀನಿ. ಬೆಳಗ್ಗೆ ಪೊಲೀಸರು ಬೇಲ್ ಮೇಲೆ ಕಳುಹಿಸಿದರು. ಆ ಕ್ಷಣದಲ್ಲಿ ನಾನು ಮನುಷ್ಯನಾಗಿ ಏನು ಮಾಡಬೇಕು ಅದನ್ನು ಮಾಡಿದ್ದೀನಿ. ನಾನು ಸಹ ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡಿದ್ದೀನಿ. ಹಾಗಾಗಿ ನೋವು ನನಗೆ ಗೊತ್ತು. ಇವತ್ತಿಗೂ ಆ ಅಪಘಾತ ಮಾಡದ್ದು ಯಾರು ಅಂತ ಗೊತ್ತಿಲ್ಲ. ಗೌರಿ ಹಬ್ಬದ ದಿನ ಆ ಅಪಘಾತ ನಡೀತು. ಪ್ರತಿ ವರ್ಷ ಗೌರಿ ಹಬ್ಬ ಬಂದರೆ ಅದೇ ನೆನಪಾಗುತ್ತದೆ. ನನಗಿಂತಲೂ ನೋವು ಅವರಿಗಿದೆ ಎಂದು ಮಾತನಾಡುತ್ತಾ ಟನ ನಾಗಭೂಷಣೆ ಭಾವುಕರಾಗಿದ್ದಾರೆ.
ಹಿಟ್ ಅಂಡ್ ರನ್ ಎನ್ನಬೇಡಿ. ಯಾರಿಗಾದರೂ ಅಪಘಾತವಾದರೆ ದಯವಿಟ್ಟು ಓಡಿ ಹೋಗಬೇಡಿ. ಯಾಕಂದರೆ ಜೀವ ಕಾಯುತ್ತಿರುತ್ತದೆ. ರಕ್ತ ನೋಡಿದಾಗ ಜನ ಸೇರಿದಾಗ ಭಯ ಆಗುತ್ತದೆ. ಆ ಕ್ಷಣದಲ್ಲಿ ಕೊಂಚ ಧೈರ್ಯ ತೆಗೆದುಕೊಂಡು ಆಸ್ಪತ್ರೆಗೆ ಸೇರಿಸಿ. ನನ್ನ ವಿಚಾರದಲ್ಲಿ ನಾನು ಫೇಲ್ ಆದೆ. ಆದರೆ ನೀವು ಮಾತ್ರ ಬಿಟ್ಟು ಹೋಗಬೇಡಿ ಎಂದು ನಾಗಭೂಷಣ್ ಸಲಹೆ ನೀಡಿದ್ದಾರೆ.
ಆ ಕುಟುಂಬಸ್ಥರನ್ನು ಇನ್ನು ಭೇಟಿ ಮಾಡಿಲ್ಲ. ಅವರ ಮನೆಯಲ್ಲಿ ಕಾರ್ಯಗಳು ನಡೆಯುತ್ತಿರುವಾಗ ನಾನು ಹೋಗಿ ಏನು ಮಾತನಾಡಲಿ ಹೇಳಿ. ನಮ್ಮವರೊಬ್ಬರಿಗೆ ಸಂಪರ್ಕಿಸಿದ್ದೇನೆ. ನನ್ನ ಕೈಯಲ್ಲಿ ಏನಾಗುತ್ತದೋ ಅದನ್ನು ಮಾಡ್ತೀನಿ ಎಂದು ಹೇಳಿದ್ದೀನಿ. ಅವರು ಹೇಳ್ತೀನಿ ಎಂದು ಹೇಳಿದ್ದಾರೆ. ಅವತ್ತು ಸ್ಪಷ್ಟನೆ ಕೊಡಬೇಕಿತ್ತು. ಕೊಡಲಿಲ್ಲ. ಯಾಕಂದ್ರೆ ನಾನು ಸುಧಾರಿಸಿಕೊಳ್ಳಬೇಕಿತ್ತು" ಎಂದಿದ್ದಾರೆ.


Click it and Unblock the Notifications











