Puneeth Rajkumar: ಅಪ್ಪು ಇಲ್ಲ ಅನ್ನೋದು ಗೊತ್ತಿಲ್ಲದೇ ಅಪ್ಪು ಜೊತೆ ಸಿನಿಮಾ ನೋಡ್ತೀನಿ ಎಂದ ಹಿರಿಜೀವ!

ನಟ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗೆ ಇಲ್ಲ. ಈ ಸುದ್ದಿ ತಿಳಿದಾಗಿನಿಂದ ಇವತ್ತಿನ ವರೆಗೂ ಅಭಿಮಾನಿಗಳು, ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿಲ್ಲ. ಅಪ್ಪು ನೆನಪಲ್ಲೆ ದಿನದೂಡುತ್ತಿದ್ದಾರೆ.

ಅಪ್ಪು ನಟಿಸಿದ ಸಿನಿಮಾಗಳು, ಹಾಡುಗಳನ್ನು ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಇತ್ತ ಕುಟುಂಬದವರು ಮನಸ್ಸಲ್ಲಿ ಎಷ್ಟೇ ನೋವಿದ್ದರೂ ಅಭಿಮಾನಿಗಳ ಮುಂದೆ ಅದನ್ನು ತೋರ್ಪಡಿಸದೇ ಜೀವನ ನಡೆಸುತ್ತಿದ್ದಾರೆ.

ಮತ್ತೊಂದು ದುಃಖಕರ ವಿಚಾರ ಏನು ಅಂದರೇ ಡಾ.ರಾಜ್ ಕುಮಾರ್ ಅವರ ಸಹೋದರಿ, ದೊಡ್ಮನೆಯ ಹಿರಿಯ ಕೊಂಡಿಯಾದ ನಾಗಮ್ಮ ಅವರಿಗೆ ಪುನೀತ್ ರಾಜ್‍ಕುಮಾರ್ ಅಗಲಿಕೆ ವಿಚಾರವನ್ನು ಇನ್ನೂ ತಿಳಿಸಿಲ್ಲ. ಅಪ್ಪು ಇದ್ದಾರೆ ಎಂದುಕೊಂಡೆ ಅಪ್ಪು ಜೊತೆ 'ಜೇಮ್ಸ್' ಸಿನಿಮಾ ನೋಡ್ತಿನಿ ಎಂದಿದೆ ಈ ಹಿರಿ ಜೀವ.

ಅಪ್ಪು ಇಲ್ಲದೇ ಇರುವ ವಿಚಾರ ಗೊತ್ತಿಲ್ಲ

ಡಾ.ರಾಜ್ ಕುಮಾರ್ ಅವರ ಸಹೋದರಿ, ದೊಡ್ಮನೆಯ ಹಿರಿಯ ಕೊಂಡಿಯಾದ ನಾಗಮ್ಮ ಅವರಿಗೆ ಪುನೀತ್ ರಾಜ್‍ಕುಮಾರ್ ಅಗಲಿಕೆ ವಿಚಾರವನ್ನು ಕುಟುಂಬ ಸದಸ್ಯರು ಇನ್ನು ತಿಳಿಸಿಲ್ಲ. ಯಾಕೆಂದರೆ ಅಂದಾಜು 90 ವರ್ಷ ವಯಸ್ಸಿನ ನಾಗಮ್ಮ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಕೆಲ ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದಾರೆ‌‌. ನಾಗಮ್ಮ ಅವರನ್ನು ಕಂಡರೆ ಸೋದರಳಿಯ ಅಪ್ಪುವಿಗೆ, ಅಪ್ಪುವನ್ನು ಕಂಡರೆ ಸೋದರತ್ತೆ ನಾಗಮ್ಮಗೆ ಎಲ್ಲಿಲ್ಲದ ಪ್ರೀತಿ. ಇಬ್ಬರಿಗೂ ಬಿಟ್ಟಿರಲಾರದ ನಂಟಿರುವ ಹಿನ್ನೆಲೆಯಲ್ಲಿ ಪುನೀತ್​ ಅಗಲಿಕೆ ವಿಚಾರವನ್ನು ಅತ್ತೆಗೆ ತಿಳಿಸಿಲ್ಲ. ಅಪ್ಪು ಇಲ್ಲದೇ ಇರುವ ವಿಚಾರ ಗೊತ್ತಿಲ್ಲದೇ ಅಪ್ಪು ಜೊತೆ 'ಜೇಮ್ಸ್' ಸಿನಿಮಾ ನೋಡೋದಾಗಿ ಆಸೆಯಿಂದ ಹೇಳಿಕೊಂಡಿದ್ದಾರೆ.

ಅಪ್ಪು ಜೇಮ್ಸ್ ಸಿನಿಮಾಗೆ ವಿಶ್ ಮಾಡಿದ ನಾಗಮ್ಮ

ಅಪ್ಪು ಜೇಮ್ಸ್ ಸಿನಿಮಾಗೆ ವಿಶ್ ಮಾಡಿದ ನಾಗಮ್ಮ

ಗಾಜನೂರಿನಲ್ಲೆ ನೆಲೆಸಿರುವ ನಾಗಮ್ಮ ಅವರು ಇನ್ನೂ ಕೂಡ ಅಪ್ಪು ಇದ್ದಾನೆ, ಶೂಟಿಂಗ್ ಇಲ್ಲದೇ ಇದ್ದಾಗ ಇಲ್ಲಿಗೆ ಬರ್ತಾನೆ, ಅಂತಲೆ ಅಂದುಕೊಂಡಿದ್ದಾರೆ. ಹೀಗಾಗಿ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ರಿಲೀಸ್ ಪ್ರಯುಕ್ತ ನಾಗಮ್ಮ ಅವರು ಜೇಮ್ಸ್ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೇ ಕಂದಮ್ಮಗೆ(ಪುನೀತ್) ಒಳ್ಳೆದಾಗ್ಲಿ ಎಂದಿದ್ದಾರೆ. ಸಿನಿಮಾ ಯಾವಾಗ ನೋಡ್ತೀರಾ ಅಂದಿದ್ದಕ್ಕೆ "ಕಂದನ ಜೊತೆ ಸಿನಿಮಾ ನೋಡ್ತೀನಿ" ಎಂದು ಹೇಳಿ ಅಲ್ಲೆ ಅಪ್ಪುವನ್ನು ನೆನೆದು ದೃಷ್ಠಿ ತೆಗೆದಿದ್ದಾರೆ. ಈ ಹಿರಿ ಜೀವ ಹೀಗೆಲ್ಲಾ ಮಾಡೋದು ನೋಡಿ ನಿಜಕ್ಕು ದೇವರು ಇಂತ ಅನ್ಯಾಯ ಮಾಡಿದ ಎಂದು ಅನ್ನಿಸದೇ ಇರದು.

ಪುನೀತ್ ಇನ್ನಿಲ್ಲ ಎಂದರೆ ಆ ಜೀವಕ್ಕೆ ತಡೆದುಕೊಳ್ಳಲು ಸಾಧ್ಯವಿಲ್ಲ

ಪುನೀತ್ ಇನ್ನಿಲ್ಲ ಎಂದರೆ ಆ ಜೀವಕ್ಕೆ ತಡೆದುಕೊಳ್ಳಲು ಸಾಧ್ಯವಿಲ್ಲ

ನಾಗಮ್ಮ ಅವರಿಗೆ ವಯಸ್ಸಾಗಿರುವ ಕಾರಣ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಇನ್ನು ಮನೆಯ ಮುದ್ದು ಮಗ ಪುನೀತ್ ಇನ್ನಿಲ್ಲ ಎಂದರೆ ಆ ಜೀವಕ್ಕೆ ತಡೆದುಕೊಳ್ಳಲು ಸಾಧ್ಯವಿಲ್ಲ. ಈ ಒಂದು ಕಾರಣದಿಂದಾಗಿ ಊರಿನ ಜನರು ಪುನೀತ್ ರಾಜಕುಮಾರ್ ರವರು ಆಗಲಿರುವ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಆದರೆ ಇಡೀ ಊರಿನ ಜನ ಇಂದಿಗೂ ಕೂಡ ಪುನೀತ್ ರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಪುನೀತ್ ಅತ್ತೆ ನಾಗಮ್ಮ ಅವರು ಕಳೆದ ಸಾಕಷ್ಟು ದಿನಗಳಿಂದ ಮಾತ್ರ ಮಂಕಾಗಿದ್ದು ಸರಿಯಾಗಿ ಊಟ ಕೂಡ ಮಾಡುತ್ತಿಲ್ಲ ಎನ್ನಲಾಗಿದೆ. ವಿಷಯ ತಿಳಿದಿಲ್ಲವಾದರೂ ಮನಸ್ಸಿಗೆ ಕೆಲವೊಮ್ಮೆ ಇಂತಹ ವಿಷಯಗಳು ಹೇಗೋ ತಿಳಿಯುತ್ತದೆ ಎಂಬುದು ಇದಕ್ಕೆ ಅನ್ನಿಸುತ್ತೆ.

ಸುಂದರವಾದ ಹಳ್ಳಿಯಲ್ಲಿ ಕಾಲ ಕಳೆಯುತ್ತಿದ್ದರು ಅಪ್ಪು

ಸುಂದರವಾದ ಹಳ್ಳಿಯಲ್ಲಿ ಕಾಲ ಕಳೆಯುತ್ತಿದ್ದರು ಅಪ್ಪು

ಇನ್ನು ಪುನೀತ್ ರಾಜಕುಮಾರ್ ಅವರಿಗೆ ಅವರ ಗಾಜನೂರು ಹಳ್ಳಿ ಎಂದರೆ ಬಹಳ ಅಚ್ಚುಮೆಚ್ಚಾಗಿದ್ದು ಚಿತ್ರೀಕರಣದಿಂದ ಸಮಯ ಸಿಕ್ಕಾಗಲೆಲ್ಲಾ ಅಪ್ಪು ಅವರು ತಮ್ಮ ಸ್ನೇಹಿತರ ಜೊತೆಗೆ ಹಾಗೂ ತಮ್ಮ ಕುಟುಂಬದ ಜೊತೆಗೆ ಗಾಜನೂರಿಗೆ ಹೋಗ ಸುಂದರವಾದ ಹಳ್ಳಿಯಲ್ಲಿ ಕಾಲ ಕಳೆಯುತ್ತಿದ್ದರು. ಇದಲ್ಲದೆ ಹಳ್ಳಿಯಲ್ಲಿ ಅಪ್ಪು ಅವರು ಬಂದರೆ ಸಾಕು ಒಂದು ರೀತಿಯ ಹಬ್ಬ ವಾತಾವರಣ ಸೃಷ್ಟಿಯಾಗುತ್ತಿತ್ತು. ಅಪ್ಪು ಅವರು ಅಲ್ಲಿ ಕೆಲವೊಂದು ಮನೆಗಳಲ್ಲಿ ಊಟ ಕೂಡ ಮಾಡಿದ್ದಾರೆ. ಸದ್ಯ ಇನ್ನು ಮುಂದೆ ಇವೆಲ್ಲಾ ನೆನಪು ಮಾತ್ರ ಅಷ್ಟೆ ಆದರೂ ಕೂಡ ಅಪ್ಪು ಅಜರಾಮರ ಎನ್ನಬಹುದು.

More from Filmibeat

English summary
Dr Rajkumar sister Nagamma wants to watch James movie with Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X