For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ಬೆಚ್ಚಿಬೀಳಿಸಿದ 'ನಾಗರಹಾವು' ಫಸ್ಟ್ ಡೇ ದಾಖಲೆಯ ಕಲೆಕ್ಷನ್

  By Pavithra
  |
  Nagarahaavu 2018 First day collection :ನಾಗರಹಾವು ಮೊದಲ ದಿನ ಗಳಿಸಿದ್ದೆಷ್ಟು...!!??

  'ನಾಗರಹಾವು' ಸಿನಿಮಾವನ್ನು ಬೆಳ್ಳಿತೆರೆ ಮೇಲೆ ನೋಡಿ ಪ್ರೇಕ್ಷಕರು ಮಾರು ಹೋಗಿದ್ದಾರೆ. ಚಿತ್ರ ಬಿಡುಗಡೆ ಆಗಿ ಮೊದಲ ದಿನವೇ ಭರ್ಜರಿ ಯಶಸ್ಸು ಕಂಡಿದ್ದು, ಸಿನಿಮಾ ಬಿಡುಗಡೆ ಮಾಡಿದವರಿಗೂ ಅಭಿಮಾನಿಗಳಿಗೂ ತುಂಬಾನೇ ಖುಷಿ ಕೊಟ್ಟಿದೆ.

  ರಾಜ್ಯದ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಮಂದಿರದಲ್ಲಿ 'ನಾಗರಹಾವು' ಚಿತ್ರ ಬಿಡುಗಡೆ ಆಗಿತ್ತು. ನಿನ್ನೆ ಎಲ್ಲಾ ಚಿತ್ರಮಂದಿರದಲ್ಲಿಯೂ ತುಂಬು ಪ್ರದರ್ಶನ ಕಂಡಿದೆ. ವಿಷ್ಣುದಾದನಿಗಿರುವ ಕ್ರೇಜ್ ನೋಡಿ ಗಾಂಧಿನಗರದ ಮಂದಿ ಆಶ್ಚರ್ಯ ಪಟ್ಟುಕೊಂಡಿದ್ದಾರೆ.

  ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ

  ಇನ್ನು ವಿಶೇಷ ಎಂದರೆ 'ನಾಗರಹಾವು' ಸಿನಿಮಾ ಮರು ಬಿಡುಗಡೆ ಆದ ಒಂದೇ ದಿನದಲ್ಲಿ ಪರಭಾಷೆ ಚಿತ್ರಗಳಿಗೂ ಸೆಡ್ಡು ಹೊಡೆದಿದೆ. ಒಂದೇ ದಿನದಲ್ಲಿ ಯುವ ಸಮೂಹವನ್ನು ಸೆಳೆಯುವುದರಲ್ಲಿ ಯಶಸ್ವಿ ಆಗಿದೆ. ಮರು ಬಿಡುಗಡೆ ಆಗಿ 'ನಾಗರಹಾವು' ಚಿತ್ರದ ಮಾಡುತ್ತಿರುವ ದಾಖಲೆಗಳೇನು? ಇಲ್ಲಿದೆ ಮಾಹಿತಿ ಮುಂದೆ ಓದಿ

  ಕನ್ನಡ ಚಿತ್ರಕ್ಕೆ ಪ್ರೇಕ್ಷಕರ ಉಘೇ

  ಕನ್ನಡ ಚಿತ್ರಕ್ಕೆ ಪ್ರೇಕ್ಷಕರ ಉಘೇ

  'ನಾಗರಹಾವು' ಸಿನಿಮಾ ನಲವತ್ತು ವರ್ಷದ ನಂತರ ಬಿಡುಗಡೆ ಆದರೂ ಕೂಡ ಅಭಿಮಾನಿಗಳು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಬಾಲಿವುಡ್ ಚಿತ್ರಗಳನ್ನ ಪಕ್ಕಕ್ಕಿಟ್ಟು 'ನಾಗರಹಾವು' ಚಿತ್ರಕ್ಕೆ ಉತ್ತಮ ರೇಟಿಂಗ್ ನೀಡಿದ್ದಾರೆ.

  ಮೊದಲ ದಿನವೇ ಉತ್ತಮ ಕಲೆಕ್ಷನ್

  ಮೊದಲ ದಿನವೇ ಉತ್ತಮ ಕಲೆಕ್ಷನ್

  ಬಿಡುಗಡೆ ಆದ ಮೊದಲ ದಿನವೇ 'ನಾಗರಹಾವು' ಸಿನಿಮಾ ಉತ್ತಮ ಗಳಿಕೆ ಮಾಡಿದೆ. ನಿನ್ನೆ ಒಂದೇ ದಿನವೇ 75 ಲಕ್ಷದಿಂದ 1 ಕೋಟಿಯಷ್ಟು ಗಳಿಕೆಯನ್ನು ಮಾಡಿದೆ ವಿಷ್ಣುದಾದ ಅಭಿನಯದ 'ನಾಗರಹಾವು' ಸಿನಿಮಾ.

  ಹೆಚ್ಚು ಸಿನಿಮಾಮಂದಿರದಲ್ಲಿ ಪ್ರದರ್ಶನ

  ಹೆಚ್ಚು ಸಿನಿಮಾಮಂದಿರದಲ್ಲಿ ಪ್ರದರ್ಶನ

  ನೂರಕ್ಕೂ ಹೆಚ್ಚು ಸಿನಿಮಾಮಂದಿರದಲ್ಲಿ ಬಿಡುಗಡೆ ಆಗಿದ್ದ 'ನಾಗರಹಾವು' ಸಿನಿಮಾ ಇಂದಿನಿಂದ ಮತ್ತಷ್ಟು ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಬೇಡಿಕೆ ಮೇರೆಗೆ ಮತ್ತಷ್ಟು ಚಿತ್ರಮಂದಿರವನ್ನು ಹೆಚ್ಚು ಮಾಡಿದ್ದಾರೆ ವಿತರಕ ಕಾರ್ತಿಕ್ ಗೌಡ.

  ಕಲಾವಿದರನ್ನೂ ಸೆಳೆದ ಸಿನಿಮಾ

  ಕಲಾವಿದರನ್ನೂ ಸೆಳೆದ ಸಿನಿಮಾ

  ಕೇವಲ ಸಿನಿಮಾ ಅಭಿಮಾನಿಗಳನ್ನು ಮಾತ್ರವಲ್ಲದೆ 'ನಾಗರಹಾವು' ಚಿತ್ರ ನೋಡಲು ಕನ್ನಡ ಸಿನಿಮಾರಂಗದ ಕಲಾವಿದರು ಕಾತುರರಾಗಿದ್ದಾರೆ. ನಾಳೆ ನರ್ತಕಿ ಚಿತ್ರಮಂದಿರದಲ್ಲಿ ಡಾ ಶಿವರಾಜ್ ಕುಮಾರ್ ಚಿತ್ರ ನೋಡಲಿದ್ದಾರೆ.

  English summary
  Kannada Nagarahaavu cinema has earned Rs 1 crore on the first day of its release. Tomorrow Shivaraj Kamar will be watch Nagarahaavu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X