ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಶುರು, ಮಾರ್ನಿಂಗ್ ಶೋ ಟಿಕೆಟ್ ಸೋಲ್ಡ್ ಔಟ್ : ಇದು ರಾಮಾಚಾರಿಯ ಆರ್ಭಟ

By Naveen

Recommended Video

Nagarahaavu 2018 : ಚಿತ್ರಮಂದಿರಗಳಲ್ಲಿ ಜೋರಾಗಿದೆ ರಾಮಾಚಾರಿ ಹವಾ....!!| Filmibeat Kannada

ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆಯ ಸಿನಿಮಾ 'ನಾಗರಹಾವು' ಇಂದು ಮತ್ತೆ ಮರು ಬಿಡುಗಡೆಯಾಗುತ್ತಿದೆ. ರಾಜ್ಯದ ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಇಂದು ಸಿನಿಮಾ ಬಿಡುಗಡೆಯಾಗಲಿದೆ. ಕೆಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರು ಆಗಿದೆ.

ಸಾಮಾನ್ಯವಾಗಿ ಬಹುನಿರೀಕ್ಷೆಯ ಹೊಸ ಸಿನಿಮಾಗಳು ಬೆಳಂಬೆಳಗ್ಗೆ ಬಿಡುಗಡೆಯಾಗುತ್ತವೆ. ಆದರೆ, 45 ವರ್ಷದ ಹಿಂದಿನ ಸಿನಿಮಾ ಇಂದಿಗೂ ತಮ್ಮ ಕ್ರೇಜ್ ಕಾಪಾಡಿಕೊಂಡಿದೆ. ಬೆಂಗಳೂರಿನ ತಾವರೆಕೆರೆಯ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಗ್ಗೆ ಆರು ಗಂಟೆಗೆ ಮೊದಲ ಪ್ರದರ್ಶನ ಪ್ರಾರಂಭ ಆಗಿದ್ದು, ಅಭಿಮಾನಿಗಳು ಚಿತ್ರಮಂದಿರದಲ್ಲಿ ಹಬ್ಬ ಮಾಡುತ್ತಿದ್ದಾರೆ.

 Nagarahaavu film is screened at 6am morning

ರಾಮಾಚಾರಿ ತೆರೆ ಮೇಲೆ ಬಂದಾಗ ಅಭಿಮಾನಿಗಳ ಮನದಲ್ಲಿ ಆಗುವ ಸಂತೋಷಕ್ಕೆ ಲೆಕ್ಕವೇ ಇಲ್ಲ. ಇನ್ನು ಇಡೀ ಚಿತ್ರಮಂದಿರವೆ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದೆ. ಉಳಿದಂತೆ, ಗಾಂಧಿನಗರದ 'ನರ್ತಕಿ' ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.

ಅಂದಹಾಗೆ, 'ನಾಗರಹಾವು' ಸಿನಿಮಾವನ್ನು ವೀರಸ್ವಾಮಿ ಅವರು ನಿರ್ಮಾಣ ಮಾಡಿದ್ದು, ಅವರ ಪುತ್ರರಾದ ರವಿಚಂದ್ರನ್ ಹಾಗೂ ಬಾಲಾಜಿ ಚಿತ್ರವನ್ನು ಮತ್ತೆ ರಿಲೀಸ್ ಮಾಡುತ್ತಿದ್ದಾರೆ. ಹೊಸ ತಂತ್ರಜ್ಙಾನದ ಸಿನಿಮಾವನ್ನು ಇಂದಿನ ಪೀಳಿಗೆಯೂ ಅಪ್ಪಿಕೊಂಡಿದೆ. ಪುಟ್ಟಣ್ಣ ಕಣಗಾಲ್ ಅವರ ಈ ಸಿನಿಮಾ ಇಂದಿಗೂ ಅದ್ಬುತ ಸೃಷ್ಟಿಸುತ್ತಿದೆ.

 Nagarahaavu film is screened at 6am morning

'ನಾಗರಹಾವು' ವಿಷ್ಣುವರ್ಧನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಅಂಬರೀಶ್, ಆರತಿ, ಕೆ.ಎಸ್.ಅಶ್ವತ್, ಶುಭಾ, ಲೀಲಾವತಿ, ಶಿವರಾಂ ನಟಿಸಿದ್ದರು.

More from Filmibeat

English summary
Kannada Nagarahaavu cinema re-release on Today (July 20). The film is screened at the selected cinema theater at 6am morning .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X