ಮತ್ತೆ ಬಂದ ರಾಮಾಚಾರಿ : 'ನಾಗರಹಾವು' ಬಿಡುಗಡೆಯ ದಿನ ಅನೌನ್ಸ್
Recommended Video

ಡಾ.ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸಿನಿಮಾ 'ನಾಗರಹಾವು ಈಗ ಮತ್ತೆ ತೆರೆ ಮೇಲೆ ರಾರಾಜಿಸುವುದಕ್ಕೆ ಬರುತ್ತಿದೆ. ಹಳೆ ರಾಮಾಚಾರಿ ಹೊಸ ಗತ್ತಿನೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾನೆ.
ಹೊಸ ತಂತ್ರಜ್ಞಾನದೊಂದಿಗೆ 'ನಾಗರಹಾವು' ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ. ಜುಲೈ 20 ರಂದು ಸಿನಿಮಾ ರಾಜ್ಯಾದಂತ್ಯ ಅದ್ದೂರಿಯಾಗಿ ತೆರೆಗೆ ಬರಲಿದೆ. ನಿರ್ಮಾಪಕ ವೀರಸ್ವಾಮಿ ಅವರ ಪುತ್ರ, ರವಿಚಂದ್ರನ್ ಅವರ ಸಹೋದರ ಬಾಲಾಜಿ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದ ಈ ಸಿನಿಮಾ ಹೊಸ ತಂತ್ರಜ್ಙಾನದೊಂದಿಗೆ ಮತ್ತೆ ಬೆಳ್ಳಿತೆರೆ ಮೇಲೆ ಮೂಡುತ್ತಿದೆ. 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ ರಾಮಾಚಾರಿಯ ಘರ್ಜನೆ ಇನ್ನಷ್ಟು ಜೋರಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಮಾಸ್ಟರ್ ಫೀಸ್ ಸಿನಿಮಾ ಹೊಸ ಮೆರುಗು ಸಿಕ್ಕಿದೆ.

ಈಗಾಗಲೇ 'ನಾಗರಹಾವು' ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿದೆ. ವಿಷ್ಣುವರ್ಧನ್ ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಇಂದು ಸಿನಿಮಾದ ಮೇಕಿಂಗ್ ವಿಡಿಯೋವನ್ನು ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಬಿಡುಗಡೆ ಮಾಡಲಿದ್ದಾರೆ.


Click it and Unblock the Notifications











