5 ಜನ ಸೇರಿ ಮಗಳಿಗೆ ಹೊಡೆದಿದ್ದಾರೆ ಎಂದು ಕಣ್ಣೀರಿಟ್ಟ ನಾಗರತ್ನ
ನಟ ದುನಿಯಾ ಕೌಟುಂಬಿಕ ಕಲಹ ಮತ್ತೆ ಮುಂದುವರೆದಿದೆ. ದುನಿಯಾ ವಿಜಯ್ ತಮ್ಮ ಹಿರಿಯ ಪುತ್ರಿ ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್ ''ನಾನು ಮಗಳ ಮೇಲೆ ಹಲ್ಲೆ ಮಾಡಿಲ್ಲ. ಎಲ್ಲ ಸೇರಿ ಡ್ರಾಮಾ ಮಾಡುತ್ತಿದ್ದಾರೆ. ನನ್ನ ಮೇಲೆ ಪದೇ ಪದೇ ಎಫ್ ಐ ಆರ್ ಆಗುವಂತೆ ಮಾಡಿ, ನನ್ನನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂಬ ಪ್ಲಾನ್ ಮಾಡುತ್ತಿದ್ದಾರೆ.'' ಎಂದು ಹೇಳಿದ್ದರು.
ಆದರೆ, ಈಗ ದುನಿಯಾ ವಿಜಯ್ ಪತ್ನಿ ನಾಗರತ್ನ ಸಹ ಪ್ರತಿಕ್ರಿಯೆ ನೀಡಿದ್ದಾರೆ. ''ನಿನ್ನೆ ನನ್ನ ಮಗಳು ಅವರ ಮನೆಗೆ ಹೋದಾಗ 5 ಜನ ಸೇರಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.'' ಎಂದು ಆರೋಪ ಮಾಡಿದ್ದಾರೆ. ಮುಂದೆ ಓದಿ....

ನಾಗರತ್ನ ಮಾಡುತ್ತಿರುವ ಆರೋಪಗಳು
''ನಿನ್ನೆ ನನ್ನ ಮಗಳು ಆಕೆಯ ಸಾಮಾನುಗಳನ್ನು ತರಲು ಅವರ ಮನೆಗೆ ಹೋಗಿದ್ದಳು. ಈ ವೇಳೆ 5 ಜನ ಸೇರಿ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಕೈ ಕಾಲು ಹಿಡಿದುಕೊಂಡು ಹೊಡೆದಿದ್ದಾರೆ. ಹಲ್ಲೆ ಮಾಡಿ ಮಗಳನ್ನು ಮನೆಯಿಂದ ಆಚೆ ಹಾಕಿದ್ದಾರೆ.'' - ನಾಗರತ್ನ, ದುನಿಯಾ ವಿಜಯ್ ಪತ್ನಿ.

ಚಿಕ್ಕ ಮಗಳು ಡಿಪ್ರೆಶನ್ ಗೆ ಹೋಗಿದ್ದಾಳೆ
''ನನ್ನ ಚಿಕ್ಕ ಮಗಳು ಮೋನಿಷಾಗೂ ಪೀಡಿಸುತ್ತಿದ್ದರಂತೆ. ನಿಮ್ಮ ತಾಯಿಯ ವಿರುದ್ಧ ಸಾಕ್ಷಿ ಹೇಳಿ ಅಂತ ಹೇಳಿಕೊಡುತ್ತಿದ್ದಾರಂತೆ. ಆಕೆಗೆ ನೇಣಾಕುತ್ತೇನೆ ಎಂದು ಹೆದರಿಸಿದ್ದಾರೆ. ನನ್ನ ಚಿಕ್ಕ ಮಗಳು ಡಿಪ್ರೆಶನ್ ಗೆ ಹೋಗಿದ್ದಾಳೆ. ಅವಳಿಗೂ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸುತ್ತಿದ್ದೇನೆ.'' - ನಾಗರತ್ನ, ದುನಿಯಾ ವಿಜಯ್ ಪತ್ನಿ.

ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ
''ಮೋನಿಷಾ ಹಣೆಗೆ ಪೆಟ್ಟು ಬಿದ್ದಿದೆ. ಕೈಗೆ ಕೂಡ ಹೊಡೆತ ಬಿದಿದ್ದೆ. ಐದು ಜನ ಸೇರಿ ಸಣ್ಣ ಹುಡುಗಿಗೆ ಹೊಡೆದಿದ್ದಾರೆ. ಟಿವಿಯಲ್ಲಿ ಕೀರ್ತಿ ವಿರುದ್ಧ ಮಕ್ಕಳು ಮಾತನಾಡಿದರು ಎಂದು ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ನಮ್ಮ ಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ.'' - ನಾಗರತ್ನ, ದುನಿಯಾ ವಿಜಯ್ ಪತ್ನಿ.

ಬೇಕಾದಷ್ಟು ಬಾರಿ ಹಲ್ಲೆ ಮಾಡಿದ್ದಾರೆ
''ಮಗ ಸಾಮ್ರಾಟ್ ನನ್ನು ಪ್ರೀತಿಯಿಂದ ಮನೆಯಲ್ಲಿ ಇಟ್ಟುಕೊಂಡಿಲ್ಲ. ಕೇಸ್ ಗೆ ಬೇಕಿದೆ ಎನ್ನುವ ದೃಷ್ಟಿಯಿಂದ ಮಗನನ್ನು ಜೊತೆಗೆ ಇಟ್ಟುಕೊಂಡಿದ್ದಾರೆ. ಈ ಹಿಂದೆಯೇ ಬೇಕಾದಷ್ಟು ಬಾರಿ ಹಲ್ಲೆ ಮಾಡಿದ್ದಾರೆ. ಮಕ್ಕಳಿಗೆ ಈ ರೀತಿ ಮಾಡಿದವರು ಯಾರಿಗೆ ಬಿಡುತ್ತಾರೆ.'' - ನಾಗರತ್ನ, ದುನಿಯಾ ವಿಜಯ್ ಪತ್ನಿ.

ವಿಜಿ ವಿರುದ್ಧ ದೂರು ದಾಖಲು
ನಟ ದುನಿಯಾ ವಿಜಯ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ವಿಜಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಹಿರಿಯ ಮಗಳು ಮೋನಿಷಾ ಗಿರಿ ನಗರ ಪೊಲೀಸ್ ಠಾಣೆಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.


Click it and Unblock the Notifications











