''ನನಗೆ ನ್ಯಾಯ ಕೊಡಿಸಿ'' ಎಂದು ಕೇಳಿಕೊಳ್ಳುತ್ತಿದ್ದಾರೆ ನಟ ದುನಿಯಾ ವಿಜಯ್.!
ನಟ ದುನಿಯಾ ವಿಜಯ್ ಕೌಟುಂಬಿಕ ಗಲಾಟೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಕೀರ್ತಿ ಗೌಡ ವಿರುದ್ಧ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಆರೋಪ ಮಾಡುತ್ತಿದ್ದರು. ಆದ್ರೀಗ, ಕೀರ್ತಿ ಗೌಡ ಮೇಲೆಯೇ ನಾಗರತ್ನ ಹಲ್ಲೆ ನಡೆಸಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 23 ರಂದು ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ನಾಗರತ್ನ ಹಲ್ಲೆ ನಡೆಸಿದ್ದರು. ಅದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆ ದೃಶ್ಯಾವಳಿ ಇಂದು ಬಿಡುಗಡೆಗೊಂಡಿದೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ನಾಗರತ್ನ ವಿರುದ್ಧ ಎಫ್.ಐ.ಅರ್ ದಾಖಲಾಗಿದೆ. ನಾಗರತ್ನ ರನ್ನ ಇಂದು ಗಿರಿನಗರ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಈ ಬಗ್ಗೆ ನಟ ದುನಿಯಾ ವಿಜಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ -

ಇಮೇಜ್ ಡ್ಯಾಮೇಜ್ ಮಾಡುವ ಯತ್ನ
''ನನ್ನ ಇಮೇಜ್ ನ ಡ್ಯಾಮೇಜ್ ಮಾಡಬೇಕು ಅಂತ ಪ್ಲಾನ್ ಮಾಡಿ ಇದನ್ನ ಮಾಡಲಾಗಿದೆ. ನಾನು ಕೆಲಸ ಮಾಡಬಾರದು, ಕೋರ್ಟ್ ಗೆ ಅಲೆಯುತ್ತಿರಬೇಕು.. ಇಷ್ಟೇ ಅವರ ಉದ್ದೇಶ. ಸುಮ್ಮನೆ ನಮ್ಮ ಮೇಲೆ ಪದೇ ಪದೇ ಫೇಕ್ ಕಂಪ್ಲೇಂಟ್ ಕೊಡ್ತಾರೆ'' - ದುನಿಯಾ ವಿಜಯ್, ನಟ

ಅವರು ಹೇಳುವುದೆಲ್ಲಾ ಸುಳ್ಳು.!
''ನಾನು ಒಳ್ಳೆಯವಳು ಅಂತ ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ. ಮೂರು ಮಕ್ಕಳನ್ನು ಇಟ್ಟುಕೊಂಡು ಏನೇನೋ ಪ್ಲಾನ್ ಮಾಡ್ತಾರೆ. ಅವರು ಹೇಳುವುದು ಎಲ್ಲಾ ಸುಳ್ಳು'' - ದುನಿಯಾ ವಿಜಯ್, ನಟ

ನ್ಯಾಯ ಕೊಡಿಸಿ
''ನನಗೆ ಸುಮ್ಮನೆ ಅವಳ (ನಾಗರತ್ನ) ಹಾಗೆ ನಾಯಿ ತರಹ ಮಾತನಾಡಲು ಇಷ್ಟ ಆಗಲ್ಲ. ನನಗೆ ನ್ಯಾಯ ಕೊಡಿಸಿ. ನನಗೂ ಬೇಜಾರು ಆಗಿದೆ'' ಅಂತಾರೆ ನಟ ದುನಿಯಾ ವಿಜಯ್.

ಸಂಜೆ ಪ್ರೆಸ್ ಮೀಟ್
ಕಳೆದ ಕೆಲ ದಿನಗಳಿಂದ ತಮ್ಮ ಕುಟುಂಬದಲ್ಲಿ ಆಗಿರುವ ಎಲ್ಲಾ ಬೆಳವಣಿಗೆಗಳ ಕುರಿತು ದುನಿಯಾ ವಿಜಯ್ ಇಂದು ಸಂಜೆ ಸ್ಪಷ್ಟನೆ ಕೊಡಲಿದ್ದಾರೆ. ಇಂದು ಸಾಯಂಕಾಲ ಪತ್ನಿ ಕೀರ್ತಿ ಗೌಡ ಹಾಗೂ ತಂದೆ-ತಾಯಿ ಜೊತೆಯಲ್ಲಿ ಕುಳಿತು ದುನಿಯಾ ವಿಜಯ್ ಪ್ರೆಸ್ ಮೀಟ್ ನಡೆಸಲಿದ್ದಾರೆ.


Click it and Unblock the Notifications











