ನಾಗರತ್ನಗೆ ಮಾನ ಮರ್ಯಾದೆ ಇದ್ಯಾ ಎಂದು ಸಿಡಿಮಿಡಿಗೊಂಡ ಕೀರ್ತಿ ಗೌಡ.!

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮನೆ ಜಗಳ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ದುನಿಯ್ ವಿಜಯ್ ಇಬ್ಬರು ಹೆಂಡಿರ ನಡುವೆ ಕಳೆದ ತಿಂಗಳು ಜಗಳ ಆಗಿತ್ತು. ಆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೀಗ ಅದೇ ಜಗಳಕ್ಕೆ ಹೊಸ ತಿರುವು ಸಿಕ್ಕಿದೆ.

ಕೀರ್ತಿ ಗೌಡ ಬೆದರಿಕೆ ಹಾಕಿದ್ದಾರೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ನಾಗರತ್ನ ದೂರು ಕೊಟ್ಟಿದ್ದರು. ಆದ್ರೆ, ಕೀರ್ತಿ ಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿ ಇಂದು ಮಾಧ್ಯಮಗಳ ಕೈಗೆ ಸಿಕ್ಕಿದೆ. ತಾವೇ ಹಲ್ಲೆ ನಡೆಸಿ ಕೀರ್ತಿ ಗೌಡ ಮೇಲೆ ನಾಗರತ್ನ ಸುಳ್ಳು ದೂರು ಕೊಟ್ರಾ ಎಂಬ ಡೌಟ್ ಬಂದಿದೆ.

ಸೆಪ್ಟೆಂಬರ್ 23 ರಂದು ನಡೆದ ಹಲ್ಲೆ ಕುರಿತು ಮೊನ್ನೆಯಷ್ಟೇ ಗಿರಿನಗರ ಪೊಲೀಸ್ ಠಾಣೆಗೆ ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು ಸಲ್ಲಿಸಿದ್ದಾರೆ. ಈ ಘಟನೆ ಕುರಿತು ಮಾಧ್ಯಮಗಳಿಗೆ ಕೀರ್ತಿ ಗೌಡ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ -

ಇವತ್ತು ಸತ್ಯ ಬಯಲಾಗಿದೆ

ಇವತ್ತು ಸತ್ಯ ಬಯಲಾಗಿದೆ

''ಬೀದಿ ಜಗಳ, ರಂಪಾಟ ನಾನೇನೂ ಮಾಡಿಲ್ಲ. ಅವರೇ ಒಳಗೆ ಬಂದು ಗಲಾಟೆ ಮಾಡಿದರು. ಪ್ರೀ ಪ್ಲಾನ್ ಮಾಡಿ, ನಡೆಸಿರುವ ಹಲ್ಲೆ ಇದು. ಏನೇ ಹೇಳಿದರೂ ಜನ ನಂಬುತ್ತಾರೆ ಎಂಬ ಭ್ರಮೆ ಇದೆ ಅವರಿಗೆ. ಇವತ್ತು ಸತ್ಯ ಬಯಲಾಗಿದೆ'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಮನುಷ್ಯತ್ವ ಇದ್ಯಾ.?

ಮನುಷ್ಯತ್ವ ಇದ್ಯಾ.?

''ಅವರಿಗೆ ನಿಜವಾಗಲೂ ಮನುಷ್ಯತ್ವ ಅನ್ನೋದು ಇದ್ದರೆ, ಸತ್ಯ ಹೇಳಬೇಕು. ಇಲ್ಲಾಂದ್ರೆ, ಖಂಡಿತ ಒಳ್ಳೆಯದ್ದಾಗಲ್ಲ. ಯಾಕಂದ್ರೆ, ಅವರಿಬ್ಬರ ಮಧ್ಯೆ ಪರಸ್ಪರ ಅಗ್ರೀಮೆಂಟ್ ಆಗಿತ್ತು. ದುನಿಯಾ ವಿಜಯ್ ಹಾಗೂ ಅವರ ತಂದೆ-ತಾಯಿ ವಿಷಯಕ್ಕೆ ಹೋಗಲ್ಲ ಅಂತ ಅಗ್ರೀಮೆಂಟ್ ಆಗಿತ್ತು'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಮಾನ ಮರ್ಯಾದೆ ಇದ್ಯಾ.?

ಮಾನ ಮರ್ಯಾದೆ ಇದ್ಯಾ.?

''ಒಂದು ರೂಪಾಯಿ ಬಿಟ್ಟಿಲ್ಲ. ಎಲ್ಲಾ ಆಕೆ ಹೆಸರಿಗೆ ಬರೆಯಿಸಿಕೊಂಡಿದ್ದಾಳೆ. ಕಷ್ಟಪಟ್ಟು ಸಂಪಾದನೆ ಮಾಡಿರುವುದನ್ನ ಪ್ರೀತಿಗೋಸ್ಕರ ಬಿಟ್ಟು ಬಂದರು. ಇವಳಿಗೆ ಮಾನ ಮರ್ಯಾದೆ ಇದೆಯಾ.? ಮೂರನೇ ಕ್ಲಾಸ್ ಅಷ್ಟೇ ಓದಿರೋದು'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಸುಳ್ಳು ಹೇಳ್ತಾರೆ.!

ಸುಳ್ಳು ಹೇಳ್ತಾರೆ.!

''ರಿಜಿಸ್ಟರ್ ಆಫೀಸಿಗೆ ಹೋಗಿ, ಅವರು ಸಂಪಾದನೆ ಮಾಡಿರುವ ಒಂದೊಂದು ರೂಪಾಯಿಯನ್ನೂ ಕೊಟ್ಟಿದ್ದಾರೆ. ಆದರೂ ಎಷ್ಟು ಸುಳ್ಳು ಹೇಳುತ್ತಾರೆ. ಗಂಡನಿಗೆ ಅವಳ ಮೇಲೆ ಪ್ರೀತಿ ಇದ್ದರೆ, ಕರ್ಕೊಳ್ಳಿ. ಆದರೆ, ದುನಿಯಾ ವಿಜಯ್ ಗೆ ಅವಳ ಕಂಡ್ರೆ ಆಗಲ್ಲ'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಅವಳ ಸಂಸಾರ ಎಲ್ಲಿ ಚೆನ್ನಾಗಿತ್ತು.?

ಅವಳ ಸಂಸಾರ ಎಲ್ಲಿ ಚೆನ್ನಾಗಿತ್ತು.?

''ನನ್ನ ಮೇಲೆ ಕೈ ಮಾಡಿ, ನನ್ನ ವಿರುದ್ಧವೇ ಆರೋಪ ಮಾಡಿದ್ದರು. ಕಂಪ್ಲೇಂಟ್ ಕೊಟ್ಟಿದ್ದರು. ನನ್ನ ಸಂಸಾರವನ್ನ ಹಾಳು ಮಾಡಿದಳು. ಅವಳ ಸಂಸಾರ ಎಲ್ಲಿ ಚೆನ್ನಾಗಿತ್ತು.? ಎಷ್ಟು ವರ್ಷಗಳಿಂದ ಅವರಿಬ್ಬರ ಮಧ್ಯೆ ಸಮಸ್ಯೆ ಇದೆ.?'' ಎಂದು ಪ್ರಶ್ನಿಸುತ್ತಾರೆ ಕೀರ್ತಿ ಗೌಡ

ಸುಳ್ಳು ಹೇಳುವ ತಾಯಿಗೆ ಮಕ್ಕಳ ಸಪೋರ್ಟ್

ಸುಳ್ಳು ಹೇಳುವ ತಾಯಿಗೆ ಮಕ್ಕಳ ಸಪೋರ್ಟ್

''ತಾಯಿ ಅಂದರೆ ದುನಿಯಾ ವಿಜಯ್ ಗೆ ಪ್ರಾಣ. ಸುಳ್ಳು ಹೇಳುವ ತಾಯಿ (ನಾಗರತ್ನ)ಗೆ ಮಕ್ಕಳು ಸಪೋರ್ಟ್ ಮಾಡ್ತಾರೆ. ಅವರೇ ತಪ್ಪು ಮಾಡಿದ್ರೂ ನಮ್ಮ ಮೇಲೆ ಆರೋಪ ಮಾಡಿದರು'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ದುನಿಯಾ ವಿಜಯ್ ನೋವನ್ನು ಯಾರೂ ನಂಬುತ್ತಿಲ್ಲ.!

ದುನಿಯಾ ವಿಜಯ್ ನೋವನ್ನು ಯಾರೂ ನಂಬುತ್ತಿಲ್ಲ.!

''ದುನಿಯಾ ವಿಜಯ್ ಇಷ್ಟು ವರ್ಷ ತುಂಬಾ ನೋವು ಅನುಭವಿಸಿದ್ದಾರೆ. ಅವರ ಅಪ್ಪ-ಅಮ್ಮನೂ ತುಂಬಾ ಸಂಕಷ್ಟ ಎದುರಿಸಿದ್ದಾರೆ. ಅದನ್ನ ಹೇಳಿಕೊಂಡರೆ ಯಾರೂ ನಂಬುತ್ತಿರಲಿಲ್ಲ'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಮಾಂಗಲ್ಯ ಸರ ಕಿತ್ತುಕೊಂಡರು

ಮಾಂಗಲ್ಯ ಸರ ಕಿತ್ತುಕೊಂಡರು

''ಈ ಗಲಾಟೆ ಆದಾಗ ನಾನು ರೂಮ್ ಗೆ ಹೋಗ್ಬಿಟ್ಟೆ. ಆಮೇಲೆ ನೋಡಿದಾಗ, ನನ್ನ ಮಾಂಗಲ್ಯ ಸರ ಕಿತ್ತುಕೊಂಡಿದ್ದರು. ನಮ್ಮ ಡ್ರೈವರ್ ಗೂ ಹೊಡೆದು ಕಾರ್ ಕಿತ್ತುಕೊಂಡರು. ಅಷ್ಟಾದರೂ, ನಾನು ಅವತ್ತು ಮೀಡಿಯಾ ಮುಂದೆ ಬರಲಿಲ್ಲ. ಆದ್ರೆ ಅವರೇ ಹೋಗಿ ಕಂಪ್ಲೇಂಟ್ ಕೊಟ್ಟರು. ಮೀಡಿಯಾದಲ್ಲಿ ಮಾತನಾಡಿದರು'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಸಿಕ್ಕಿಹಾಕೊಳ್ಳಲ್ಲ ಎಂಬ ಧೈರ್ಯ ಅವರಿಗೆ.!

ಸಿಕ್ಕಿಹಾಕೊಳ್ಳಲ್ಲ ಎಂಬ ಧೈರ್ಯ ಅವರಿಗೆ.!

''ಮಕ್ಕಳು ಸಿಸಿಟಿವಿ ಫುಟೇಜ್ ಹಾಳು ಮಾಡಿದ್ದಾರೆ... ನಾನು ಸಿಕ್ಕಿ ಹಾಕೊಳ್ಳಲ್ಲ ಎಂಬ ಧೈರ್ಯದ ಮೇಲೆ ಇಷ್ಟೆಲ್ಲಾ ಮಾಡಿದ್ದಾರೆ. ಮೋನಿಕಾ ಅವತ್ತು ಸಿಸಿಟಿವಿ ಮಾನಿಟರ್ ವೈರ್ ಕಟ್ ಮಾಡಿದ್ದಳು. ಆಮೇಲೆ ಅದು ರೆಕಾರ್ಡ್ ಆಗಿದೆ. ಅದನ್ನ ಪೆನ್ ಡ್ರೈವ್ ನಲ್ಲಿ ಹಾಕಿದ್ದಾಳೆ. ಅದು ಮಿಸ್ ಆಗಿ ಕಾರ್ ಡಾಕ್ಯುಮೆಂಟ್ಸ್ ಒಳಗೆ ಹೋಗಿದೆ. ಇಪ್ಪತ್ತು ದಿನಗಳಿಂದ ನಾವು ಚೆಕ್ ಮಾಡಿಲ್ಲ. ಕಾರ್ ಡಾಕ್ಯುಮೆಂಟ್ಸ್ ಒಳಗೆ ಈ ಪೆನ್ ಡ್ರೈವ್ ಇತ್ತು. ಅದನ್ನ ನೋಡಿದ್ಮೇಲೆ ಗೊತ್ತಾಯಿತು'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

More from Filmibeat

English summary
Duniya Vijay wife Nagaratna assault case: Keerthi Gowda reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X