ಪುತ್ರಿ ಮೋನಿಕಾ ಮೇಲಿನ ಕೇಸ್ ಹಿಂಪಡೆದ ದುನಿಯಾ ವಿಜಯ್

ಸೆಪ್ಟೆಂಬರ್ 23 ರಂದು ಕೀರ್ತಿ ಗೌಡ ಮೇಲೆ ನಾಗರತ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಬಳಿಕ ಕೀರ್ತಿ ಗೌಡ ವಿರುದ್ಧ ನಾಗರತ್ನ ಪೊಲೀಸರಿಗೆ ದೂರು ಕೊಟ್ಟಿದ್ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರತ್ನಗೆ ಪುತ್ರಿ ಮೋನಿಕಾ ಸಪೋರ್ಟ್ ಇತ್ತು. ಸಿಸಿಟಿವಿ ದೃಶ್ಯಾವಳಿ ಹಾಳು ಮಾಡಲು ಮೋನಿಕಾ ಪ್ರಯತ್ನ ಪಟ್ಟಿದ್ದಳು ಎಂದು ಸಿಸಿಟಿವಿ ಫುಟೇಜ್ ಸಮೇತ ಮೊನ್ನೆಯಷ್ಟೇ ಕೀರ್ತಿ ಗೌಡ ಗಿರಿನಗರ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದರು.

ಕೀರ್ತಿ ಗೌಡ ಕೊಟ್ಟ ದೂರಿನ ಅನ್ವಯ ನಾಗರತ್ನ ಹಾಗೂ ಪುತ್ರಿ ಮೋನಿಕಾ ವಿರುದ್ಧ ಪ್ರಕರಣ ದಾಖಲಾಯಿತು. ಸದ್ಯ ನಾಗರತ್ನ ನಾಪತ್ತೆ ಆಗಿದ್ದಾರೆ. ಪುತ್ರಿಯರಾದ ಮೋನಿಕಾ, ಮೊನಿಷಾ ಪೊಲೀಸ್ ಠಾಣೆಗೆ ಹಾಜರ್ ಆದರು.

ಪೊಲೀಸ್ ಸ್ಟೇಷನ್ ನಲ್ಲಿ ಮಕ್ಕಳನ್ನು ನೋಡಿ ದುನಿಯಾ ವಿಜಯ್ ಭಾವುಕರಾದರು. ಹೀಗಾಗಿ, ಮಗಳು ಮೋನಿಕಾ ಮೇಲಿನ ಕೇಸ್ ಹಿಂಪಡೆಯಲು ತಂದೆ ದುನಿಯಾ ವಿಜಯ್ ನಿರ್ಧರಿಸಿದ್ದಾರೆ.

Nagaratna assaults Keerthi Gowda: Duniya Vijay compromises for daughter Monika

''ಮಗಳ ಬಗ್ಗೆ ನೋವಿದೆ, ಕೋಪ ಇಲ್ಲ. ಹೆಣ್ಣು ಮಕ್ಕಳ ಪರಿಸ್ಥಿತಿ ಕಂಡು ತುಂಬಾ ನೋವಾಗುತ್ತಿದೆ. ನನ್ನ ಹೋರಾಟ ನಾಗರತ್ನ ವಿರುದ್ಧ ಮಾತ್ರ. ಮಗಳ ಮೇಲಲ್ಲ. ಹೀಗಾಗಿ ಪ್ರಕರಣದಿಂದ ಮೋನಿಕಾಳನ್ನು ಕೈಬಿಡಿ'' ಎಂದು ಪೊಲೀಸರ ಬಳಿ ದುನಿಯಾ ವಿಜಯ್ ಮನವಿ ಮಾಡಿದರು. ದುನಿಯಾ ವಿಜಯ್ ಮನವಿಯನ್ನ ಪೊಲೀಸರು ಪುರಸ್ಕರಿಸಿದ್ದಾರೆ.

''ನಾಗರತ್ನಗೆ ಶಿಕ್ಷೆ ಆಗಲೇಬೇಕು. ನಾಗರತ್ನ ಜೊತೆಗೆ ರಾಜಿ ಸಂಧಾನ ಇಲ್ಲ. ನಾಗರತ್ನ ಯಾವುದೇ ಕಾರಣಕ್ಕೂ ನನ್ನ ಮನೆಗೆ ಬರೋದು ಬೇಡ. ನಾನು ನಾಗರತ್ನ ಮನೆಗೆ ಹೋಗಲ್ಲ'' ಎಂದಿದ್ದಾರೆ ನಟ ದುನಿಯಾ ವಿಜಯ್.

ಸದ್ಯ ಮೋನಿಕಾ ಮೇಲಿದ್ದ ಪ್ರಕರಣವನ್ನು ಕೈಬಿಡಲಾಗಿದೆ. ನಾಗರತ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ನಾಪತ್ತೆ ಆಗಿರುವ ನಾಗರತ್ನರನ್ನ ಹುಡುಕುವಲ್ಲಿ ಪೊಲೀಸರು ತಲ್ಲೀನರಾಗಿದ್ದಾರೆ.

More from Filmibeat

English summary
Nagaratna assaults Keerthi Gowda: Duniya Vijay compromises for daughter Monika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X