ರಶ್ಮಿಕಾರನ್ನ ತೆಲುಗು ಮಂದಿ ಮೆಚ್ಚಿಕೊಳ್ಳಲು ಕಾರಣ ಹೇಳಿದ ನಾಗಾರ್ಜುನ
Recommended Video

ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಅವರನ್ನ ಕಂಡ್ರೆ ತೆಲುಗು ಮಂದಿ ಸಿಕ್ಕಾಪಟ್ಟೆ ಇಷ್ಟಪಡ್ತಿದ್ದಾರೆ. ಈಕೆ ತೆಲುಗು ಹುಡುಗಿನೇ ಎನ್ನುವಷ್ಟರ ಮಟ್ಟಿಗೆ ಅಪ್ಪಿಕೊಳ್ತಿದ್ದಾರೆ. ಅದಕ್ಕೆ ತಕ್ಕಂತೆ ರಶ್ಮಿಕಾ ಕೂಡ ಟಾಲಿವುಡ್ ನಲ್ಲಿ ವಿಶೇಷವಾದ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
'ಚಲೋ', 'ಗೀತಾಗೋವಿಂದಂ' ಚಿತ್ರದ ನಂತರ ಈಗ 'ದೇವದಾಸ್' ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದು, ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಮತ್ತು ನ್ಯಾಚುರಲ್ ಸ್ಟಾರ್ ನಾನಿ ನಾಯಕರಾಗಿದ್ದಾರೆ. ಈ ಇಬ್ಬರು ಸೂಪರ್ ಸ್ಟಾರ್ ಗಳ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದು, ತೆಲುಗು ಇಂಡಸ್ಟ್ರಿಯನ್ನ ಕಾಡ್ತಿದ್ದಾರೆ.
ರಶ್ಮಿಕಾ ಜೊತೆ ಒಂದು ಸಿನಿಮಾ ಮಾಡಿದವರು, ಇನ್ನೊಂದು ಸಿನಿಮಾ ಮಾಡೋಣ ಎಂಬ ಭರವಸೆ ಕೊಡ್ತಾರೆ. ಯಾಕಂದ್ರೆ, ಅವರಿಗೆ ರಶ್ಮಿಕಾ ಅಭಿನಯ, ಅವರ ಡೆಡಿಕೇಶನ್ ಹಾಗೂ ಆಫ್ ಸ್ಕ್ರೀನ್ ನಲ್ಲಿ ಅವರ ವ್ಯಕ್ತಿತ್ವ ಅದಕ್ಕೆ ಕಾರಣ. ಇದನ್ನ ಸ್ವತಃ ನಾಗಾರ್ಜುನ ಮತ್ತು ನಾನಿ ಕೂಡ ಒಪ್ಪಿಕೊಂಡಿದ್ದಾರೆ. ಹಾಗಿದ್ರೆ, ರಶ್ಮಿಕಾ ಬಗ್ಗೆ ತೆಲುಗು ಸ್ಟಾರ್ ಏನಂದ್ರು.? ಮುಂದೆ ಓದಿ......

ರಶ್ಮಿಕಾಗೆ ಮನ್ಮಥ ಫಿದಾ
''ಥೈಲ್ಯಾಂಡ್ ನಿಂದ ಶೂಟಿಂಗ್ ಮುಗಿಸಿ ಬರುವಾಗ ಫ್ಲೈಟ್ ನಲ್ಲಿ ನನ್ನ ಪಕ್ಕ ರಶ್ಮಿಕಾ ಕೂತಿದ್ದರು. ಸುಮಾರು ಮೂರುವರೆ ಗಂಟೆ ಹೇಗೆ ಹೋಯ್ತು ಅನ್ನೋದೇ ಗೊತ್ತಾಗ್ಲಿಲ್ಲ. ವಾಪಸ್ ಬರುವರೆಗೂ ನಗಿಸುತ್ತಲೇ ಇದ್ದರು. ಜೊತೆಗೆ ನನಗೆ ಬಾಡಿಗಾರ್ಡ್ ಆಗಿ ಕೂಡ ಇದ್ದರು. ರಾತ್ರಿ ಫ್ಲೈಟ್ ಬೇರೆ. ನಮ್ಮ ಹಿಂದೆ ಇದ್ದವರು ಮದ್ಯ ಸೇವನೆ ಮಾಡಿದ್ದರು. ಅವರಿಗೆ ರಶ್ಮಿಕಾ ಹೊಡೆದರು ಕೂಡ'' ಎಂದು ಅವರ ವ್ಯಕ್ತಿತ್ವವನ್ನ ಹೊಗಳಿದರು.

ರಶ್ಮಿಕಾಗೆ ಫುಲ್ ಮಾರ್ಕ್ಸ್ ಕೊಟ್ಟ ನಾಗ್
''ರಶ್ಮಿಕಾ ನಿಮ್ಮ ಎನರ್ಜಿ, ನಿಮ್ಮ ನಗು....ಎಲ್ಲವೂ ನನಗೆ ಇಷ್ಟ'' ಎಂದು ನಟ ನಾಗಾರ್ಜುನ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಇದಕ್ಕೂ ಮುಂಚೆ ರಶ್ಮಿಕಾ ಕೂಡ, 'ನಾಗಾರ್ಜುನ ಅವರಿಗೆ ನಾನು ಬಾಡಿಗಾರ್ಡ್' ಆಗಿದ್ದೀನಿ ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದರು.

ಸದಾ ನಗುವ ಹುಡುಗಿ
''ರಶ್ಮಿಕಾ ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಪಾಸಿಟೀವ್ ಎನರ್ಜಿ. ಸದಾ ನಗುತ್ತಿರುತ್ತಾರೆ. ಅವರು ಸೆಟ್ ನಲ್ಲಿ ಇದ್ದಾರೆ ಅಂದ್ರೆ, ಅಲ್ಲಿ ಎಲ್ಲರು ಖುಷಿಯಾಗಿರ್ತಾರೆ'' ಎಂದು ನಟ ನಾನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮತ್ತೆ ಮತ್ತೆ ಸಿನಿಮಾ
ರಶ್ಮಿಕಾ ಅವರ ಮುದ್ದಾದ ಅಭಿನಯಕ್ಕೆ, ಆ ಮುದ್ದಾದ ನಗುವಿಗೆ ಫಿದಾ ಆಗಿರುವ ತೆಲುಗು ಮಂದಿ ರಶ್ಮಿಕಾಗೆ ಮತ್ತೆ ಮತ್ತೆ ಸಿನಿಮಾ ಕೊಡ್ತಿದ್ದಾರೆ. ಒಂದು ಸಿನಿಮಾ ಮುಗಿಯುತ್ತಿದ್ದಂತೆ ಮತ್ತೊಂದು ತೆಲುಗು ಚಿತ್ರವನ್ನ ರಶ್ಮಿಕಾ ಕೈಗೆತ್ತಿಕೊಳ್ಳುತ್ತಿದ್ದಾರೆ. 'ದೇವದಾಸ್' ನಂತರ ವಿಜಯ ದೇವರಕೊಂಡ ಜೊತೆ 'ಡಿಯರ್ ಕಾಮ್ರೆಡ್' ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications