»   » 'ಚಿತ್ರಕಥೆ ಬರಹಗಾರರಿಗೆ' ನಾಗತಿಹಳ್ಳಿ ಚಂದ್ರಶೇಖರ್ ಕಡೆಯಿಂದ ಸುವರ್ಣ ಅವಕಾಶ

'ಚಿತ್ರಕಥೆ ಬರಹಗಾರರಿಗೆ' ನಾಗತಿಹಳ್ಳಿ ಚಂದ್ರಶೇಖರ್ ಕಡೆಯಿಂದ ಸುವರ್ಣ ಅವಕಾಶ

Posted By:
Subscribe to Filmibeat Kannada

ನಿಮಗೆ ಸಿನಿಮಾಗಳಿಗೆ ಚಿತ್ರಕಥೆ ಬರೆಯುವ ಆಸಕ್ತಿ ಇದಿಯಾ? ನಿಮಗೆ ಚಿತ್ರಕಥೆ ಬರೆಯವ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಬೇಕೆ? ಆಸಕ್ತಿ ಇದ್ದರೂ ಕಲಿಯಲು ಅವಕಾಶ ಸಿಗುತ್ತಿಲ್ಲವೇ? ಯೋಚಿಸಬೇಡಿ, ನಿಮ್ಮಂತ ಪ್ರತಿಭೆಗಳಿಗಾಗಿ ಈಗೊಂದು ಸುವರ್ಣ ಅವಕಾಶ ಒದಗಿಬಂದಿದೆ.

ಹೌದು, ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರಕಥೆ ಬರವಣಿಗೆಯ ಬಗ್ಗೆ ಕಾರ್ಯಗಾರ ಶಿಬಿರ ಹಮ್ಮಿಕೊಂಡಿದ್ದು, ಐದು ದಿನಗಳ ಈ ಕಾರ್ಯಗಾರದಲ್ಲಿ ಚಿತ್ರಕಥೆ ಬರೆಯುವ ಎಲ್ಲ ಹಂತಗಳನ್ನ ಹೇಳಿಕೊಡಲಾಗುತ್ತದೆಯಂತೆ.

Nagathalli Chandrashekhar Will Conduct Workshop on Script Writing

ಇದೇ ಫೆಬ್ರವರಿ 18 ರಿಂದ ಚಿತ್ರಕಥೆ ಬರೆಯುವ ಕಾರ್ಯಗಾರ ಆರಂಭವಾಗುತ್ತಿದ್ದು, ಫೆಬ್ರವರಿ 22 ರ ವರೆಗೂ ನಡೆಯಲಿದೆ. ಐದು ದಿನಗಳ ಈ ಕಾರ್ಯಗಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆಯಲಿದೆ. ಈ ಕಾರ್ಯಗಾರದಲ್ಲಿ ಕನ್ನಡ ಪ್ರತಿಭಾನ್ವಿತ ನಿರ್ದೇಶಕರಾದ ಜಯತೀರ್ಥ, ಗೌರಿಶ್ ಅಕ್ಕಿ, ಅಭಯ ಸಿಂಹ, ಅನನ್ಯ ಕಾಸರವಳ್ಳಿ, ಸುರೇಂದ್ರನಾಥ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಗಾರದಲ್ಲಿ ಭಾಗವಹಿಸಿಲು ಪ್ರವೇಶ ಶುಲ್ಕ ನಿಗಧಿಯಾಗಿದ್ದು, 13 ಸಾವಿರದ ಜೊತೆಗೆ ಟ್ಯಾಕ್ಸ್ ಕೂಡ ಪಾವತಿಸಿಬೇಕು. ಕೆಲವು ಅಭ್ಯರ್ಥಿಗಳ ಆಸಕ್ತಿ ಹಾಗೂ ಅರ್ಹತೆಗಳಿಗೆ ಅನುಗುಣವಾಗಿ ರಿಯಾಯತಿಯನ್ನ ಕೂಡ ನೀಡಲಾಗುವುದಂತೆ. ಈ ಕಾರ್ಯಗಾರಕ್ಕೆ ಭಾಗವಹಿಸಬೇಕು ಎಂದುಕೊಂಡವರು ಮೊದಲೇ ತಮ್ಮ ಹೆಸರನ್ನ ನೊಂದಾಯಿಸಿಕೊಳ್ಳಬೇಕು. ಈ ಕಾರ್ಯಗಾರ ನಡೆಯುವ ಪೂರ್ತಿ ವಿಳಾಸವನ್ನ ಕೆಳಗೆ ನೀಡಲಾಗಿದೆ.

ವಿಳಾಸ: ಟೆಂಟ್ ಸಿನಿಮಾ, #184, 17ನೇ ಮೇನ್, ಮೂರನೇ ಮಹಡಿ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು 560070
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದೂರವಾಣಿ ಸಂಖ್ಯೆ: 9900555255, 080, 65695500

English summary
Kannada Director Nagathalli Chandrashekharr Will Conduct Five Days Workshop in Script Writing at Tent Cinema. Workshop start from 18th Feb to 22nd. Abhaya simha, Surrendranath, jayatheertha, Gaurish akki Are the Guest to Script Writing Workshop.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada