ಕನಸಿನ ಕನಸು ಕತೆಗೆ ಟೈಟಲ್ ಹುಡುಕುತ್ತಿರುವ ನಾಗತಿಹಳ್ಳಿ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೆ ಟೈಟಲ್ ಹುಡುಕುತ್ತಿದ್ದಾರೆ. ಸದ್ಯ 'ಲವ್ ಇನ್ ಲಂಡನ್' ಎನ್ನುವ ಶೀರ್ಷಿಕೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಮೇಷ್ಟ್ರು. ಆದ್ರೆ ಚಿತ್ರಕ್ಕೆ ಸೂಕ್ತವಾದ ಟೈಟಲ್ ಇನ್ನು ಸಿಕ್ಕಿಲ್ಲವಂತೆ. ಹಾಗಾಗಿ ನಾಗತಿಹಳ್ಳಿ ಈಗ ಮಗಳು ಕನಸು ಸಹಾಯ ಕೇಳಿದ್ದಾರಂತೆ.

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ 'ಲವ್ ಇನ್ ಲಂಡನ್' ಹೆಸರೇ ಹೇಳುವ ಹಾಗೆ ಇದು ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣವಾಗಿದೆ. ಸುಮಾರು ಒಂದು ತಿಂಗಳು ಲಂಡನ್ ನಲ್ಲಿ ಬೀಡುಬಿಟ್ಟಿದ್ದ ನಾಗತಿಹಳ್ಳಿ ಮತ್ತು ತಂಡ ಲಂಡನ್ ನ ಸುಂದರ ತಾಣಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

ಅಂದ್ಹಾಗೆ 'ಲವ್ ಇನ್ ಲಂಡನ್' ನಲ್ಲಿ ನಟ ವಸಿಷ್ಠ ಸಿಂಹ ಮತ್ತು ಮಾನ್ವಿತಾ ಕಾಮತ್ ಕಾಣಿಸಿಕೊಂಡಿದ್ದಾರೆ. 'ಟಗರು' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ ಈಗ ನಾಗತಿಹಳ್ಳಿ ಅವರ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಬಹು ನಿರೀಕ್ಷೆಯ 'ಲವ್ ಇನ್ ಲಂಡನ್' ಚಿತ್ರದ ವಸಿಷ್ಠ ಮತ್ತು ಮಾನ್ವಿತಾ ಲುಕ್ ರಿಲೀಸ್ ಆಗಿದೆ. ಮುಂದೆ ಓದಿ..

ಮಗಳು ಕನಸು ಬರೆದ ಕತೆ

ಮಗಳು ಕನಸು ಬರೆದ ಕತೆ

ಸದ್ಯ ಲವ್ ಇನ್ ಲಂಡನ್ ಅಂತ ಶೀರ್ಷಿಕೆ ಇಟ್ಟಿರುವ ಈ ಸಿನಿಮಾಗೆ ಕಥೆ ಬರೆದಿದ್ದು ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಕನಸು. ಮಗಳ ಕತೆಯನ್ನು ಸಿನಿಮಾ ರೂಪಕ್ಕೆ ತಂದ ಮೇಷ್ಟ್ರಿಗೆ ಟೈಟಲ್ ಸಹ ಪುತ್ರಿಯೇ ನೀಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಹಂತದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸಧ್ಯದಲ್ಲೇ ಶೀರ್ಷಿಕೆ ಬಹಿರಂಗ ಪಡಿಸಲಿದೆಯಂತೆ.

ಕುತೂಹಲ ಹೆಚ್ಚಿಸಿದೆ ಚಿತ್ರದ ಟೈಟಲ್

ಕುತೂಹಲ ಹೆಚ್ಚಿಸಿದೆ ಚಿತ್ರದ ಟೈಟಲ್

ನಾಗತಿಹಳ್ಳಿ ಚಂದ್ರಶೇಖರ್ ಹಿಂದೆ 'ಅಮೇರಿಕಾ ಅಮೇರಿಕಾ', 'ಪ್ಯಾರೀಸ್ ಪಯಣ' ಅಂತಹ ಕ್ಯಾಚಿ ಟೈಟಲ್ ಗಳ ಸಿನಿಮಾಗಳನ್ನು ನೀಡಿದ್ದಾರೆ. ವಿದೇಶದ ಹೆಸರನ್ನೆ ಬೆಳಸಿಕೊಂಡು, ಬಹುತೇಕ ಅಲ್ಲಿಯೇ ಚಿತ್ರೀಕರಣ ಮಾಡುವ ಮೂಲಕ ಕನ್ನಡ ಚಿತ್ರಾಭಿಮಾನಿಗಳಿಗೆ ಅಮೇಕಾ ಮತ್ತು ಪ್ಯಾರೀಸ್ ಅನ್ನು ತೋರಿಸಿದ್ದರು. ಈಗ ಲಂಡನ್ ಗೆ ಕರೆದುಕೊಂಡು ಹೋಗಲು ಸಿದ್ಧರಾಗಿರುವ ಚಂದ್ರಶೇಖರ್ ಚಿತ್ರದ ಶೀರ್ಷಿಕೆ ಏನಾಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ.

ಮಾನ್ವಿತಾ-ವಸಿಷ್ಠ ಹೊಸ ಲುಕ್

ಮಾನ್ವಿತಾ-ವಸಿಷ್ಠ ಹೊಸ ಲುಕ್

ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ಇದುವರೆಗೂ ಸಿನಿಮಾದ ಬಗ್ಗೆ ಪೋಸ್ಟರ್ ಆಗಲಿ ಅಥವಾ ಮಾನ್ವಿತಾ ಮತ್ತು ವಸಿಷ್ಠ ಅವರ ಲುಕ್ ಅನ್ನು ರಿವೀಲ್ ಮಾಡಿರಲಿಲ್ಲ. ಆದ್ರೀಗ ಮಾನ್ವಿತಾ ಮತ್ತು ವಸಿಷ್ಠ ಸಿಂಹ ಡ್ಯುಯೆಟ್ ಹಾಡುವ ಪೋಸ್ಟರ್ ರಿಲೀಸ್ ಆಗಿದೆ. ಈ ರೋಮ್ಯಾಂಟಿಕ್ ಹಾಡಿನ ಫೋಟೋ ಈಗ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ವಿಶೇಷ ಪಾತ್ರದಲ್ಲಿ ಸುಮಲತಾ ಅಂಬರೀಶ್

ವಿಶೇಷ ಪಾತ್ರದಲ್ಲಿ ಸುಮಲತಾ ಅಂಬರೀಶ್

ಇನ್ನು ಹೆಸರಿಡದ ಲವ್ ಇನ್ ಲಂಡನ್ ಎಂದು ಕೆರೆಯಲಾಗುತ್ತಿರುವ ಚಿತ್ರದಲ್ಲಿ ಸುಮಲತಾ ಅಂಬರೀಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ತಾಯಿಗೆ ತಕ್ಕ ಮಗ' ಚಿತ್ರದ ನಂತರ ಸುಮಲತಾ ಅಂಬರೀಶ್ ಬಣ್ಣ ಹಚ್ಚಿಸರುವ ಸಿನಿಮಾ. ವಿಶೇಷ ಅಂದ್ರೆ ಸುಮಲತಾ ಜೊತೆ ನಟ ಅನಂತ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಲತಾ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Kannada director Nagathihalli chandrashekar consults daughter Kanasu for title his upcoming movie. actress manvitha and vasishta simha starred in nagathihalli new movie is yet to be titled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X