For Quick Alerts
  ALLOW NOTIFICATIONS  
  For Daily Alerts

  ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್

  |

  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಕರಾಗಿ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ತಮ್ಮ ಕೆಲವು ಸಿನಿಮಾಗಳನ್ನು ತಾವೇ ನಿರ್ಮಾಣ ಮಾಡಿದ್ದಾರೆ. ಇದೀಗ ಇವುಗಳ ನಂತರ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

  ನಾಗತಿಹಳ್ಳಿ ಚಂದ್ರಶೇಖರ್ ವಿತರಣೆಗೆ ಕೈ ಹಾಕಿದ್ದಾರೆ. ಟೆಂಟ್ ಸಿನಿಮಾ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದ ಇವರು, ಈಗ ತಮ್ಮ ಸಿನಿಮಾವನ್ನು ತಾವೇ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ.

  ''ಸಿನಿಮಾ ಸಾಮೂಹಿಕ ಕಲೆಯಾಗಿಯೇ ಉಳಿಯಬೇಕು ''- ನಾಗತಿಹಳ್ಳಿ ಚಂದ್ರಶೇಖರ್''ಸಿನಿಮಾ ಸಾಮೂಹಿಕ ಕಲೆಯಾಗಿಯೇ ಉಳಿಯಬೇಕು ''- ನಾಗತಿಹಳ್ಳಿ ಚಂದ್ರಶೇಖರ್

  ನಮ್ಮ ಮಕ್ಕಳನ್ನು ನಾವೇ ಬೆಳೆಸಬೇಕು ಎನ್ನುವ ಹಾಗೆ, ನಮ್ಮ ಸಿನಿಮಾವನ್ನು ಈ ಬಾರಿ ನಿರ್ಮಾಣದ ಜೊತೆಗೆ ವಿತರಣೆ ಮಾಡುತ್ತಿದ್ದೇವೆ ಎಂದಿದ್ದಾರೆ. ಸಿನಿಮಾ ಡಿಸೆಂಬರ್ ನಲ್ಲಿ ಅನೇಕ ಸಿನಿಮಾಗಳ ಬಿಡುಗಡೆ ಇದ್ದು, ಜನವರಿ 2020 ಗೆ ಸಿನಿಮಾ ತೆರೆಗೆ ಬರುತ್ತಿದೆ.

  ವಿಶ್ವಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದ್ದು, ನೈಜಿರಿಯಾ, ತಾಂಜೆನಿಯಾ, ಸೌತ್ ಆಫ್ರಿಕಾ, ಬ್ಯಾಂಕಾಕ್, ಟೋಕಿಯೋ, ಯುಎಸ್, ಇಂಗ್ಲೆಂಡ್ ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ ಎಲ್ಲ ಕಡೆ ಸಿನಿಮಾವನ್ನು ತಲುಪಿಸಿದ್ದೇವೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

  ಕನಸಿನ ಕನಸು ಕತೆಗೆ ಟೈಟಲ್ ಹುಡುಕುತ್ತಿರುವ ನಾಗತಿಹಳ್ಳಿಕನಸಿನ ಕನಸು ಕತೆಗೆ ಟೈಟಲ್ ಹುಡುಕುತ್ತಿರುವ ನಾಗತಿಹಳ್ಳಿ

  'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಸೆನ್ಸಾರ್ ಮುಗಿದಿದೆ. ವಸಿಷ್ಟ ಎನ್ ಸಿಂಹ, ಮಾನ್ವಿತಾ ಕಾಮತ್, ಪ್ರಕಾಶ್ ಬೆಳವಾಡಿ, ಸುಮಲತಾ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  English summary
  Director Nagathihalli Nagathihalli Chandrashekar turns as distributor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X