ಹೊಸ ಚಿತ್ರ ಕೈಗೆತ್ತಿಕೊಂಡ ನಾಗತಿಹಳ್ಳಿ ಚಂದ್ರಶೇಖರ್
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮೂರು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಆಕ್ಷನ್ ಕಟ್ ಗೆ ಮರಳಿದ್ದಾರೆ. ಈ ಬಾರಿ ಅವರು ಕಾದಂಬರಿ ಆಧಾರಿತ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬೀಳಬೇಕು.
'ಬ್ರೇಕಿಂಗ್ ನ್ಯೂಸ್' (2012) ಚಿತ್ರದ ಬಳಿಕ ಅವರು ಮೂರು ವರ್ಷಗಳ ಕಾಲ ಯಾವುದೇ ಚಿತ್ರಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಆದರೂ ಹೊಸಬರ ಚಿತ್ರಗಳಿಗೆ ಸಲಹೆ ಸೂಚನೆಗಳನ್ನು ಕೊಡುವುದರಲ್ಲಿ ಮಗ್ನರಾಗಿದ್ದರು. ಇದೀಗ ಅವರು ಫ್ರೆಶ್ ಸಬ್ಜೆಕ್ಟ್ ನೊಂದಿಗೆ ಮರಳಿದ್ದಾರೆ. [ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಫಾರಿನ್ ಪರಿಣಯ]

ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಲಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್. ಮೇ ಮೊದಲ ವಾರದಲ್ಲಿ ಚಿತ್ರಕ್ಕೆ ಮುಹೂರ್ತ. ಪಾತ್ರವರ್ಗ, ತಾಂತ್ರಿಕ ಬಳಗದ ವಿವರಗಳು ಇನ್ನಷ್ಟೇ ಹೊರಬೀಳಬೇಕು.
ತಮ್ಮ ಪುತ್ರಿ ಕನಸು ನಾಗತಿಹಳ್ಳಿ ಅವರು ಮದುವೆ ಕೆಲಸಗಳಲ್ಲಿ ಬಿಜಿಯಾಗಿದ್ದ ಕಾರಣ ನಿರ್ದೇಶನವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಎರಡು ಸ್ಕ್ರಿಪ್ಟ್ ಗಳನ್ನು ಸಿದ್ಧ ಮಾಡಿಟ್ಟುಕೊಂಡು ಒಂದನ್ನು ಫೈನಲ್ ಮಾಡಿದ್ದಾರೆ.
ಈ ಬಾರಿ ನಾಗತಿಹಳ್ಳಿ ಮೇಷ್ಟ್ರು ಯಾವ ಕಾದಂಬರಿ ಕೈಗೆತ್ತಿಕೊಂಡಿದ್ದಾರೋ ಏನೋ ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಮನೆಮಾಡಿದೆ. ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ, ಒಲವೇ ಜೀವನ ಲೆಕ್ಕಾಚಾರ ಚಿತ್ರಗಳ ಬಳಿಕ ಈ ಬಾರಿ ಅವರ ಆದ್ಯತೆ ಯಾವ ರೀತಿಯ ಚಿತ್ರದ ಕಡೆಗೆ ಇದ್ದೀತು. (ಏಜೆನ್ಸೀಸ್)


Click it and Unblock the Notifications











