For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಲಸಿಕೆ ಪಡೆದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

  |

  ಭಾರತದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಈಗಾಗಲೇ ಅನೇಕರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಸಿನಿ ಕಲಾವಿದರು ಸಹ ಈ ಬಾರಿ ಕೊರೊನಾ ಲಸಿಕೆ ಪಡೆದು, ಅಭಿಮಾನಿಗಳಿಗೂ ಲಸಿಕೆ ಹಾಕಿಸಿಕೊಳ್ಳಿ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ.

  ಇದೀಗ ಚಂದನವನದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮೊದಲ ಬಾರಿಗೆ ಲಸಿಕೆ ಪಡೆದಿದ್ದು, ಫೋಟೋವನ್ನು ಹಂಚಿಕೊಂಡಿದ್ದಾರೆ.

  ಕೋವಿಡ್ ಲಸಿಕೆ ಪಡೆದ ಕನ್ನಡದ ಮೊದಲ ನಟ ಅನಂತ್ ನಾಗ್ಕೋವಿಡ್ ಲಸಿಕೆ ಪಡೆದ ಕನ್ನಡದ ಮೊದಲ ನಟ ಅನಂತ್ ನಾಗ್

  ಇನ್ನು ಇತ್ತೀಚಿಗಷ್ಟೆ ಕನ್ನಡದ ಹಿರಿಯ ನಟ ಅನಂತ್ ನಾಗ್ ಕೂಡ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಂದನವನದಲ್ಲಿ ಕೊರೊನಾ ಲಸಿಕೆ ಪಡೆದ ಮೊದಲ ಕಲಾವಿದ ಅನಂತ್.

  ರಾಕಿ ಭಾಯ್ ಹಿಂದೆ ಬಿದ್ದ ತೆಲುಗಿನ ನಿರ್ಮಾಪಕರು | Filmibeat Kannada

  ಇತ್ತೀಚಿಗಷ್ಟೆ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಸಹ ಕೋವಿಡ್ ಲಸಿಕೆ ಹಾಕಿಸಿಕೊಂಡು ಎಲ್ಲರೂ ಲಸಿಕೆ ಪಡೆಯಿರಿ ಎಂದು ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಕಮಲ್ ಹಾಸನ್, 'ಶ್ರೀ ರಾಮಚಂದ್ರ ಆಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಪಡೆದೆ. ನಿಮ್ಮ ಕಾಳಜಿಗೆ ಮಾತ್ರವಲ್ಲದೆ, ಸಮಾಜದ ಬಗ್ಗೆ ಕಾಳಜಿ ಇರುವವರು ಸಹ ಲಸಿಕೆ ಪಡೆಯಿರಿ. ಈಗ ರೋಗದ ವಿರುದ್ಧ ಹೋರಾಡುವ ಲಸಿಕೆ ಪಡೆಯೋಣ. ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಲಸಿಕೆಗೆ ಸಿದ್ಧರಾಗಿ' ಎಂದಿದ್ದರು.

  English summary
  Director Nagathihalli Chandrashekhar takes corona vaccine in Apollo Hospital in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X