'ಪೈಲ್ವಾನ್' ಪೈರಸಿ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ
'ಪೈಲ್ವಾನ್' ಸಿನಿಮಾದ ಪೈರಸಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದೆ. ಈಗಾಗಲೇ ಈ ಬಗ್ಗೆ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
''ಇತರರ ಬೆವರಿನ ಬೆಲೆಯನ್ನು ಕದ್ದುಣ್ಣುವುದು ಅಕ್ಷಮ್ಯ.'' ಎಂದು ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ''ಯಾರದೇ ಚಿತ್ರ ಇರಲಿ, ಪೈರಸಿ ಮಾಡುವುದು ನಮ್ಮ ಮನೆಗೆ ನಾವೇ ಬೆಂಕಿ ಹಾಕಿದಂತೆ. ಕನ್ನಡ ನಾವೆಲ್ಲ ಬದುಕಬೇಕಾದ ಪುಟ್ಟಮನೆ.'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪೈರಸಿ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು,.ಈ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ತಡವಾಗಿ ಟ್ವೀಟ್ ಮಾಡಿದ್ದರೂ, ಪರಿಣಾಮಕಾರಿಯಾಗಿ ಬರೆದಿದ್ದಾರೆ.

ಈ ಹಿಂದೆಯಿಂದಲೂ ಅನೇಕ ಸಿನಿಮಾಗಳು ಪೈರಸಿ ಆಗಿದ್ದವು. ಆದರೆ, 'ಪೈಲ್ವಾನ್' ಸಿನಿಮಾದ ಪೈರಸಿ ಬೇರೆಯದ್ದೆ ರೂಪ ಪಡೆದುಕೊಂಡಿತು. ಪೈರಸಿ ಮಾಡುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಹಂಚಲಾಗಿತ್ತು. ಇದನ್ನು ಬೇರೆ ಬೇರೆ ನಟರು, ನಿರ್ದೇಶಕರುಗಳು ವಿರೋಧಿಸಿರುವುದು ಮೆಚ್ಚುವ ಸಂಗತಿ.

ಅಂದಹಾಗೆ, 'ಪೈಲ್ವಾನ್' ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸುದೀಪ್ ತಪ್ಪು ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದಿದ್ದಾರೆ. ಇನ್ನು ಇದೆಲ್ಲವನ್ನು ಮೀರಿ ಸಿನಿಮಾ 25 ದಿನಗಳನ್ನು ಪೂರೈಸಿದೆ.


Click it and Unblock the Notifications











