»   » ಸೆಪ್ಟೆಂಬರ್‌ 30ರಂದು ಪ್ರಶಸ್ತಿ ಪ್ರದಾನ

ಸೆಪ್ಟೆಂಬರ್‌ 30ರಂದು ಪ್ರಶಸ್ತಿ ಪ್ರದಾನ

Posted By: Super
Subscribe to Filmibeat Kannada

ಬೆಂಗಳೂರು : ಸಾಹಸೀ ನಿರ್ಮಾಪಕ ಹಾಗೂ ಹಾಸ್ಯನಟ ದ್ವಾರಕೀಶ್‌ ಅವರಿಗೆ ಈ ಸಾಲಿನ ಶಂಕರ್‌ನಾಗ್‌ ಸ್ಮಾರಕ ಪ್ರಶಸ್ತಿ ನೀಡಿಲಾಗಿದೆ. ಜ್ಯೋತಿ ನ್ಯೂಸ್‌ ಅಂಡ್‌ ವಾಯ್ಸ್‌ ಮತ್ತು ಶಂಕರ್‌ನಾಗ್‌ ಯುವಜನ ಸಂಘ ಸಂಯುಕ್ತವಾಗಿ ಈ ಪ್ರಶಸ್ತಿ ನೀಡುತ್ತಿದೆ.

ಸೆಪ್ಟೆಂಬರ್‌ 30ರಂದು ಸಂಜೆ ದಾಸರಹಳ್ಳಿ ಮಹಿಮಪ್ಪ ಶಾಲೆಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖ್ಯಾತ ಚಿತ್ರನಟ, ಸಂಸತ್‌ ಸದಸ್ಯ ಅಂಬರೀಶ್‌ ಅವರು ದ್ವಾರಕೀಶ್‌ಗೆ ಪ್ರಶಸ್ತಿ ನೀಡಿ ಗೌರವಿಸುವರು ಎಂದು ಸಂಘದ ಗೌರವಾಧ್ಯಕ್ಷ ಕೆ. ಮುನಿರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರು ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಸಾ.ರಾ. ಗೋವಿಂದು, ಶಾಸಕ ಎಂ.ಆರ್‌. ಸೀತಾರಾಂ, ರಾಘವೇಂದ್ರ ರಾಜ್‌ಕುಮಾರ್‌ ಮೊದಲಾದವರು ಭಾಗವಹಿಸುವರು ಎಂದು ಶೆ.ಭೋ. ರಾಧಾಕೃಷ್ಣ ತಿಳಿಸಿದರು.

ಭಾರತದ ಹೊರಗೆ ಹಲವು ಕನ್ನಡ ಚಿತ್ರಗಳನ್ನು ನಿರ್ಮಿಸಿದ ಸಾಹಸಿ ನಿರ್ಮಾಪಕ ದ್ವಾರಕೀಶ್‌ ಅವರನ್ನು ಕ್ರಿಯಾಶೀಲ ನಟ - ನಿರ್ದೇಶಕ ಶಂಕರ್‌ನಾಗ್‌ ಹೆಸರಿನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ. (ಇನ್‌ಫೋ ವಾರ್ತೆ)

English summary
Actor, producer Dwarakish choosen for Shankarnag award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada