ಏಕಾಂಗಿ ಸಿನಿಮಾ ಸೋಲು: 'ಚಿತ್ರಪ್ರೇಮಿಯಾಗಿ ರವಿ ಸರ್ ಅವರಲ್ಲಿ ಕ್ಷಮೆ ಕೋರುತ್ತೇನೆ'

By ನಾಗೇಶ್ ಶೆಣೈ

ಇತ್ತೀಚಿಗಷ್ಟೇ ಯುಟ್ಯೂಬ್‌ನಲ್ಲಿ ರವಿಚಂದ್ರನ್‌ ಅವರ ಹಳೆಯ ಒಂದು ಸಂದರ್ಶನದ ತುಣುಕನ್ನು ನೋಡುತ್ತಿದ್ದೆ. ಅದರಲ್ಲಿ "ಏಕಾಂಗಿ" ಚಿತ್ರದ ಸೋಲಿನ ಕುರಿತು ಮಾತನಾಡುತಿದ್ದರು. ಅವರ ಮಾತಿನಲ್ಲಿ ಚಿತ್ರದ ಬಗ್ಗೆ ಅವರಿಗಿದ್ದ ಅಪಾರವಾದ ನಂಬಿಕೆಯನ್ನು ಗಮನಿಸಿದೆ.

ಯುಟ್ಯೂಬ್‌ನಲ್ಲಿ ಹುಡುಕಾಡಿ ಚಿತ್ರವನ್ನು ನೋಡಿದೆ. "ಏಕಾಂಗಿ"ಯನ್ನು ಮನಸ್ಸೆಂಬ ಕಣ್ಣಿನಿಂದ ನೋಡಿದರೆ ಎಲ್ಲರಿಗೂ ಇಷ್ಟ ಆಗೇ ಆಗುತ್ತೆ. ತುಂಬಾನೇ ಒಳ್ಳೆಯ ಮೆಸೇಜ್ ಚಿತ್ರದಲ್ಲಿತ್ತು. ಆದರೆ ಆ ಮೆಸೇಜ್ ಆಗಿನ ಕಾಲಕ್ಕಿಂತ ಈಗಿನ ಕಾಲಕ್ಕೆ ಇನ್ನೂ ಹೆಚ್ಚು ಪ್ರಸ್ತುತ ಆಗಿದೆಯೆಂದರೆ ತಪ್ಪಾಗಲಾರದು.

Nagesh Shenoy reaction on V. Ravichandrans Ekangi film

ಚಿತ್ರವೂ 2001 ಬದಲಿಗೆ 2023 ನಲ್ಲಿ ಬಿಡುಗಡೆ ಆಗಿದ್ದರೆ, ಇನ್ನೂ ಹೆಚ್ಚು ಜನರನ್ನು ಕನೆಕ್ಟ್ ಆಗಿ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿತ್ತೋ ಏನೋ ಅಂತ ಅನಿಸಿತು. ಪ್ರೀತಿ ಎಂಬ ಅಸ್ತ್ರದ ಆಘಾತಕ್ಕೆ ಒಳಗಾಗಿ ಮೋಸ ಹೋಗುವವರ ಸಂಖ್ಯೆ ಈಗ ತುಂಬಾನೇ ಜಾಸ್ತಿ ಆಗಿದೆ. ಹಾಗೇನೇ ಏಕಾಂಗಿತನವನ್ನು ಸಹಿಸಲಾಗದೆ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಏರುತ್ತಿದೆ.

ಏಕಾಂಗಿಯಾಗಿದ್ದಾಗ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿತು ನಮ್ಮದೆಯಾದ ಒಂದು ಪುಟ್ಟ ಪ್ರಪಂಚವನ್ನು ಮಾಡಿಕೊಂಡು ಅದರ ಪರಿಧಿಯೊಳಗೆ ಬದುಕಿ ಸುಖ ಸಂತೋಷವನ್ನು ಕಾಣುವ ಕಲೆಯನ್ನು ಕಲಿಯಬೇಕಾದ ಅನಿವಾರ್ಯತೆ ತಲೆದೂರುತ್ತಿದೆ. ಕಾರಣ ಹೊರ ಪ್ರಪಂಚದಲ್ಲಿ ಎಲ್ಲವೂ ಇದೆ ಆದರೆ ಬಹುಮುಖ್ಯವಾಗಿ ಬೇಕಾದ ನೆಮ್ಮದಿನೇ ಮಾಯವಾಗಿದೆ.

ಈ ಮೇಲಿನ ಸಂದೇಶವನ್ನು ರವಿ ಸರ್ 2001 ರಲ್ಲೇ ತಮ್ಮ ಚಿತ್ರದ ಮೂಲಕ ತಿಳಿಸಿ ಗೆದ್ದು ಬಿಟ್ರು. ಆದರೆ, ಪ್ರೇಕ್ಷಕರಿಗದು ಅರ್ಥವಾಗದೇ ಚಿತ್ರ ಹಣ ಗಳಿಕೆ ವಿಚಾರದಲ್ಲಿ ಸೋತಿತು. ಕಂಟೆಂಟ್ ವಿಚಾರಕ್ಕೆ ಬಂದರೆ "ಏಕಾಂಗಿ" ಇವತ್ತಿಗೂ ಗೆಲ್ಲುವ ಕುದುರೆನೇ ಅನ್ನೋ ಮಾತನ್ನು ಚಿತ್ರ ನೋಡಿದ ಯಾರು ಸಹ ಅಲ್ಲಗೆಳೆಯುವಂತಿಲ್ಲ.

Nagesh Shenoy reaction on V. Ravichandrans Ekangi film

22 ವರ್ಷದ ನಂತರ ಚಿತ್ರವನ್ನು ನೋಡಿ ನನ್ನ ಮನಸ್ಸಿನ ಅಭಿಪ್ರಾಯವನ್ನು ಹಂಚಿಕೊಳ್ಳುತಿರೋದಕ್ಕೆ ಒಬ್ಬ ಚಿತ್ರಪ್ರೇಮಿಯಾಗಿ ರವಿ ಸರ್ ಅವರಲ್ಲಿ ನಾನು ಕ್ಷಮೆ ಕೇಳಲು ಇಚ್ಛಿಸುತ್ತೇನೆ. ರವಿಚಂದ್ರನ್ ಬರೆದು, ನಿರ್ದೇಶಿಸಿ ನಿರ್ಮಿಸಿದ್ದ ಏಕಾಂಗಿ ಚಿತ್ರ ಮಾರ್ಚ್ 2002ರಲ್ಲಿ ಬಿಡುಗಡೆಯಾಗಿತ್ತು.

ಏಕಾಂಗಿ ಚಿತ್ರಕ್ಕೆ ರವಿಚಂದ್ರನ್ ಅವರೇ ಸಂಗೀತವನ್ನು ನೀಡಿದ್ದರು ಕೂಡಾ. ಕ್ರೇಜಿ ಸ್ಟಾರ್ ಅವರ ಮಹತ್ವಾಕಾಂಕ್ಷೆಯ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದಯನೀಯ ಸೋಲನ್ನು ಕಂಡಿತ್ತು. ರವಿಚಂದ್ರನ್ ಸಾಕಷ್ಟು ಹಣವನ್ನು ಕೂಡಾ ಈ ಚಿತ್ರದ ಮೂಲಕ ಕಳೆದುಕೊಂಡಿದ್ದರು.

ಈ ಚಿತ್ರದ ಸೋಲು ರವಿಚಂದ್ರನ್ ಅವರನ್ನು ಜರ್ಝರಿತಗೊಳಿಸಿತ್ತು. ಚಿತ್ರದ ಹಾಡುಗಳು ಭಾರೀ ಜನಪ್ರಿಯವಾಗಿದ್ದರು ಕೂಡಾ, ಯಾಕೋ ಏನೋ ಚಿತ್ರ ಸೋಲುಂಡಿತ್ತು. ಇದಾದ ನಂತರ ಚಿತ್ರದ ಸೋಲನ್ನು ಬಹುತೇಕ ತಮ್ಮ ಪ್ರತೀ ಸಂದರ್ಶನದಲ್ಲೂ ರವಿಚಂದ್ರನ್ ಉಲ್ಲೇಖಿಸಿ ನೋವು ವ್ಯಕ್ತ ಪಡಿಸಿದ್ದುಂಟು.

More from Filmibeat

English summary
Nagesh Shenoy on Ravichandran's Ekangi film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X