For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನಕ್ಕೆ ಬೆಂಬಲ ನೀಡಿದರೇ ನಗ್ಮಾ?: ನಟಿ ವಿರುದ್ಧ ಟ್ವಿಟ್ಟರ್‌ನಲ್ಲಿ ತೀವ್ರ ವಾಗ್ದಾಳಿ

  |

  ನಟಿ, ರಾಜಕಾರಣಿ ನಗ್ಮಾ ಅವರ ಟ್ವೀಟ್‌ಗಳು ಆಗಾಗ್ಗೆ ವಿವಾದಕ್ಕೆ ಆಸ್ಪದವಾಗುತ್ತಲೇ ಇರುತ್ತವೆ. ಇತ್ತೀಚಿನ ಟ್ವೀಟ್ ಒಂದು ತುಸು ಹೆಚ್ಚಿಗೇ ವಿವಾದಕ್ಕೆ ಕಾರಣವಾಗಿದೆ.

  ಮಳೆಯಲ್ಲಿ ಮಗನ ಜೊತೆ ವಿಶೇಷ ವಿಡಿಯೋ ಹಂಚಿಕೊಂಡ ಶ್ರೀಮುರಳಿ | Sri Murali & son

  ನಗ್ಮಾ ಅವರ ಇತ್ತೀಚಿನ ಟ್ವೀಟ್ ಒಂದರಲ್ಲಿ, ನಟಿಯು ಪಾಕಿಸ್ತಾನದ ಪತ್ರಕರ್ತರನ್ನು ವಹಿಸಿಕೊಂಡು ಮಾತನಾಡಿ, ಸ್ಥಳೀಯ ಚಾನೆಲ್ ಹಾಗೂ ರಾಜಕಾರಣಿಯೊಬ್ಬರನ್ನು ತೆಗಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

  #NagmaStandsWithPakistan ಹ್ಯಾಷ್‌ಟ್ಯಾಗ್ ಟಾಪ್ ಟ್ರೆಂಡ್ ಆಗುತ್ತಿದ್ದು, ಹಲವಾರು ಮಂದಿ ಇದೇ ಹ್ಯಾಷ್‌ಟ್ಯಾಗ್ ಬಳಸಿ, ನಗ್ಮಾ ಪಾಕಿಸ್ತಾನದ ಪರ ವಕಾಲತ್ತು ವಹಿಸುತ್ತಿದ್ದಾರೆ. ನಗ್ಮಾಗೆ ಪಾಕ್ ಮೇಲೆ ಮೋಹ ಇನ್ನೂ ಹಲವು ರೀತಿಯ ಟ್ವೀಟ್ ಮಾಡುತ್ತಿದ್ದಾರೆ.

  ಹಿಂದಿ ನ್ಯೂಸ್‌ ಚಾನೆಲ್‌ನಲ್ಲಿ ಚರ್ಚೆ

  ಹಿಂದಿ ನ್ಯೂಸ್‌ ಚಾನೆಲ್‌ನಲ್ಲಿ ಚರ್ಚೆ

  ಹಿಂದಿಯ ಚಾನೆಲ್ ಒಂದು ಬಿಜೆಪಿಯ ವಕ್ತಾರ ಹಾಗೂ ಪಾಕಿಸ್ತಾನದ ಪತ್ರಕರ್ತರ ನಡುವೆ ಚರ್ಚೆ ಏರ್ಪಡಿಸಿತ್ತು. ಇತ್ತೀಚಿನ ಟಿವಿ ಚರ್ಚೆಗಳಂತೆ ಅದೂ ಸಹ ಏಕಪಕ್ಷೀಯವಾಗಿತ್ತು. ಬಿಜೆಪಿ ವಕ್ತಾರ ಪಾಕಿಸ್ತಾನದ ಪತ್ರಕರ್ತರನ್ನು ಮಾತನಾಡಲು ಬಿಡದೇ ತಾನೇ ಜೋರು ದನಿಯಲ್ಲಿ ಪಾಕಿಸ್ತಾನವನ್ನು ಖಂಡಿಸುತ್ತಿದ್ದರು.

  ಪಾಕ್ ಪತ್ರಕರ್ತರ ಪರ ನಗ್ಮಾ ಟ್ವೀಟ್

  ಪಾಕ್ ಪತ್ರಕರ್ತರ ಪರ ನಗ್ಮಾ ಟ್ವೀಟ್

  ಇದನ್ನು ನೋಡಿ ಟ್ವೀಟ್ ಮಾಡಿದ ನಗ್ಮಾ, 'ಪಾಕಿಸ್ತಾನಿ ಪತ್ರಕರ್ತ ತಾರೀಖ್ ಪೀರ್ಜಾದಾ ಕುರಿತು ಎಷ್ಟು ಕೆಟ್ಟಪದಗಳನ್ನು ಬಳಸಿ ಆ ಬಿಜೆಪಿ ವಕ್ತಾರ ಚಾನೆಲ್‌ನ ಚರ್ಚೆಯಲ್ಲಿ ಬೈಯುತ್ತಿದ್ದಾನೆ, ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮಹಿಳಾ ಪತ್ರಕರ್ತರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲಾಗುತ್ತಿದೆ. ಅವರನ್ನು ಅವಮಾನಿಸುವುದೇ ಉದ್ದೇಶವಾಗಿದ್ದರೆ ಅವರನ್ನು (ಪಾಕಿಸ್ತಾನ ಪತ್ರಕರ್ತರನ್ನು) ಏಕೆ ಕರೆಯುತ್ತೀರಿ ಎಂದು ಪ್ರಶ್ನಿಸಿದ್ದರು ನಗ್ಮಾ.

  ನಗ್ಮಾ ಪಾಕ್ ಪರ ಟ್ವಿಟ್ಟರ್ ಟ್ರೆಂಡಿಂಗ್

  ನಗ್ಮಾ ಪಾಕ್ ಪರ ಟ್ವಿಟ್ಟರ್ ಟ್ರೆಂಡಿಂಗ್

  ಈ ಟ್ವೀಟ್‌ ಬಿಜೆಪಿಪರರ ಹಾಗೂ ಇನ್ನೂ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದು, 'ನಗ್ಮಾ ಪಾಕ್‌ ಪರ' ಎಂದು ಟ್ವಿಟ್ಟರ್ ಟ್ಯಾಗ್ ಸೃಷ್ಟಿಸಿ, ನಗ್ಮಾಗೆ ಬೈಗುಳಗಳ ಸುರಿಮಳೆಯನ್ನು ಟ್ವಿಟ್ಟರ್‌ ನಲ್ಲಿ ಸುರಿಸಲಾಗುತ್ತಿದೆ.

  ಕನ್ನಡದಲ್ಲೂ ನಟಿಸಿರುವ ನಟಿ ನಗ್ಮಾ

  ಕನ್ನಡದಲ್ಲೂ ನಟಿಸಿರುವ ನಟಿ ನಗ್ಮಾ

  ನಗ್ಮಾ ಈ ಹಿಂದೆ ಬಹುಬೇಡಿಕೆಯ ನಾಯಕಿ ನಟಿ ಆಗಿದ್ದರು. ಕನ್ನಡದ ಕುರುಬನ ರಾಣಿ, ರವಿಮಾಮ, ಹೃದಯವಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಹಿಂದಿ ಭಾಷೆಯಲ್ಲಿ ಇವರು ಬಹುಖ್ಯಾತರಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಪಕ್ಷದ ಸದಸ್ಯೆ ಆಗಿದ್ದಾರೆ. ಇವರ ಸಹೋದರಿ ಜ್ಯೋತಿಕ ಸಹ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ.

  English summary
  Actress turned politician Nagma's twitter post create debate in social media. She defended Pakistan journalists and lambasted on BJP spokesperson. So #nagmastandswithPaistan hashtag trending in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X