»   » ಅಮೆರಿಕಾ ತೋರಿಸುವ ‘ಪ್ರೀತಿಯ ಹುಡುಗಿ’

ಅಮೆರಿಕಾ ತೋರಿಸುವ ‘ಪ್ರೀತಿಯ ಹುಡುಗಿ’

Posted By: Super
Subscribe to Filmibeat Kannada

ದು ವರ್ಷ ಕಾಲ ಪ್ರದರ್ಶನ ಕಂಡ ನಾಗತಿಹಳ್ಳಿ ಚಂದ್ರಶೇಖರ್‌ ಅವರ 'ಅಮೆರಿಕಾ ಅಮೆರಿಕಾ" ಕನ್ನಡ ಚಿತ್ರರಸಿಕರಿಗೆ ಅಮೆರಿಕಾದ ಹಲವು ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸಿತ್ತು. ಆದರೂ, ಅಮೆರಿಕದಲ್ಲಿ ನೋಡಲೇ ಬೇಕಾದ ಇನ್ನೂ ಹತ್ತಾರು ಲೊಕೇಷನ್‌ಗಳನ್ನು ರಜತ ಪರದೆಯಲ್ಲಿ ಸೆರೆ ಹಿಡಿಯುವ ಬಯಕೆ ನಾಗತಿಹಳ್ಳಿಯವರಲ್ಲಿ ಅಡಗಿತ್ತು. ಇದಕ್ಕಾಗೇ, ಸಂದರ್ಶಕ ಪ್ರಾಧ್ಯಾಪಕರಾಗಿ ಹಲವಾರು ಬಾರಿ ಅಮೆರಿಕಾ ಯಾತ್ರೆ ಕೈಗೊಂಡಿರುವ ನಾಗತಿಹಳ್ಳಿ ಅವರು ಈಗ ತೆರೆಕಾಣಲು ಸಿದ್ಧವಾಗಿರುವ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ 'ನನ್ನ ಪ್ರೀತಿಯ ಹುಡುಗಿ" ಯಲ್ಲಿ ಅಮೆರಿಕಾ - ಕೆನಡಾ ಗಡಿಯ ಮಿಚಿಗನ್‌ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಹರಿವ ಪುಟ್ಟ ಹಾಗೂ ಸುಂದರ ನದಿ, ಕಿವಾ ಸಂಭಾಂಗಣ, ವ್ಯಾಯಾಮ ಶಾಲೆ, ಕ್ರೀಡಾಂಗಣ, ಕಂಪ್ಯೂಟರ್‌ ಲ್ಯಾಬ್‌ ಸೇರಿದಂತೆ ಸುಂದರ ತಾಣಗಳಲ್ಲಿ ಧ್ಯಾನ್‌ ಹಾಗೂ ದೀಪಾಲಿ ಎಂಬ ನವ - ನಟಿಯರ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಈಗ ಕನ್ನಡಕ್ಕೆ ಪರಿಚಯಿಸಲಾಗುತ್ತಿರುವ ನವ ನಟ ಧ್ಯಾನ್‌ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಹೃತಿಕ್‌ ರೋಷನ್‌ ಅಭಿನಯ ತರಬೇತಿ ಪಡೆದ ಶಾಲೆಯಲ್ಲೇ ನಟನಾ ಕೌಶಲ್ಯ ಕಲಿತ ವಿದ್ಯಾರ್ಥಿ. ದೀಪಾಲಿ ಮೂಲತಃ ಬೆಂಗಳೂರಿನ ಬೆಡಗಿ. ಹಾಲಿ ಬರ್ಕ್‌ಲಿ ವಿ.ವಿ.ಯ ವಿದ್ಯಾರ್ಥಿನಿ. ಹೊಸ ವರ್ಷದ ಕೊಡುಗೆಯಾಗಿ ಕನ್ನಡಿಗರ ಮುಂದೆ ಬರಲಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಧ್ಯಾನ್‌, ದೀಪಾಲಿ, ಲೋಕೇಶ್‌, ಭವ್ಯ, ಸುರೇಶ್‌ ಹೆಬ್ಳೀಕರ್‌, ವಿಜಯಲಕ್ಷ್ಮೀ ಸಿಂಗ್‌, ಚಿತ್ರಾ ಶೆಣೈ, ಅನುರಿತಿ, ರಿಚರ್ಡ್‌ ಲೂಯಿಸ್‌ ಅವರಲ್ಲದೆ ಹಲವು ಅನಿವಾಸಿ ಕನ್ನಡಿಗರು - ಭಾರತೀಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಂದಹಾಗೆ ಚಿತ್ರ ಫೆಬ್ರವರಿಯಲ್ಲಿ ತೆರೆಕಾಣುವ ಸಿದ್ಧತೆಯಲ್ಲಿದೆ.

English summary
Nanna Preetiya Hudugi- Latest kannada film from nagatihalli

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada