ದರ್ಶನ್‌ಗೆ 'ನನ್ನ ಸೆಲೆಬ್ರಿಟೀಸ್' ಟ್ಯಾಟು ಹಾಕಿದವರು ಯಾರು? ಈ ಶಾಪ್ ಎಲ್ಲಿದೆ? ಇಲ್ಲಿದೆ ಮಾಹಿತಿ

ಕನ್ನಡದಲ್ಲಿ ಮುಂಚೂಣಿಯಲ್ಲಿರುವ ಸ್ಟಾರ್ ನಟರಲ್ಲಿ ಓರ್ವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ದೊಡ್ಡ ಫ್ಯಾನ್ ಬೇಸ್ ಇರುವ ನಟ ಎಂಬುದು. ಹೌದು, ಬಾಕ್ಸ್ ಆಫೀಸ್ ಸುಲ್ತಾನನಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ತಾನು ಏನೇ ಮಾಡಿದರೂ ಅದಕ್ಕೆ ಬೆಂಬಲ ಸೂಚಿಸುತ್ತಾ ಬೆನ್ನಿಗೆ ನಿಂತ ಅಭಿಮಾನಿಗಳನ್ನು ಕೇವಲ ಫ್ಯಾನ್ ಎಂದು ಕರೆಯದ ದರ್ಶನ್ ಅವರನ್ನು ಸೆಲೆಬ್ರಿಟೀಸ್ ಎಂದು ಕರೆದಿದ್ದರು.

ಅಭಿಮಾನಿಗಳು ದರ್ಶನ್ ಅವರನ್ನು ಡಿ ಬಾಸ್ ಎಂದು ಪ್ರೀತಿಯಿಂದ ಕರೆದರೆ, ದಾಸ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಸೆಲೆಬ್ರಿಟೀಸ್ ಎಂದರು. ನಂತರ ಪ್ರತಿ ಸಂದರ್ಶನದಲ್ಲಿಯೂ ಸಹ ಇದೇ ಹೆಸರಿನಿಂದ ದರ್ಶನ್ ಅಭಿಮಾನಿಗಳನ್ನು ಕರೆಯಲಾರಂಭಿಸಿದರು. ಇದು ದಚ್ಚು ಅಭಿಮಾನಿಗಳಲ್ಲಿ ಸಂತಸ ಹಾಗೂ ಹೆಮ್ಮೆಯನ್ನು ಮೂಡಿಸಿತ್ತು.

ಇನ್ನು ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟೀಸ್ ಎಂದು ಕರೆಯುವುದನ್ನು ಕೇವಲ ಸಂದರ್ಶನಗಳಿಗೆ ಹಾಗೂ ಕಾರ್ಯಕ್ರಮಗಳ ಭಾಷಣಕ್ಕೆ ಮಾತ್ರ ಸೀಮಿತವಾಗಿರಲು ಬಿಡದೇ ಇದೀಗ ತಮ್ಮ ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳುವ ಮೂಲಕ ತಮ್ಮ ಹೃದಯದ ಸಮೀಪದಲ್ಲೇ ಸದಾ ಇರುವಂತೆ ಮಾಡಿದ್ದಾರೆ. ಹೌದು, ನಿನ್ನೆ ( ಫೆಬ್ರವರಿ 10 ) ದರ್ಶನ್ ಸಂಜೆ 'ನನ್ನ ಸೆಲೆಬ್ರಿಟೀಸ್' ಎಂದು ಹಚ್ಚೆ ಹಾಕಿಸಿಕೊಂಡಿರುವ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್ ನೀಡಿದ್ದರು. ವಿಡಿಯೊ ನೋಡಿದ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ದರ್ಶನ್ ಈ ಟ್ಯಾಟುವನ್ನು ಎಲ್ಲಿ ಹಾಕಿಸಿದರು ಹಾಗೂ ಟ್ಯಾಟು ಹಾಕಿದ ಆ ಕಲಾವಿದ ಯಾರು ಎಂಬ ಪ್ರಶ್ನೆಯೂ ಸಹ ಮೂಡಿತ್ತು. ಈ ಪ್ರಶ್ನಗೆ ಉತ್ತರ ಈ ಕೆಳಕಂಡಂತಿದೆ.

ದರ್ಶನ್‌ಗೆ ಟ್ಯಾಟು ಹಾಕಿದವರು ಯಾರು? ಯಾವ ಶಾಪ್?

ದರ್ಶನ್‌ಗೆ ಟ್ಯಾಟು ಹಾಕಿದವರು ಯಾರು? ಯಾವ ಶಾಪ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಟ್ಯಾಟು ಹಾಕಿದ ಕಲಾವಿದನ ಹೆಸರು ಗಿರೀಶ್ ಬಿ ವಿ. ಇವರೇ ಸ್ಥಾಪಿಸಿದ 'ಬ್ರಹ್ಮ ಟ್ಯಾಟು ಸ್ಟುಡಿಯೊ'ದಲ್ಲೇ ದರ್ಶನ್ ಟ್ಯಾಟು ಹಾಕಿಸಿದ್ದಾರೆ. ಈ ಶಾಪ್ ಬೆಂಗಳೂರಿನ ಅಶೋಕ್ ನಗರದ ಚರ್ಚ್ ಸ್ಟ್ರೀಟ್‌ನಲ್ಲಿದೆ. ಗೂಗಲ್‌ನಲ್ಲೂ ಸಹ ಈ ಶಾಪ್ ಲೊಕೇಶನ್ ಲಭ್ಯವಿದ್ದು, ಇಲ್ಲಿ ಟ್ಯಾಟು ಹಾಕಿಸಲು ಇಚ್ಛಿಸುವವರು ಭೇಟಿ ನೀಡಬಹುದಾಗಿದೆ. ಈ ಟ್ಯಾಟು ಶಾಪ್ ವಾರದ ಏಳೂ ದಿನವೂ ಬೆಳಗ್ಗೆ 10.30ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಮೊದಲಿಗೆ ಬೆಂಗಳೂರಿನ ಶಿವಾನಂದ ಸರ್ಕಲ್‌ ಸಮೀಪದ ಹೈಗ್ರೌಂಡ್ಸ್‌ನ ಮನೆಯಲ್ಲಿ 2002ರ ಸೆಪ್ಟೆಂಬರ್‌ನಲ್ಲಿ ಈ ಬ್ರಹ್ಮ ಟ್ಯಾಟು ಸ್ಟುಡಿಯೊವನ್ನು ಆರಂಭಿಸಿದ ಗಿರೀಶ್ ಬಿವಿ ಗ್ರಾಹಕರ ಹೆಚ್ಚಿನ ಬೇಡಿಕೆ ಮೇರೆಗೆ 2004ರಲ್ಲಿ ಬ್ರಿಗೇಡ್ ರಸ್ತೆಗೆ ಸ್ಥಳಾಂತರಿಸಿದರು. ಈ ಮೂಲಕ ಬೆಂಗಳೂರಿನಲ್ಲಿ ಓಪನ್ ಆದ ಮೊದಲ ಪ್ರೊಫೆಷನಲ್ ಟ್ಯಾಟು ಶಾಪ್ ಎಂದೂ ಸಹ ಈ ಬ್ರಹ್ಮ ಸ್ಟುಡಿಯೋ ಖ್ಯಾತಿಯನ್ನು ಪಡೆಯಿತು. ಸದ್ಯ ಚರ್ಚ್ ಸ್ಟ್ರೀಟ್‌ನಲ್ಲಿ ಈ ಶಾಪ್ ಇದ್ದು, ಗಿರೀಶ್ ಬಿವಿ ಅವರು ಇಪ್ಪತ್ತು ವರ್ಷಗಳಿಂದ ಈ ಶಾಪ್ ಅನ್ನು ಮುನ್ನಡೆಸುತ್ತಾ ಬಂದಿದ್ದಾರೆ.

ಕನ್ನಡದಲ್ಲಿ ಇದೇ ಮೊದಲ ಟ್ಯಾಟು

ಕನ್ನಡದಲ್ಲಿ ಇದೇ ಮೊದಲ ಟ್ಯಾಟು

ಇನ್ನು ಗಿರೀಶ್ ಬಿವಿ ಅವರು ವಿಡಿಯೊದಲ್ಲಿ ತಾವು ಹಾಕುತ್ತಿರುವ ಮೊದಲ ಕನ್ನಡದ ಟ್ಯಾಟು ಇದು ಎಂದು ಹೇಳಿದ್ದು, ನಿಮ್ಮ ಕುದುರೆ ಟ್ಯಾಟುವನ್ನು ಹಲವಾರು ಅಭಿಮಾನಿಗಳು ನಮ್ಮದೇ ಶಾಪ್‌ನಲ್ಲಿ ಹಾಕಿಸಿದ್ದಾರೆ ಹಾಗೂ ನೂರಕ್ಕೂ ಹೆಚ್ಚು ಮಂದಿ ಡಿ ಬಾಸ್ ಎಂಬ ಟ್ಯಾಟುವನ್ನು ಹಾಕಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಟ್ಯಾಟು ಟ್ರಿಬ್ಯೂಟ್

ಅಭಿಮಾನಿಗಳಿಗೆ ಟ್ಯಾಟು ಟ್ರಿಬ್ಯೂಟ್

ದರ್ಶನ್ ಟ್ಯಾಟು ಹಾಕಿಸಿಕೊಂಡ ವಿಡಿಯೊವನ್ನು ಡಿ ಕಂಪನಿ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೊದಲ್ಲಿ ತಾವು ಟ್ಯಾಟು ಹಾಕಿಸಿಕೊಳ್ಳುತ್ತಿರುವುದು ತೋರಿಕೆಗೋಸ್ಕರ ಅಲ್ಲ, ತನ್ನನ್ನು ದೊಡ್ಡ ಮಟ್ಟದಲ್ಲಿ ಪ್ರೀತಿಸುವ ಅಭಿಮಾನಿಗಳಿಗೆ ಇದೊಂದು ಟ್ರಿಬ್ಯೂಟ್ ಎಂದರು. ತನಗಾಗಿ ಏನೇನೋ ಮಾಡುವ ಅಭಿಮಾನಿಗಳಿಗೆ ತಾನು ಇಷ್ಟನ್ನಾದರೂ ಮಾಡದಿದ್ದರೆ ಹೇಗೆ ಎಂದೂ ಸಹ ದರ್ಶನ್ ತಿಳಿಸಿದರು.

More from Filmibeat

English summary
Name of tattoo artist who put nanna celebrities tattoo to Darshan and shop name. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X