For Quick Alerts
  ALLOW NOTIFICATIONS  
  For Daily Alerts

  ಸೌತ್ ಎಂಡ್ ರಸ್ತೆಗೆ ಪಾರ್ವತಮ್ಮ ರಾಜ್ ಕುಮಾರ್ ಹೆಸರು

  By Bharath Kumar
  |

  ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ಡಾ.ರಾಜ್ ಕುಟುಂಬ ನೀಡಿರುವ ಕೊಡುಗೆಯನ್ನ ಗೌರವಿಸಿ, ಬೆಂಗಳೂರಿನ ಸೌತ್ ಎಂಡ್ ರಸ್ತೆಗೆ ದಿವಂಗತ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರಿಡಲು ಬಿಬಿಎಂಪಿ ನಿರ್ಧರಿಸಿದೆ.

  ಯಡಿಯೂರು ವಾರ್ಡ್ ನ ಮಾಧವನ್ ರಾವ್ ವೃತ್ತದಿಂದ ನಾಗಸಂದ್ರದವರೆಗಿನ ರಸ್ತೆಗೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರಿಡಲಾಗುತ್ತಿದೆ. ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಅವರ ನಿರ್ಣಯಕ್ಕೆ ಪಾಲಿಕೆ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಬಿಬಿಎಂಪಿಯ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.

  ಮಹಿಳಾ ಸಾಧಕಿಯರಿಗೆ ಡಾ.ಪಾರ್ವತಮ್ಮ ರಾಜ್‌ ಕುಮಾರ್ ಪ್ರಶಸ್ತಿಮಹಿಳಾ ಸಾಧಕಿಯರಿಗೆ ಡಾ.ಪಾರ್ವತಮ್ಮ ರಾಜ್‌ ಕುಮಾರ್ ಪ್ರಶಸ್ತಿ

  ಜುಲೈ 21 ರಂದು ಬೆಳಗ್ಗೆ 10.30ಕ್ಕೆ ಸೌತ್ ಎಂಡ್ ವೃತ್ತದ ಬಳಿ ರಸ್ತೆ ನಾಮಕರಣ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮೇಯರ್ ಜಿ.ಪದ್ಮಾವತಿ, ಎನ್.ಆರ್.ರಮೇಶ್ ಹಾಗೂ ಡಾ.ರಾಜ್ ಕುಮಾರ್ ಅವರ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಿದ್ದಾರೆ.

  English summary
  Naming Ceremony for South End Road To Nagasandra in the Name Of 'Dr Parvathamma Rajkumar'. Will be Held On 21st July at 10.30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X