ವೈರಲ್ ಫೋಟೋ: ಮದುವೆ ನಂತರ ಈ ನಟಿ ಹೇಗೆ ಬದಲಾದ್ರು ನೋಡಿ
ಮಾದಕ ಮೈಮಾಟದಿಂದಲೇ ಸೌತ್ ಸಿನಿ ರಂಗದಲ್ಲಿ ಬಹು ಬೇಡಿಕೆ ಹೊಂದಿದ್ದ ನಟಿ ನಮಿತಾ ಕಳೆದ ನವೆಂಬರ್ ನಲ್ಲಿ ಹಸೆಮಣೆ ಏರಿದ್ದರು. ತಮಿಳು ನಟ ವೀರೇಂದ್ರ ಚೌಧರಿ ಅವರ ಜೊತೆ ನಟಿ ನಮಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆಯ ನಂತರ ಎಲ್ಲೂ ಕಾಣಿಸಿಕೊಳ್ಳದ ನಮಿತಾ, ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಹೌದು, ಮದುವೆಯ ನಂತರ ಮತ್ತಷ್ಟು ಹಾಟ್ ಆಗಿರುವ ನಮಿತಾ ಅವರು ಕೆಲವು ಫೋಟೋಗಳು ವೈರಲ್ ಆಗಿದೆ.
ನಮಿತಾ ಅವರಿಗಾಗಿ ತಮಿಳುನಾಡಿನಲ್ಲಿ ಅಭಿಮಾನಿಗಳು ದೇವಸ್ಥಾನ ಕಟ್ಟಿರುವ ಉದಾಹರಣೆ ಇದೆ. ಮದುವೆ ನಂಗತರವೂ ಬೇಡಿಕೆ ಕಮ್ಮಿಯಾಗಿಲ್ಲ. ಹೀಗಾಗಿ, ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸದ್ಯ, ಮೂರು ತಮಿಳು ಚಿತ್ರದಲ್ಲಿ ನಟಿಸುತ್ತಿರುವ ನಮಿತಾ, 'ಪೊಟ್ಟು', 'ಮಿಯಾ', 'ಇಂದ್ರಯಾ ಕಾದಲ್ ಡಾ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಇನ್ನು ಕನ್ನಡದಲ್ಲಿ ಹೆಚ್ಚು ಸದ್ದು ಮಾಡಿದ್ದ ನಮಿತಾ 'ನೀಲಕಂಠ', 'ಹೂ', 'ನಮಿತಾ ಐ ಲವ್ ಯು' ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಮಿಂಚಿದ್ದರು.
English summary
South actress namitha's new photos goes viral on social media.


Click it and Unblock the Notifications