ತೂಕ ಕಮ್ಮಿ ಆಗಲು ಹೊರಟ ಡುಮ್ಮಿ ನಮಿತಾ

By ಉದಯರವಿ

ನಟಿ ನಮಿತಾ ಸೈಜು ಗೊತ್ತಲ್ಲ, 40-36-40. ದೇಹದ ತೂಕ 70 ಕೆ.ಜಿಗಳನ್ನು ಮೀರಿ ಬಹಳಷ್ಟು ವರ್ಷಗಳಾಗಿವೆ. ಆದರೂ ತಮ್ಮ ಬಲೂನಿನಂತಹ ದುಂಡಗಿನ ದೇಹದ ಮೂಲಕವೇ ಪಡ್ಡೆಗಳನ್ನು ಪಲ್ಟಿ ಹೊಡೆಸುತ್ತಿದ್ದಾರೆ. ಈಗ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ.

ತಮ್ಮ ದೇಹದ ಅತಿಯಾದ ತೂಕದ ಕಾರಣ ಅವಕಾಶಗಳಿಲ್ಲದೆ ನಮಿತಾ ಕಂಗಾಲಾಗಿದ್ದಾರೆ. ಈಗಾಗಲೆ ಸಾಕಷ್ಟು ಬೆವರರಿಸಿದರೂ ದೇಹದ ತೂಕ ಇಳಿದಷ್ಟೇ ಸಲೀಸಾಗಿ ಮತ್ತೆ ಏರುತ್ತಿದೆ. ಈಗ ಮಾಂಸಾಹಾರವನ್ನೂ ತಿನ್ನುವುದನ್ನೂ ಬಿಟ್ಟಿದ್ದಾರೆ ನಮಿತಾ.

ಗ್ರೀನ್ ಟೀ ಜೊತೆಗೆ ಯೋಗ ಪ್ರಾಕ್ಟೀಸ್ ಮಾಡುತ್ತಾ ಆದಷ್ಟು ಬೇಗ ಬಳುಕುವ ಬಳ್ಳಿಯಂತಾದರೆ ಸಾಕಪ್ಪ ಎಂಬಂತಾಗಿದೆ ನಮಿತಾ ಪರಿಸ್ಥಿತಿ. ಸದ್ಯಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ತ್ರಿಭಾಷಾ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು ಪೊಲೀಸ್ ಪಾತ್ರದಲ್ಲಿ ಕಾಣಿಸಲಿದ್ದಾರೆ.

ನಮಿತಾ ಅರ್ಧ ಡಜನ್ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಯಾವ ಪಾತ್ರವೂ ನೆನಪಿನ ಪುಟಗಳಲ್ಲಿ ಉಳಿದಿಲ್ಲ. ಆದರೆ ಅವರ ಹಾಟ್ ಫೋಟೋಗಳು ಮಾತ್ರ ಎಲ್ಲರ ನಿದ್ದೆಗೆಡಿಸಿವೆ. ರವಿ ಮಾಮ ಜೊತೆಗಿನ ನೀಲಕಂಠ, ಹೂ ಚಿತ್ರಗಳೇ ಇದಕ್ಕೆ ಸಾಕ್ಷಿ. ಮೈಚಳಿ ಬಿಟ್ಟು ಅಭಿನಯಿಸುವುದರಲ್ಲಿ ನಮಿತಾಗೆ ಸಾಟಿ ಯಾರುಂಟು?

More from Filmibeat

English summary
Actress Namitha has taken to yoga to get back into shape. "I'm into yoga now; I've started consuming a lot of green tea, and have turned completely vegetarian as well," she says.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X