For Quick Alerts
  ALLOW NOTIFICATIONS  
  For Daily Alerts

  'ಕ್ರೇಜಿಸ್ಟಾರ್' ನಾಯಕಿ ನಮಿತಾಗೆ ಮದುವೆ: ಭಾವಿ ಪತಿ ಇವರೇ ನೋಡಿ.!

  By Bharath Kumar
  |

  ಸಮಂತಾ, ಪ್ರಿಯಾಮಣಿ ನಂತರ ಈಗ ಮತ್ತೋರ್ವ ನಟಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ನಮಿತಾ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

  ಇತ್ತೀಚೀನ ದಿನಗಳಲ್ಲಿ ನಮಿತಾ ಅವರ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿತ್ತು. ನಮಿತಾ ಅವರ ಜೊತೆ ಮದುವೆ ಆಗ್ತಿದ್ದಾರೆ, ಇವರ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದ್ದವು. ಆದ್ರೆ, ಇದಕ್ಕೆಲ್ಲಾ ತೆರೆ ಎಳೆದಿರುವ ನಮಿತಾ ತಮ್ಮ ಭಾವಿ ಪತಿಯನ್ನ ತಾವೇ ಪರಿಚಯ ಮಾಡಿಕೊಟ್ಟಿದ್ದಾರೆ.

  ಹಾಗಿದ್ರೆ, ನಮಿತಾ ಮದುವೆ ಆಗಲಿರುವ ಆ ಹುಡುಗ ಯಾರು? ಇವರಿಬ್ಬರ ಮದುವೆ ಯಾವಾಗ ಮತ್ತು ಎಲ್ಲಿ ಎಂದು ತಿಳಿಯಲು ಮುಂದೆ ಓದಿ......

  ತಮಿಳು ನಟನ ಜೊತೆ ಮದುವೆ

  ತಮಿಳು ನಟನ ಜೊತೆ ಮದುವೆ

  ತಮಿಳು ನಟ ವೀರೇಂದ್ರ ಚೌಧರಿ ಅವರ ಜೊತೆ ನಟಿ ನಮಿತಾ ಮದುವೆ ಆಗುತ್ತಿದ್ದಾರೆ. ಈ ಸುದ್ದಿಯನ್ನ ಸ್ವತಃ ನಮಿತಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

  ಇದೇ ತಿಂಗಳು ಮದುವೆ

  ಇದೇ ತಿಂಗಳು ಮದುವೆ

  'ನವೆಂಬರ್ 24 ರಂದು ವೀರ್ ಮತ್ತು ನಾನು ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ. ನ.24 ರಂದು ನಾನು ಮದುಮಗಳಾಗುತ್ತಿದ್ದೇನೆ. ಎಲ್ಲರಿಗೂ ಥ್ಯಾಂಕ್ಸ್'' ಎಂದು ತಿಳಿಸಿದ್ದಾರೆ. ನಮಿತಾ ಮತ್ತು ವೀರೇಂದ್ರ ಚೌಧರಿ ಜೋಡಿಯ ಮದುವೆ ಇದೇ ತಿಂಗಳು 24 ರಂದು ತಿರುಪತಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.

  ಲವ್ ಕಮ್ ಅರೇಂಜ್ ಮ್ಯಾರೇಜ್

  ಲವ್ ಕಮ್ ಅರೇಂಜ್ ಮ್ಯಾರೇಜ್

  ಕಳೆದ ಕೆಲ ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಕುಟುಂಬದವರು ಇವರ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ, ತಮ್ಮ ಬಹುಕಾಲ ಪ್ರೀತಿ ಈಗ ದಾಂಪತ್ಯಕ್ಕೆ ಸಾಕ್ಷಿಯಾಗುತ್ತಿದೆ.

  ಕನ್ನಡದಲ್ಲಿ ನಮಿತಾ

  ಕನ್ನಡದಲ್ಲಿ ನಮಿತಾ

  2002ರಲ್ಲಿ ತೆಲುಗಿನ 'ಸ್ವಂತಂ' ಚಿತ್ರದ ಮೂಲಕ ಸಿನಿಲೋಕಕ್ಕೆ ಕಾಲಿಟ್ಟ ನಮಿತಾ ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ 'ನೀಲಕಂಠ', 'ಇಂದ್ರ', 'ಹೂ', 'ನಮಿತಾ ಐ ಲವ್ ಯೂ', 'ಬೆಂಕಿ ಬಿರುಗಾಳಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  On Friday, South actress Namitha announced that she will be getting married to Veerandra Chowdhary on November 24. ದಕ್ಷಿಣ ಭಾರತದ ಖ್ಯಾತ ನಟಿ ನಮಿತಾ ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X