For Quick Alerts
  ALLOW NOTIFICATIONS  
  For Daily Alerts

  'ಪರಿಮಳಾ ಲಾಡ್ಜ್' ಸಿನಿಮಾ ವಿರುದ್ಧ ಫಿಲ್ಮ್ ಚೆಂಬರ್ ನಲ್ಲಿ ದೂರು

  |

  Recommended Video

  ದೊಡ್ಡ ವಿವಾದ ಎಬ್ಬಿಸಿದ ಪರಿಮಳಾ ಲಾಡ್ಜ್..? | Parimala Lodge | Oneindia Kannada

  ವಿಜಯ್ ಪ್ರಸಾದ್ ನಿರ್ದೇಶನದ 'ಪರಿಮಳಾ ಲಾಡ್ಜ್' ಸಿನಿಮಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. 'ನಮ್ಮ ಕರ್ನಾಟಕ ರಕ್ಷಣಾ ವೇದಿಕೆ' ಸಿನಿಮಾದ ವಿರುದ್ಧ ಫಿಲ್ಮ್ ಚೆಂಬರ್ ಮೆಟ್ಟಿಲೇರಿದೆ.

  'ಪರಿಮಳಾ ಲಾಡ್ಜ್' ಟೀಸರ್ ಬಿಡುಗಡೆ ಆಗಿದ್ದೆ ತಡ ದೊಡ್ಡ ವಿವಾದ ಸೃಷ್ಟಿ ಮಾಡಿದೆ. ಇತ್ತೀಚಿಗಷ್ಟೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಚಿತ್ರದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದರು. ಈಗ ಈ ವಿಷಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದೆ.

  'ಪರಿಮಳ ಲಾಡ್ಜ್' ಕಡೆಯಿಂದ ಡಿ ಬಾಸ್ ಗೆ ಅಪ್ಪನ ಫೊಟೋ ಗಿಫ್ಟ್'ಪರಿಮಳ ಲಾಡ್ಜ್' ಕಡೆಯಿಂದ ಡಿ ಬಾಸ್ ಗೆ ಅಪ್ಪನ ಫೊಟೋ ಗಿಫ್ಟ್

  ಸಿನಿಮಾದ ಟೀಸರ್ ನಲ್ಲಿ ಬಳಸಿರುವ ಅಶ್ಲೀಲ ಸಂಭಾಷಣೆಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯ ಮಾಡಿರುವ 'ನಮ್ಮ ಕರ್ನಾಟಕ ರಕ್ಷಣಾ ವೇದಿಕೆ', ಇಲ್ಲದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ಜೊತೆಗೆ ಸಿನಿಮಾದ ಬಿಡುಗಡೆ ವೇಳೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

  ಚಿತ್ರದ ನಾಯಕ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿದೆ. ಅಂದಹಾಗೆ, ಚಿತ್ರದಲ್ಲಿ ದತ್ತಣ್ಣ, ಸತೀಶ್ ನೀನಾಸಂ, ಲೂಸ್ ಮಾದ ಯೋಗಿ, ಸುಮನ್ ರಂಗನಾಥ್, ಬುಲೆಟ್ ಪ್ರಕಾಶ್, ಹೇಮಾ ದತ್‌ ನಟಿಸಿದ್ದಾರೆ.

  Namma Karnataka Rakshana Vedike filed a complaint against parimala lodge movie

  'ಪರಿಮಳಾ ಲಾಡ್ಜ್' ಚಿತ್ರದ ಟೀಸರ್ ಆಗಸ್ಟ್ 28 ರಂದು ಬಿಡುಗಡೆಯಾಗಿದ್ದು, ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಗೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.

  English summary
  Namma Karnataka Rakshana Vedike filed a complaint against Parimala Lodge movie in Karnataka Film Chamber.
  Thursday, September 5, 2019, 19:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X