Just In
Don't Miss!
- News
50 ಸಾವಿರ ಪಾಯಿಂಟ್ ದಾಟಿಕ್ದ ಸೂಚ್ಯಂಕ, ಹೂಡಿಕೆದಾರರು ಸಂತಸ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಯುನೆಸ್ಕೋ' ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ 'ನಮ್ಮ ಮಗು'
ಕನ್ನಡದ ನಮ್ಮ ಮಗು ಸಿನಿಮಾ ಯುನೆಸ್ಕೋ ಅಂಗ ಸಂಸ್ಥೆಯಾದ ಇಂಟರ್ ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್ (ಐಒಎಂ) ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಇದಾಗಿದೆ.
ಮಕ್ಕಳ ಅಪಹರಣ, ಮಕ್ಕಳ ಮೇಲಿನ ದೌರ್ಜನ್ಯದಂತಹ ಗಂಭೀರ ಸಮಸ್ಯೆಗಳನ್ನು ಇಟ್ಟುಕೊಂಡು ನಿರ್ದೇಶಕ ಕೆ. ಗಣೇಶನ್ ಈ ಸಿನಿಮಾ ಮಾಡಿದ್ದಾರೆ. ಗಣೇಶನ್ ಈಗಾಗಲೇ ತಮಿಳು, ಹಿಂದಿ, ಕನ್ನಡ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ಕೆ.ಗಣೇಶನ್ ನಮ್ಮ ಮಗು ಸಿನಿಮಾ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಹೊಸಬರ ಕನ್ನಡ ಸಿನಿಮಾಕ್ಕೆ ಇಂಗ್ಲೆಂಡ್ ನಲ್ಲಿ ಪ್ರಶಸ್ತಿಯ ಗರಿ
ಈಗಾಗಲೇ ನಮ್ಮ ಮಗು ಸಿನಿಮಾ ವಿವಿಧ ದೇಶಗಳ 13 ಚಿತ್ರೋತ್ಸವಗಳಲ್ಲಿ ಪ್ರದರ್ಶನಕಂಡು ಮೆಚ್ಚುಗೆ ಪಡೆದಿದೆ. ಐಒಎಂ ಸಂಸ್ಥೆಯು ದೆಹಲಿಯ ಇಂಡಿಯಾ ಅಂಡ್ ಅಮೆರಿಕನ್ ಸೆಂಟರ್ ನ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಮಗು ಸಿನಿಮಾ ಪ್ರದರ್ಶನ ಕಂಡಿದೆ.
ನ್ಯಾಷನಲ್ ಸ್ಲೇವರಿ ಅಂಡ್ ಹ್ಯೂಮನ್ ಟ್ರಾಫಿಕಿಂಗ್ ಪ್ರಿವೆನ್ಷನ್ ತಿಂಗಳು ಕಾರ್ಯಕ್ರಮವನ್ನು ಇದೇ ಜನವರಿ ತಿಂಗಳಲ್ಲಿ ನಡೆಸುತ್ತಿದ್ದು, ಭಾರತದಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮ ಭಾಗವಾಗಿ ನಮ್ಮ ಮಗು ಸಿನಿಮಾವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಈ ಬಗ್ಗ ಮಾತನಾಡಿದ ನಿರ್ದೇಶಕ ಗಣೇಶನ್, 'ತುಂಬಾ ಖುಷಿ ಕೊಟ್ಟಿದೆ. ಜನವರಿ 21ರಂದು ದೆಹಲಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ನಾನು ಕೂಡ ಆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಒಂದು ಬೇಸರದ ಸಂಗತಿ ಎಂದರೆ, ಬೇರೆ ಬೇರೆ ದೇಶಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನಗೊಂಡಿದೆ. ಆದರೆ ನಮ್ಮ ನೆಲದಲ್ಲೇ ಇನ್ನೂ ಪ್ರದರ್ಶನ ಮಾಡಲು ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ.
ಇತ್ತೀಚಿಗೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಬಾಲ ನಟಿ ಬೇಬಿಶ್ರೀ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಷ್ಟಪಟ್ಟು ಸಿನಿಮಾಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ಬರದೆ ಇರುವುದು ಬೇಸರ ತಂದಿದೆ. ನಿರ್ದೇಶಕರು ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾ ತುಂಬಾ ನೈಜವಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ.