ಸಿನಿಮಾ ಮಂದಿಗೆ ಗುಡ್ ನ್ಯೂಸ್: ಇನ್ಮುಂದೆ ಸಿನಿಮಾ, ಸೀರಿಯಲ್‌ನಲ್ಲಿ 'ನಮ್ಮ ಮೆಟ್ರೋ' ಕೂಡ ಕಾಣಿಸಲಿದೆ!

ಹಾಲಿವುಡ್, ಬಾಲಿವುಡ್, ತಮಿಳು ಸಿನಿಮಾಗಳಲ್ಲಿ ಮೆಟ್ರೋಗಳನ್ನು ನಾವು ನೋಡಿದ್ದೇವೆ. ಈ ಸಿನಿಮಾಗಳಲ್ಲಿ ಮೆಟ್ರೋ ಒಳಗೂ ಚಿತ್ರೀಕರಣ ನಡೆಯುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ನಟ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಮೆಟ್ರೋ ಸೀನ್ ಸಕತ್ ವೈರಲ್ ಆಗಿತ್ತು. ನಮ್ಮವರು ಕೂಡ ಇಂತಹ ಸೀನ್‌ಗಳು ನಮ್ಮಲ್ಲೂ ಬರಲಿ ಎಂದುಕೊಂಡಿದ್ದರು.

ಇಂತಹ ಕೋಟ್ಯಾಂತರ ಜನರ ಆಸೆ ನನಸಾಗುವ ಸಮಯ ಹತ್ತಿರ ಬಂದಿದೆ. ಇನ್ಮುಂದೆ ಕನ್ನಡದ ಸಿನಿಮಾ, ಧಾರಾವಾಹಿಗಳಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಕಾಣಿಸಿಕೊಳ್ಳಲಿದೆ. ಚೆನ್ನೈ, ದೆಹಲಿ ಮೆಟ್ರೋ ಬಳಿಕ ನಮ್ಮ ಮೆಟ್ರೋದಲ್ಲೂ ಸಿನಿಮಾ, ಸೀರಿಯಲ್ ಶೂಟಿಂಗ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

Namma Metro: BMRCL Give Green Signal for Film and TV Series Shoots within Metro Premises

ನಮ್ಮ ಸಿನಿಮಾಗಳಲ್ಲೂ ನಮ್ಮ ಮೆಟ್ರೋ ಸೀನ್‌ಗಳು

ಚೆನ್ನೈ ಮತ್ತು ದೆಹಲಿಯ ಮೆಟ್ರೋಗಳಂತೆಯೇ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೆಟ್ರೋ ಆವರಣದಲ್ಲಿ ಸಿನಿಮಾ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದೆ. ಇದರಿಂದ ಕನ್ನಡ ಚಲನಚಿತ್ರಗಳಲ್ಲಿ ನಮ್ಮ ಮೆಟ್ರೋವನ್ನು ತೋರಿಸಲು ಸಾಧ್ಯವಾಗಲಿದೆ.

ಈ ಹಿಂದೆಯಿಂದಲೀ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು ಎಂದು ಚಿತ್ರರಂಗದಿಂದ ಬಹಳ ಒತ್ತಾಯ ಬರುತ್ತಿತ್ತು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಸದ್ಯಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕೆಲವು ಮಾರ್ಗಸೂಚಿಗಳನ್ನು ನೋಡಿ ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

ಸಿನಿಮಾ, ಸೀರಿಯಲ್ ಚಿತ್ರೀಕರಣಕ್ಕೆ ಮಾರ್ಗಸೂಚಿ ಹೀಗಿದೆ

* ಮೆಟ್ರೋದಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್‌ಗೆ ಮುನ್ನ ಅರ್ಜಿ ಸಲ್ಲಿಸಬೇಕು

* ಸಿನಿಮಾ, ಧಾರಾವಾಹಿಯ ಸ್ಕ್ರಿಪ್ಟ್ ಸಲ್ಲಿಕೆ ಕಡ್ಡಾಯ

* ಮೆಟ್ರೋ ಪೀಕ್ ಅವರ್ ಟೈಮ್‌ನಲ್ಲಿ ಚಿತ್ರೀಕರಣ ಮಾಡುವ ಹಾಗಿಲ್ಲ

Namma Metro: BMRCL Give Green Signal for Film and TV Series Shoots within Metro Premises

* ಚಿತ್ರದ ಚಿತ್ರೀಕರಣದ ವೇಳೆ ಮೆಟ್ರೋ ಬಾಗಿಲು ತೆಗೆಯುವ ಹಾಗಿಲ್ಲ

* ಸಿನಿಮಾ ಚಿತ್ರೀಕರಣದ ವೇಳೆ ಬಿಎಂಆರ್‌ಸಿಎಲ್ ಸಿಬ್ಬಂದಿ ಹಾಜರು

* ಅನುಮತಿ ನೀಡಿರೋ ಸ್ಥಳದಲ್ಲಿ ಮಾತ್ರ ಚಿತ್ರದ ಶೂಟಿಂಗ್‌ ಮಾಡಬೇಕು

* ಶೂಟಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವಂತಿಲ್ಲ

* ಶೂಟಿಂಗ್ ಟೀಂನಲ್ಲಿರೋ ಮಹಿಳೆಯರ ಜವಾಬ್ದಾರಿ ಚಿತ್ರತಂಡದ್ದು

*ಚಿತ್ರೀಕರಣ ವೇಳೆ ಏನೇ ಅನಾಹುತ ಆದ್ರೂ ಚಿತ್ರತಂಡವೇ ಹೊಣೆ

* ಮೆಟ್ರೋಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು

* ನಮ್ಮ ಮೆಟ್ರೋಗೆ ಹಾನಿಯಾದ್ರೆ ಚಿತ್ರತಂಡ ಹಣ ಭರಿಸಬೇಕು

* ಸೂಕ್ತ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಮತ್ತು ಗೃಹ ರಕ್ಷಕರನ್ನು ನಿಯೋಜಿಸುವಂತೆಯೂ ಪಾಲಿಕೆಗೂ ಕರೆ ನೀಡಿದೆ.

ನಮ್ಮ ಮೆಟ್ರೋ ಚಿತ್ರೀಕರಣಕ್ಕೆ ಬಾಡಿಗೆ ಎಷ್ಟು

ಇದಲ್ಲದೆ, ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ದಿನಕ್ಕೆ 6 ಲಕ್ಷ ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಈ 6 ಲಕ್ಷ ಶುಲ್ಕದಲ್ಲಿ ಕನ್ನಡ ಸಿನಿಮಾಗಳಿಗೆ ಬಿಎಂಆರ್‌ಸಿಎಲ್‌ ಶೇ.25ರಷ್ಟು ರಿಯಾಯಿತಿ ನೀಡಿದೆ. ಪ್ರಕ್ರಿಯೆಯನ್ನು ಸುಗಮಗೊಳಿಸಲು, ಕನ್ನಡ ಚಲನಚಿತ್ರಗಳು ಒಂದು ತಿಂಗಳೊಳಗೆ ತಮ್ಮ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕು. ಆದರೆ ಇತರ ಭಾಷೆಯ ಚಲನಚಿತ್ರಗಳು ಐವತ್ತು ದಿನಗಳಲ್ಲಿ ಅನುಮತಿ ಪಡೆಯಬೇಕು.

ಇನ್ನು ಮೆಟ್ರೋ ಆವರಣ, ಮೆಟ್ರೋ ರೈಲುಗಳಲ್ಲಿನ ಶೂಟಿಂಗ್‌ನಿಂದ ಬಂದ ಹಣವನ್ನ ನಾನ್‌ಫೇರ್‌ ಇನ್‌ಕಮ್‌ ಅಂತಾ ಪರಿಗಣಿಸಿ ಮೆಟ್ರೋ ದರ ಏರಿಕೆಯಾದ್ರೆ ಅಂತಹ ಸಮಯದಲ್ಲಿ ಪ್ರಯಾಣಿಕರಿಗೆ ಸಬ್ಸಿಡಿ ರೂಪದಲ್ಲಿ ನೀಡೋಕು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಹೀಗಾಗಿ ಇನ್ಮುಂದೆ ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಮ್ಮ ಮೆಟ್ರೋ ಹೇಗೆ ಕಾಣಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Bengaluru Metro Corporation Grants Permission for Cinema Shooting In Metro:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X