For Quick Alerts
  ALLOW NOTIFICATIONS  
  For Daily Alerts

  ಎಸ್ ನಾರಾಯಣ್ ವಿರಚಿತ ನಮ್ಮ ಮುತ್ತು ರಿಲೀಸ್

  By Rajendra
  |
  ಕಲಾ ಸಾಮ್ರಾಟ್ ಖ್ಯಾತಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ನಾರಾಯಣ್ ಬರೆದಿರುವ ವರನಟ ಡಾ.ರಾಜ್ ಕುಮಾರ್ ಬಗೆಗಿನ 'ನಮ್ಮ ಮುತ್ತು' ಪುಸ್ತಕ ಶುಕ್ರವಾರ (ಮಾ.15) ಲೋಕಾರ್ಪಣೆ ಮಾಡಲಾಯಿತು.

  ಬೆಂಗಳೂರು ಕುರುಬರಹಳ್ಳಿಯಲ್ಲಿ ನಿರ್ಮಿಸಿರುವ ಡಾ.ರಾಜ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈ ಕೃತಿ ಬಿಡುಗಡೆ ಮಾಡಲಾಯಿತು. ಕನ್ನಡ ಚಲನಚಿತ್ರಗಳ ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೃತಿಯನ್ನು ಬಿಡುಗಡೆ ಮಾಡಿದರು.

  ಈ ಪುಸ್ತಕ ರಾಜ್ ಅವರ ಅಪರೂಪದ ಅನುಭವಗಳ ಸಾರಸಂಗ್ರಹ. ನಾರಾಯಣ್ ಅವರು ಬಹಳ ಶ್ರಮಪಟ್ಟು ರಾಜ್ ಜೊತೆಗಿನ ಅನುಭವಗಳ ಸಾರಸಂಗ್ರಹವನ್ನು ದಾಖಲಿಸಿದ್ದಾರೆ. ತೆರೆಯ ಮೇಲೆ ನೋಡಿರುವ ರಾಜ್ ಅವರನ್ನು ಮತ್ತೊಂದು ಲೋಕಕ್ಕೆ ಈ ಪುಸ್ತಕ ಕರೆದೊಯ್ಯುತ್ತದೆ.

  ಚಾಲುಕ್ಯ ಡಾ.ರಾಜ್ ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ಟ್ರಸ್ಟ್, ಸಾಹಿತಿ ಕೋ.ಚನ್ನಬಸಪ್ಪ, ಬರಗೂರು ರಾಮಚಂದ್ರಪ್ಪ, ಬೆಂಗಳೂರು ಮೇಯರ್ ಡಿ.ವೆಂಕಟೇಶ್, ಮಾಜಿ ಸಚಿವ ರಾಮಲಿಂಗರೆಡ್ಡಿ, ಟ್ರಸ್ಟ್ ಗೌರವಾಧ್ಯಕ್ಷ ಎಂ ನಾಗರಾಜ್ ಉಪಸ್ಥಿತರಿದ್ದರು.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ಮಾಪಕ ಎಸ್ ಎ ಚಿನ್ನೇಗೌಡ, ಫಿಲಂ ಚೇಂಬರ್ ಅಧ್ಯಕ್ಷ ವಿಜಯಕುಮಾರ್ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. (ಒನ್ಇಂಡಿಯಾ ಕನ್ನಡ)

  English summary
  A book on Rajkumar titled Namma Muttu was released on Friday (15th March) at Kurubarahalli, Bangalore. Written by the actor, director and producer S Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X