For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷದ ಹುಟ್ಟುಹಬ್ಬಕ್ಕೆ ಬರಲಿದೆ ಒಂದು ವಿಶೇಷ ಪುಸ್ತಕ

  By Naveen
  |

  ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷದ ಹುಟ್ಟುಹಬ್ಬಕ್ಕೆ ಈಗಾಗಲೇ ಅಭಿಮಾನಿಗಳ ತಯಾರಿ ಶುರುವಾಗಿದೆ. 'ಉತ್ತಮ ಪ್ರಜಾ ಪಾರ್ಟಿ' ಪಕ್ಷವನ್ನು ಸ್ಥಾಪನೆ ಮಾಡಿರುವ ಉಪ್ಪಿ ಈ ವರ್ಷದ ತಮ್ಮ ಹುಟ್ಟುಹಬ್ಬವನ್ನು ಅದಷ್ಟೂ ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

  ಸುದೀಪ್ ಆಯ್ತು, ಈಗ ಉಪೇಂದ್ರ ಕಡೆಯಿಂದ 'ಹೊಸ ಕ್ರಾಂತಿ'.!

  ಇದರ ಜೊತೆಗೆ ಉಪೇಂದ್ರ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಪುಸ್ತಕ ಕೂಡ ಬರಲಿದೆ. 'ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ' ಎಂಬ ಪುಸ್ತಕ ಈ ವರ್ಷದ ಉಪ್ಪಿ ಬರ್ತ್ ಡೇ ವಿಶೇಷವಾಗಿ ತಯಾರಾಗಿದೆ.

  ವಿಶೇಷ ಅಂದರೆ ಈ ಪುಸ್ತಕವನ್ನು ಉಪೇಂದ್ರ ಅವರ ಆಪ್ತರೇ ಬರೆದಿದ್ದಾರೆ. ಉಪೇಂದ್ರ ತಂದೆ, ತಾಯಿ, ಅಣ್ಣನಿಂದ ಹಿಡಿದು ಅವರ ಆಪ್ತ ವಲಯ ಅವರು ಕಂಡಂತೆ ಉಪೇಂದ್ರ ಹೇಗಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಉಪೇಂದ್ರ ಅವರ ಬಾಲ್ಯ ಮತ್ತು ಅವರ ವೈಯಕ್ತಿಕ ಜೀವನದ ಅನೇಕ ಪ್ರಮುಖ ವಿಷಯಗಳು ಈ ಪುಸ್ತಕದಲ್ಲಿ ಇದೆ ಅಂತೆ.

  ಅಂದಹಾಗೆ, ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಸಿದ್ದವಾಗಿರುವ ಈ ಪುಸ್ತಕ ಒಂದು ವಾರದ ನಂತರ ಮಾರುಕಟ್ಟೆಗೆ ಬರಲಿದೆ.

  English summary
  'Namma Uppi', a book about Real Star upendra will be available soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X