ಕೋಮಲ್ ಕುಮಾರ್ ಗೆ 'ನಮೋ' ಎಂದ ಪ್ರೇಕ್ಷಕ

By Rajendra

ಹಾಸ್ಯನಟ ಕೋಮಲ್ ಕುಮಾರ್ ಅವರನ್ನು ಪ್ರೇಕ್ಷಕ ಪ್ರಭುಗಳು ಈ ವರ್ಷ ಸರಾಸಗಟಾಗಿ ತಿರಸ್ಕರಿಸಲು ಹೋಗಿಲ್ಲ. ಈ ವರ್ಷ ಅವರಿಗೆ ಮಿಶ್ರ ಪ್ರತಿಫಲ. 'ಕರೋಡ್ ಪತಿ' ಹಾಗೂ 'ಪುಂಗಿದಾಸ' ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಆದರೆ 'ನಮೋ ಭೂತಾತ್ಮ' ಚಿತ್ರ ಮಾತ್ರ ನಿರೀಕ್ಷೆ ಮೀರಿ ಒಳ್ಳೆಯ ಫಸಲು ತಂದುಕೊಟ್ಟಿದೆ.

ಈ ಮೂಲಕ ಸಂಕ್ರಾಂತಿಯ ಸುಗ್ಗಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಅವರ ಅಭಿಯದ 'ನಮೋ ಭೂತಾತ್ಮ' ಚಿತ್ರ ಅರ್ಧ ಶತಕ ಪೂರೈಸಿದ್ದು ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾರರ್ ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ. [ನಮೋ ಭೂತಾತ್ಮ ಚಿತ್ರ ವಿಮರ್ಶೆ]

Namo Bhoothatma completes 50 days

ನೃತ್ಯ ನಿರ್ದೇಶಕರಾಗಿದ್ದ ಮುರಳಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದು. ಈ ಗೆಲುವು ಅವರಿಗೂ ಹೊಸ ಉತ್ಸಾಹವನ್ನು ತಂದಿದೆ. ಈಗ ಸ್ಯಾಂಡಲ್ ವುಡ್ ನ ಹೃದಯಭಾಗ ಗಾಂಧಿನಗರದ ತ್ರಿಭುವನ್ ಚಿತ್ರಮಂದಿರದಲ್ಲಿ ಅರ್ಧ ಶತಕ ಪೂರೈಸಿದ್ದು ಅಲ್ಲಿಂದ ಈಗ ಸಪ್ನ ಚಿತ್ರಮಂದಿರಕ್ಕೆ ವರ್ಗಾವಣೆಯಾಗಿದೆ.

ಹಾಗಂತ 'ನಮೋ ಭೂತಾತ್ಮ' ಚಿತ್ರವೇನು ಸ್ವಮೇಕ್ ಅಲ್ಲ. ತಮಿಳಿನ 'ಯಾಮಿರುಕ್ಕ ಭಯಮೇ' ಚಿತ್ರದ ನೆರಳಚ್ಚು. ಟೆಲಿಮಾರ್ಕೆಟರ್ ಒಬ್ಬನ ರೋಚಕ ಕಥೆಯೇ ನಮೋ ಭೂತಾತ್ಮ. ಒಂದೇ ವಾರದಲ್ಲಿ ಚಿತ್ರ ಬಾಕ್ಸ್ ಆಫೀಸಲ್ಲಿ ಸಖತ್ ಸದ್ದು ಮಾಡಿತ್ತು. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Comedy actor Komal Kumar's horror movie Namo Bhoothatma completes 50 days. It's a remake of Tamil film ‘Yamirukkam Bhayame’ reached 50 days in Tribhuvan theatre in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X