»   » ಕನ್ನಡದ ಈ ಚಿತ್ರದ ಟ್ರೇಲರ್ ಗೆ ದರ್ಶನ್, ಪುನೀತ್ ಶುಭ ಹಾರೈಕೆ

ಕನ್ನಡದ ಈ ಚಿತ್ರದ ಟ್ರೇಲರ್ ಗೆ ದರ್ಶನ್, ಪುನೀತ್ ಶುಭ ಹಾರೈಕೆ

Posted By:
Subscribe to Filmibeat Kannada

ಕನ್ನಡದ ಸ್ಟಾರ್ ನಟರು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಸದ್ಯ ಹೊಸ ಸಿನಿಮಾ ತಂಡವೊಂದು ಮಾಡಿರುವ ಪ್ರಯತ್ನವನ್ನು ನಟ ಪುನೀತ್, ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರು ಮೆಚ್ಚಿಕೊಂಡಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಸಂಚಾರಿ ವಿಜಯ್ ಹೊಸ ಸಿನಿಮಾ ಮಾಡಿದ್ದಾರೆ. 'ನನ್ ಮಗಳೇ ಹಿರೋಯಿನ್' ಎಂಬ ಈ ಚಿತ್ರದ ಟ್ರೇಲರ್ ವೊಂದು ಇದೀಗ ಬಿಡುಗಡೆಯಾಗಿದೆ. ಚಿತ್ರದ ಈ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಬೆನ್ನು ತಟ್ಟಿದ್ದಾರೆ.

'Nan Magale Heroine' movie trailer released

ಅಂದಹಾಗೆ, 'ನನ್ ಮಗಳೇ ಹಿರೋಯಿನ್' ಸಿನಿಮಾ ಒಂದು ಕಾಮಿಡಿ ಚಿತ್ರವಾಗಿದೆ. ನಿರ್ದೇಶಕ ಬಾಹುಬಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಿ.ಸಿ.ಪಾಟೀಲ್, ಬುಲೇಟ್ ಪ್ರಕಾಶ್, ತಬಲಾ ನಾಣಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ಗೆ ಜೋಡಿಯಾಗಿ ಅಮೃತ ರಾವ್ ಮತ್ತು ದೀಪಿಕಾ ನಟಿಸಿದ್ದಾರೆ.

English summary
Watch Video : Sanchari Vijay's 'Nan Magale Heroine' movie trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada