ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ ಈಗ ಸಿಕ್ಕಿತು ಕಟ್ ಔಟ್ ಭಾಗ್ಯ.!
ನಟ ಸಂಚಾರಿ ವಿಜಯ್ ತಮ್ಮ 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಕ್ಕೆ ದೊಡ್ಡ ಹೆಸರು ತಂದುಕೊಟ್ಟಿದ್ದರು. ಆದರೆ ಈಗ ಆ ನಟನಿಗೆ ಮತ್ತೊಂದು ಖುಷಿಯ ಸಮಯ ಎದುರಾಗಿದೆ.
ಸಂಚಾರಿ ವಿಜಯ್ ಅವರ 'ನನ್ ಮಗಳೇ ಹೀರೋಯಿನ್' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಗಾಂಧಿನಗರದ ಸಂತೋಷ್ ಚಿತ್ರಮಂದಿರದ ಮುಂದೆ ಸಂಚಾರಿ ವಿಜಯ್ 54 ಅಡಿಯ ಕಟ್ ಔಟ್ ಹಾಕಲಾಗಿದೆ.

ಪ್ರತಿಯೊಬ್ಬ ನಟನಿಗೂ ತನ್ನ ಒಂದು ಕಟ್ ಔಟ್ ಚಿತ್ರಮಂದಿರದ ಮುಂದೆ ಇರಬೇಕು ಎನ್ನುವ ಕನಸು ಇದ್ದೇ ಇರುತ್ತದೆ. ಆ ಕನಸು ಈಗ ಸಂಚಾರಿ ವಿಜಯ್ ಅವರಿಗೆ ಪೂರೈಸಿದೆ. ಇನ್ನು ತಮ್ಮ ಈ ಸಂತಸವನ್ನು ಫೇಸ್ ಬುಕ್ ಖಾತೆಯಲ್ಲಿ ಸಂಚಾರಿ ವಿಜಯ್ ಹಂಚಿಕೊಂಡಿದ್ದಾರೆ.
More from Filmibeat
English summary
'Nan Magale Heroine' movie will be releasing November 17th.


Click it and Unblock the Notifications











