ಮನೋರಂಜನ್ ರವಿಚಂದ್ರನ್ ಗೆ ವಿಲನ್ ಆದ ನಾನಾ ಪಾಟೇಕರ್
ಹಿಂದಿ ಚಿತ್ರರಂಗದ ಜನಪ್ರಿಯ ನಟ ನಾನಾ ಪಾಟೇಕರ್ ಈಗ ಮತ್ತೆ ಕನ್ನಡ ಸಿನಿಮಾ ಮಾಡಲಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ ಅವರ 'ಯಕ್ಷ' ಸಿನಿಮಾದಲ್ಲಿ ನಟಿಸಿದ್ದ ಇವರು ಈಗ 18 ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.
ವಿಶೇಷ ಅಂದರೆ ಅವರು ಈಗ ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಜೊತೆಗೆ ನಟಿಸುತ್ತಿದ್ದಾರೆ. ಮನೋರಂಜನ್ ಅವರ ಮೂರನೇ ಸಿನಿಮಾ 'ಚಿಲ್ಲಂ' ಅದರ ತಾರ ಬಳಗದ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದು ಈಗ ನಾನಾ ಪಾಟೇಕರ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.
ಈ ಹಿಂದೆ 'ಕ್ಲಾಟೆ' ಎಂಬ ಸಿನಿಮಾ ಮಾಡಿದ್ದ ಚಂದ್ರಕಲಾ ಈಗ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಈ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ನಾನಾ ಪಾಟೇಕರ್ ರೀತಿ ರಾಘವೇಂದ್ರ ರಾಜ್ ಕುಮಾರ್ ಸಹ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಬಹುಭಾಷಾ ನಟಿ ಸರಿತಾ ಕೂಡ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ಈ ಎಲ್ಲ ಕಾರಣಗಳಿಗೆ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.

ಉಳಿದಂತೆ, 'ಚಿಲ್ಲಂ' ಚಿತ್ರದಲ್ಲಿ ಬಿಗ್ ಬಾಸ್ ಸೀಸನ್ ಐದರ ಸ್ಪರ್ಧಿ ಆಗಿದ್ದ, ದಿವಾಕರ್ ಕೂಡ ನಟಿಸುತ್ತಿದ್ದಾರೆ. ಪ್ರಿಯಾಂಕ ತಿಮ್ಮೇಶ್ ನಾಯಕಿ ಆಗಿದ್ದಾರೆ.


Click it and Unblock the Notifications











