ಶಿವರಾಜ್ ಕುಮಾರ್‌ಗೆ ನಂದಕಿಶೋರ್ ನಿರ್ದೇಶನ; ಎರಡು ಭಾಷೆಯಲ್ಲಿ ತಯಾರಾಗುತ್ತಿದೆ ಸಿನಿಮಾ
ಸ್ಯಾಂಡಲ್ ವುಡ್ ನಿರ್ದೇಶಕ ನಂದ ಕಿಶೋರ್ ಸದ್ಯ ಪೊಗರು ಸಿನಿಮಾದ ಯಶಸ್ಸಿನ ಸಂತಸಲ್ಲಿದ್ದಾರೆ. ಪೊಗರು ರಿಲೀಸ್ ಆದ ಬೆನ್ನಲ್ಲೇ ನಂದ ಕಿಶೋರ್, ನಟ ಧ್ರುವ ಸರ್ಜಾಗೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದಾರೆ.
Recommended Video
ಈ ನಡುವೆ ಮತ್ತೊಂದು ಸುದ್ದಿ ಬಂದಿದೆ, ನಂದ ಕಿಶೋರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಲ ಬಾರಿಗೆ ನಂದ ಕಿಶೋರ್, ಶಿವಣ್ಣ ಜೊತೆ ಕೈಜೋಡಿಸುತ್ತಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಮುಂದೆ ಓದಿ...

ಡಾ.ರಾಜ್ ಹುಟ್ಟುಹಬ್ಬಕ್ಕೆ ಅಧಿಕೃತ ಘೋಷಣೆ
ಅಂದಹಾಗೆ ಹೊಸ ಕಾಂಬಿನೇಷನ್ ಹೊಸ ಸಿನಿಮಾ ವಿಶೇಷ ದಿನದಂದು ಅಧಿಕೃತವಾಗಿ ಬಹಿರಂಗವಾಗುತ್ತಿದೆ. ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಶಿವಣ್ಣ ಮತ್ತು ನಂದ ಕಿಶೋರ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಎರಡು ಭಾಷೆಯಲ್ಲಿ ಬರ್ತಿದೆ ಸಿನಿಮಾ
ಶಿವಣ್ಣ ಹೊಸ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆ. ಶಿವಣ್ಣ ಸದ್ಯ ಎ ಹರ್ಷ ನಿರ್ದೇಶನದ ವೇದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ಇದಾಗಿದ್ದು, ಇತ್ತೀಚಿಗಷ್ಟೆ ಶೀರ್ಷಿಕೆ ಮತ್ತು ಮೊದಲ ನೋಟ ಬಹಿರಂಗವಾಗಿದೆ.

ದುಬಾರಿ ಸಿನಿಮಾದಲ್ಲಿ ನಂದ ಕಿಶೋರ್ ಬ್ಯುಸಿ
ನಂದ ಕಿಶೋರ್ ಸದ್ಯ ಧ್ರುವ ಸರ್ಜಾಗೆ ''ದುಬಾರಿ'' ಹೆಸರಿನ ಸಿನಿಮಾ ನಿರ್ದೇಶನ ಮಾಡಬೇಕಿದೆ. ಈಗಾಗಲೇ ದುಬಾರಿ ಸಿನಿಮಾದ ಕೆಲಸಗಳು ಪ್ರಾರಂಭವಾಗಿದೆ. ಇಬ್ಬರು ಕಮಿಟ್ ಆಗಿರುವ ಸಿನಿಮಾ ಕೆಲಸಗಳು ಮುಗಿದ ಬಳಿಕ ಶಿವಣ್ಣ ಮತ್ತು ನಂದ ಕಿಶೋರ್ ಅವರ ಹೊಸ ಸಿನಿಮಾ ಪ್ರಾರಂಭವಾಗಲಿದೆ.

ಶಿವಣ್ಣ ಬಳಿ ಇರುವ ಸಿನಿಮಾಗಳು
ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಜೊತೆಗೆ ವಿಜಯ್ ಮಿಲ್ಟನ್ ನಿರ್ದೇಶನದ ಶಿವಪ್ಪ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಬೆನ್ನಲ್ಲೇ ವೇದ ಸಿನಿಮಾ ಕೂಡ ಪ್ರಾರಂಭವಾಗುತ್ತಿದೆ. ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಶಿವಣ್ಣ, ನಂದ ಕಿಶೋರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











