ಕೊಡಗಿನ ಸೌಂದರ್ಯ ಕಟ್ಟಿ ಕೊಟ್ಟ 'ನಂದನವನದೊಳ್ '
ಕನ್ನಡ ನಾಡಿನ ಸೌಂದರ್ಯವನ್ನು ಎಷ್ಟು ಹೇಳಿದರು ಕಡಿಮೆಯೇ. ಅದನ್ನು ಹೇಳಲು ಕವಿಗಳ ಪದಗಳು ಸಾಲುವುದಿಲ್ಲ. ಅದರಲ್ಲಿಯೂ ಕೊಡಗು ಜಿಲ್ಲೆ ಪ್ರಕೃತಿಯಿಂದ ಕರ್ನಾಟಕಕ್ಕೆ ಸಿಕ್ಕ ಕೊಡುಗೆ.
ಈಗ ಕೊಡಗಿನ ಕಥೆ ಹೇಳುವ ಒಂದು ಸಿನಿಮಾ ಕನ್ನಡದಲ್ಲಿ ಬರುತ್ತಿದೆ. ಅದೇ 'ನಂದನವನದೊಳ್'. ಇದು ಕನ್ನಡದ ಯುವ ತಂಡವಾದ ಯಕ್ಷಸಿರಿ ಕ್ರಿಯೇಷನ್ಸ್ ರವರ ಪ್ರಪ್ರಥಮ ಚಿತ್ರವಾಗಿದೆ. ಸದ್ಯ, ಈ ಸಿನಿಮಾದ ಒಂದು ಹಾಡು ಬಿಡುಗಡೆಯಾಗಿದ್ದು, ಜನಪ್ರಿಯತೆ ಗಳಿಸಿದೆ.

ಕಾವೇರಿ ತಾಯಿಯ ಬಗ್ಗೆಯ ಹಾಡು ಇದಾಗಿದೆ. 'ಕವಿಶಿಷ್ಯ' ಶ್ರೀ ಪಂಜೆ ಮಂಗೇಶರಾಯರು ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಶಿವಸತ್ಯ ಅವರ ಸಂಗೀತ ಹಾಗೂ ರೀಟಾ ಉತ್ತಯ್ಯ ಅವರ ಧ್ವನಿ ಹಾಡಿನಲ್ಲಿದೆ. ಹಾಡು ಕೇಳಲು ಇಂಪಾಗಿದೆ.
'ನಂದನವನದೊಳ್ ' ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆ ಕಾಣಲಿದೆ. ಅಂದಹಾಗೆ, ಸದ್ಯ ಬಿಡುಗಡೆಯಾಗಿರುವ ಈ ಸಿನಿಮಾದ ಹಾಡನ್ನು ನೀವು ವೀಕ್ಷಿಸಿ.
English summary
'Nandanavanadol' kannada movie song released.


Click it and Unblock the Notifications