'ನೈಸ್ ರೋಡ್' ಎಂದು ತಮ್ಮ ಸಿನಿಮಾಗೆ ಹೆಸರಿಟ್ಟಿದ್ದಕ್ಕೆ ನಿರ್ಮಾಪಕರಿಗೆ ನೋಟಿಸ್..!

By ಫಿಲ್ಮಿಬೀಟ್ ಡೆಸ್ಕ್

ಗಾಂಧಿನಗರದಲ್ಲಿ ಚಿತ್ರವೊಂದರ ಪ್ರಚಾರಕ್ಕೆ ಗಿಮಿಕ್ ಮಾಡುವವರ ಸಂಖ್ಯೆ ಕಡಿಮೆ ಇಲ್ಲ. ಚಿಕ್ಕ ವಿಚಾರವನ್ನೇ ಎತ್ತಿಕೊಂಡು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ಇಲ್ಲಿ ಹಲವರು ವಿವಾದ ಸೃಷ್ಟಿಸುತ್ತಾರೆ. ಈ ಮೂಲಕ ಜನಸಾಮಾನ್ಯರ ನಡುವೆ ತಮ್ಮ ಚಿತ್ರ ತಲುಪುವಂತೆ ನೋಡಿಕೊಳ್ಳುತ್ತಾರೆ. ಈ ಸಾಲಿಗೆ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ 'ನೈಸ್‌ ರೋಡ್‌'ಸಿನಿಮಾ ಸೇರಿಕೊಳ್ಳುತ್ತಾ, ಇಲ್ಲವಾ ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ ಸದ್ಯಕ್ಕೆ ನೈಸ್ ರೋಡ್ ಸುತ್ತ ಮುತ್ತ ವಿವಾದದ ಹುತ್ತ ಮಾತ್ರ ಎದ್ದಿದೆ.

ಹೌದು, ನೈಸ್ ರೋಡ್.. ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಧರ್ಮ ಅವರ ಖಾಕಿ ಅವತಾರಕ್ಕೆ ಸಾಕ್ಷಿಯಾದ ಮತ್ತೊಂದು ಸಿನಿಮಾ. ಈಗಾಗಲೇ ಸೆನ್ಸಾರ್ ಅಂಗಳದಲ್ಲಿ U/A ಪ್ರಮಾಣ ಪತ್ರವನ್ನೂ ಪಡೆದ ಈ ನೈಸ್ ರೋಡ್ ಕನ್ನಡ ಸಿನಾಮಾಕ್ಕೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ.

Nandi Infrastructure Corridor Enterprises Issues Notice to NICE Road Kannada Movie

ಹೌದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿ, ಚಿತ್ರದ ಚಿತ್ರೀಕರಣವನ್ನೂ ಮಾಡಿ, ನೈಸ್ ರೋಡ್ ಎಂಬ ಹೆಸರಿನಲ್ಲಿಯೇ ಪ್ರಚಾರವನ್ನೂ ಮಾಡಿ, ಸಾಲದಕ್ಕೆ ಸೆನ್ಸಾರ್ ಮಂಡಳಿಯಿಂದ ಅರ್ಹತಾ ಪತ್ರವನ್ನು ಪಡೆದ ಮೇಲೂ ವಿವಾದಕ್ಕೀಡಾಗದ ಈ ಸಿನಿಮಾ ವಿರುದ್ಧ ಈಗ ಏಕಾಏಕಿ ನೈಸ್ ರೋಡ್ ಕಂಪನಿಯವರು ತಿರುಗಿ ಬಿದ್ದಿದ್ದಾರೆ. ನೈಸ್ ರೋಡ್ ಹೆಸರು ಬದಲಾಯಿಸಲೇ ಬೇಕೆಂದು ನೋಟೀಸ್ ನೀಡಿದ್ದಾರೆ.ಕೂಡಲೇ ಚಿತ್ರದ ಶೀರ್ಷಿಕೆ ಬದಲಾಯಿಸಬೇಕು, ಇಲ್ಲವಾದಲ್ಲಿ ಪ್ರಕರಣದ ದಾಖಲು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ನಿರ್ಮಾಪಕ ಗೋಪಾಲ್ ಹಳೆಪಾಳ್ಯ, ಸಿನಿಮಾ ಈಗ ರಿಲೀಸ್ ಹಂತಕ್ಕೆ ಬಂದಿದ್ದು ಏಲ್ಲಾ ಕಡೆ ನೈಸ್ ರೋಡ್ ಎಂಬ ಹೆಸರಿನಿಂದನೆ ಪ್ರಚಾರವಾಗಿದೆ. ನೈಸ್ ರೋಡ್‌ಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಅಂತ ಯು/ಎ ಪ್ರಮಾಣ ಪತ್ರ ನೀಡಿದೆ. ಆದರೆ, ಈಗ ನೈಸ್ ಕಂಪನಿಯವರು ಏಕಾಏಕಿ ಹೆಸರು ಚೇಂಜ್ ಮಾಡಲೇಬೇಕು ಎಂದು ನೋಟೀಸ್ ನೀಡಿದ್ದಾರೆ. ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚುವೆಚ್ಚಗಳಾಗುವುದು ಅಲ್ಲದೆ ತುಂಬಾ ಸಮಯವು ಬೇಕಾಗುತ್ತದೆ ಎಂಬ ಬೇಸರವನ್ನೂ ಹೊರ ಹಾಕಿದ್ದಾರೆ. ಈ ಸಿನಿಮಾಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ.

Nandi Infrastructure Corridor Enterprises Issues Notice to NICE Road Kannada Movie

ಅಂದ್ಹಾಗೇ ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರ ಇದು. ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ ಇಲ್ಲಿ ಧರ್ಮ ಬಣ್ಣ ಹಚ್ಚಿದ್ದಾರೆ. ಇನ್ನೂ ಸೌತ್ ಸೆನ್ಸೇಶನ್ ಜೋತಿ ರೈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಗಲಿದ್ದಾರೆ. ಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X