For Quick Alerts
  ALLOW NOTIFICATIONS  
  For Daily Alerts

  ಅಂತು ನಂದಿತಾಗೆ ಲಕ್ ಬಂತು : ಕನ್ನಡದ ಸ್ಟಾರ್ ನಟನ ಜೊತೆಗೆ ಜಿಂಕೆ ಮರಿ!

  By Naveen
  |
  ಲೂಸ್ ಮಾದ ಜಿಂಕೆ ಮರಿ ವಿಥ್ ಯಶ್...!! | Filmibeat Kannada

  ನಟಿ ನಂದಿತಾ ಶ್ವೇತಾ ಕನ್ನಡಿಗರಿಗೆ ಅಷ್ಟೊಂದು ಹೊಸಬರಲ್ಲ. ಹಾಗಂತ ಆಕೆ ಹೆಚ್ಚು ಚಿರಪರಿಚಿತ ಆಗಿರುವ ನಟಿಯೂ ಅಲ್ಲ. ಅಪ್ಪಟ್ಟ ಕನ್ನಡದ ಹುಡುಗಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ನಂತರ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು.

  ನಟಿ ಆಗುವುದಕ್ಕೆ ಬೇಕಾದ ಎಲ್ಲ ಅರ್ಹತೆಗಳು ಇದ್ದರೂ ಕನ್ನಡದಲ್ಲಿ ಆಕೆಗೆ ಉತ್ತಮ ಕಥೆಯ ಚಿತ್ರಗಳು ಸಿಗಲಿಲ್ಲ. ಲೂಸ್ ಮಾದ ಯೋಗಿ ಅವರ ಮೊದಲ ಸಿನಿಮಾ 'ನಂದ ಲವ್ಸ್ ನಂದಿತಾ'ದಲ್ಲಿ ಜೊತೆಯಾಗಿದ್ದರು. ಅವರ ಜಿಂಕೆಮರಿ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಬಳಿಕ ನಾಲ್ಕು ವರ್ಷ ನಂತರ ಈಕೆ ಕಾಲಿವುಡ್ ಕದ ತಟ್ಟಿದ್ದರು.

  ಏನಿದು? ಯಶ್ ಹೆಸರಿನಲ್ಲಿ ಸುದ್ದಿ ಆಗ್ತಿರೋ ಹೊಸ ವಿವಾದ! ಏನಿದು? ಯಶ್ ಹೆಸರಿನಲ್ಲಿ ಸುದ್ದಿ ಆಗ್ತಿರೋ ಹೊಸ ವಿವಾದ!

  ಕಳೆದ ಆರು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಿನಿಮಾಗಳನ್ನು ಮಾಡಿದ್ದ ನಂದಿತಾ ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ವಿಶೇಷ ಅಂದರೆ, ಕನ್ನಡದ ಸ್ಟಾರ್ ನಟನ ಸಿನಿಮಾದಲ್ಲಿ ನಟಿಸುವ ಅವರು ಅವಕಾಶವನ್ನು ಪಡೆದಿದ್ದಾರೆ. ಮುಂದೆ ಓದಿ...

  ಯಶ್ ಚಿತ್ರದಲ್ಲಿ ನಂದಿತಾ

  ಯಶ್ ಚಿತ್ರದಲ್ಲಿ ನಂದಿತಾ

  ದೊಡ್ಡ ಅವಕಾಶ ಇಲ್ಲ ಎಂಬ ಕಾರಣಕ್ಕೆ ಕಾಲಿವುಡ್ ನಲ್ಲಿ ಕೆರಿಯರ್ ಶುರು ಮಾಡಿದ್ದ ನಂದಿತಾಗೆ ಈಗ ಅದೃಷ್ಟ ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾದಲ್ಲಿ ನಂದಿತಾ ಕಾಣಿಸಿಕೊಳ್ಳುವ ಚಾನ್ಸ್ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ನಂದಿತಾ ದೊಡ್ಡ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

  'ಕಿರಾತಕ 2' ಚಿತ್ರಕ್ಕೆ ನಾಯಕಿ

  'ಕಿರಾತಕ 2' ಚಿತ್ರಕ್ಕೆ ನಾಯಕಿ

  ಯಶ್ ನಟನೆಯ ಹೊಸ ಸಿನಿಮಾ 'ಕಿರಾತಕ 2' ಈಗ ಟೈಟಲ್ ವಿವಾದದ ಮೂಲಕ ಸುದ್ದಿ ಮಾಡಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ನಾಯಕಿಯಾಗಿ ನಂದಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರಕ್ಕೆ ನಂದಿತಾ ಆಯ್ಕೆ ಆಗಿದ್ದಾರೆ.

  10 ವರ್ಷಗಳ ಬಳಿಕ ಕಮ್ ಬ್ಯಾಕ್

  10 ವರ್ಷಗಳ ಬಳಿಕ ಕಮ್ ಬ್ಯಾಕ್

  ನಂದಿತಾ ತಮ್ಮ ಮೊದಲ ಸಿನಿಮಾವನ್ನು ಕನ್ನಡದಲ್ಲಿ 2008ರಲ್ಲಿ ಶುರು ಮಾಡಿದರು. ಆ ಬಳಿಕ 2012 ರಲ್ಲಿ ಮೊದಲ ತಮಿಳು ಸಿನಿಮಾ ಮಾಡಿದರು. ಹಾಗಾಗಿ 10 ವರ್ಷಗಳ ಬಳಿಕ ಅವರು ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. 6 ವರ್ಷದ ಕಾಲಿವುಡ್ ಜರ್ನಿಯ ನಂತರ ಕನ್ನಡದ ಕಡೆ ಮುಖ ಮಾಡಿದ್ದಾರೆ.

  19ನೇ ಸಿನಿಮಾ

  19ನೇ ಸಿನಿಮಾ

  ಸದ್ಯ ನಂದಿತಾ ಖಾತೆಯಲ್ಲಿ 15 ಸಿನಿಮಾಗಳು ಇವೆ. ಈ ಪೈಕಿ ಒಂದು ಕನ್ನಡ, ಒಂದು ತೆಲುಗು ಹಾಗೂ 13 ತಮಿಳು ಚಿತ್ರಗಳು ಸೇರಿಕೊಂಡಿವೆ. ಈ ಚಿತ್ರಗಳ ಜೊತೆಗೆ ಅವರ ಮೂರು ಹೊಸ ಚಿತ್ರಗಳ ಕೆಲಸ ನಡೆಯುತ್ತಿದೆ. 'ಕಿರಾತಕ 2' ಅವರ 19 ನೇ ಸಿನಿಮಾ ಆಗಲಿದೆ.

  ಹಿಂದಿ ಸಿನಿಮಾ ಶುರು ಆಗಿದೆ

  ಹಿಂದಿ ಸಿನಿಮಾ ಶುರು ಆಗಿದೆ

  ನಂದಿತಾ ಈ ವರ್ಷ ಬರೀ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ್ದು, ಅಷ್ಟೆ ಅಲ್ಲ. ಅದರ ಜೊತೆಗೆ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. 'Trio' ಎಂಬ ಬಾಲಿವುಡ್ ಸಿನಿಮಾದಲ್ಲಿ ನಂದಿತಾ ಕಾಣಿಸಿಕೊಳ್ಳುತ್ತಿದ್ದು, ಆ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹೊರಬಂದಿಲ್ಲ.

  ಟೈಟಲ್ ವಿವಾದದಲ್ಲಿ ಕಿರಾತಕ 2'

  ಟೈಟಲ್ ವಿವಾದದಲ್ಲಿ ಕಿರಾತಕ 2'

  ನಂದಿತಾ 'ಕಿರಾತಕ 2' ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ. ಆದರೆ, ಈ ಚಿತ್ರದ ಹೆಸರು ವಿವಾದವನ್ನು ಸೃಷ್ಟಿ ಮಾಡಿದೆ. ನಿರ್ದೇಶಕ ಅನಿಲ್ ಕುಮಾರ್ ತಮ್ಮ ಕಥೆಗೆ 'ಕಿರಾತಕ 2' ಎಂಬ ಶೀರ್ಷಿಕೆ ಸೂಕ್ತ ಎಂಬ ಕಾರಣಕ್ಕೆ ಅದೇ ಹೆಸರನ್ನು ಫಿಕ್ಸ್ ಮಾಡಿದ್ದರು. ಆದರೆ, ಇದೀಗ 'ಕಿರಾತಕ' ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ 'ಕಿರಾತಕ 2' ಅನ್ನು ಯಾವುದೇ ಕಾರಣಕ್ಕೆ ನೀಡುವುದಿಲ್ಲ ಎಂದಿದ್ದಾರೆ.

  English summary
  Actress Nanditha Swetha selected to play lead opposite Rocking Star Yash in 'Kirathaka 2' movie. which will be directing by kannada director Anil Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X