'ನನ್ನ ಗೆಳತಿ ನನ್ನ ಗೆಳತಿ' ಖ್ಯಾತಿಯ ಗಾಯಕ ಮಂಜುನಾಥ ಸಂಗಳದ ನಿಧನ

ಇವತ್ತು ಇದ್ದಂಗೆ ನಾಳೆ ಇರಲ್ಲ.ಈಗಿದ್ದಂಗೆ,ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಉತ್ತರ ಕರ್ನಾಟಕದ ಖ್ಯಾತ ಗಾಯಕ ಮಂಜುನಾಥ್ ಸಂಗಳದ್‌ ಅವರ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ.ಹೌದು,ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಹಾಡಿನ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದ, ಕನ್ನಡಿಗರ ಹೃದಯ ಗೆದ್ದಿದ್ದ ಮಂಜುನಾಥ್ ಸಂಗಳದ ಇಂದು ನಿಧನರಾಗಿದ್ದಾರೆ. ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ವಾಸವಾಗಿದ್ದ ಮಂಜುನಾಥ್‌ ಸಂಗಳದ್ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತ್ತು. ಆ ನಂತರ ಅವರನ್ನು ಕೂಡಲೇ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಮಂಜುನಾಥ್ ಸಂಗಳದ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Nanna Gelathi singer Manjunath Sangalad from Tarihal Dharwad dies of a heart attack

ಮಂಜುನಾಥ್ ಸಂಗಳದ ಅವರ ಅಕಾಲಿಕ ನಿಧನದಿಂದ ಇವರ ಹಾಡುಗಳನ್ನು ಇಷ್ಟಪಡುತ್ತಿದ್ದ ಅಭಿಮಾನಿಗಳು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು,ಮಂಜುನಾಥ್ ಸಂಗಳದ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೆಲವು ದಿನಗಳ ಹಿಂದೆ ಎಪಿಎಂಸಿ ಚುನಾವಣೆಯ ಹಿನ್ನೆಲೆ ಓಡಾಡಿಕೊಂಡಿದ್ದ ಮಂಜುನಾಥ್ ಸಂಗಳದ ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಹಾಡಿನ ಮೂಲಕ ಜನಪ್ರಿಯರಾಗಿದ್ದರು. ಅದಕ್ಕೂ ಮುನ್ನ ಭಜನೆ ಹಾಡುಗಳನ್ನು ಹಾಡುತ್ತಿದ್ದ ಮಂಜುನಾಥ್ ಸಂಗಳದ ನನ್ನ ಗೆಳತಿ ಹಾಡಿನ ಯಶಸ್ವಿನ ನಂತರ ಹಲವು ಹಾಡುಗಳನ್ನು ಹಾಡಿದ್ದರು.

ಇನ್ನು ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಹಾಡು ಬರೆಯಲು ನನ್ನ ಗೆಳೆಯನ ಲವ್ ಸ್ಟೋರಿ ಕಾರಣವೆಂದು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಂಜುನಾಥ್ ಸಂಗಳದ ಹೇಳಿಕೊಂಡಿದ್ದರು. ಊರಿನ ಜಾತ್ರೆಯಲ್ಲಿ ನಡೆದ ಘಟನೆಯಿಂದ ಹಾಡನ್ನು ಬರೆದಿದ್ದಾಗಿ ಹೇಳಿದ್ದ ಮಂಜುನಾಥ್ ಆ ನಂತರ ತಮ್ಮ ಪರವಾನಗಿ ಇಲ್ಲದೇ ಅನೇಕರು ಹಾಡು ಮತ್ತು ಟ್ಯೂನ್ ಕಾಪಿ ಮಾಡಿದ್ದಕ್ಕೆ ಬೇಸರವನ್ನು ಕೂಡ ಮಾಡಿಕೊಂಡಿದ್ದರು. ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

More from Filmibeat

Read more about: death filmibeat news singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X