For Quick Alerts
  ALLOW NOTIFICATIONS  
  For Daily Alerts

  ಕಿಶೋರ್-ಪ್ರಿಯಾಮಣಿ ಚಿತ್ರದ ಡಬ್ಬಿಂಗ್ ಕೆಲಸ ಆರಂಭ

  By Bharath Kumar
  |

  ಸಿನಿಮಾರಂಗದ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿರುವ ನಟ ಕಿಶೋರ್ ಅಭಿನಯದ ಹೊಸ ಸಿನಿಮಾ ಡಬ್ಬಿಂಗ್ ಆರಂಭಿಸಿದೆ. ಕಿಶೋರ್ ಮತ್ತು ಪ್ರಿಯಾಮಣಿ ಅಭಿನಯದ 'ನನ್ನ ಪ್ರಕಾರ' ಚಿತ್ರದ ಚಿತ್ರೀಕರಣ ಮುಗಿಸಿದೆ.

  ಬೆಂಗಳೂರು, ಮೈಸೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯ, ರೇಣು ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

  ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ 'ಹುಲಿರಾಯ' ಖ್ಯಾತಿಯ ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನ್ವರ್ಷಿ, ವಿನಯ್ ಬಾಲಾಜಿ, ಅವರ ಸಂಭಾಷಣೆ ಬರೆದಿದ್ದಾರೆ.

  ಈಗಾಗಲೇ 2 ಕಿರು ಚಿತ್ರಗಳನ್ನು ನಿರ್ದೇಶಿಸಿರುವ ವಿನಯ್ ಬಾಲಾಜಿ ಬಾಂಬೆಯಲ್ಲಿ 3 ವರ್ಷ ವಿ.ಎಫ್.ಎಕ್ಸ್.ನಲ್ಲಿ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನದ 1 ನಿಮಿಷದ ಕಿರುಚಿತ್ರಕ್ಕೆ ಬೆಸ್ಟ್ ಫಿಲಂ ಅವಾರ್ಡ್ ಕೂಡ ಬಂದಿದೆ.

  ಕಿಶೋರ್, ಪ್ರಿಯಾಮಣಿ ಜೊತೆಯಲ್ಲಿ ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಇನ್ನುಳಿದಂತೆ ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣವಾಗಿತ್ತಿರುವ ಈ ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್ - ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವಿನೋದ್ ರಾವ್ ಅವರ ಕಲಾ ನಿರ್ದೇಶನ ಹಾಗೂ ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಿಯಪ್ಪ ಹಾಡುಗಳನ್ನ ಬರೆದಿದ್ದಾರೆ.

  English summary
  kannada actress priyamani and kishore starrer nanna prakara movie shooting complete and starts dubbing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X